newsfirstkannada.com

ಪಂಜಾಬ್​​ ವಿರುದ್ಧ 60 ರನ್​ನಿಂದ ಗೆದ್ದು ಬೀಗಿದ ಬೆಂಗಳೂರು; ಆರ್​​​ಸಿಬಿ ಪ್ಲೇ ಆಫ್​​ ಕನಸು ಜೀವಂತ!

Share :

Published May 9, 2024 at 11:46pm

    ಬಹುನಿರೀಕ್ಷಿತ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್

    ​​ಇಂದು ಆರ್​​ಸಿಬಿ, ಪಂಜಾಬ್​​ ಕಿಂಗ್ಸ್​ ನಡುವೆ ರೋಚಕ ಪಂದ್ಯ..!

    ಪಂಜಾಬ್​ ವಿರುದ್ಧ ಗೆದ್ದ ಆರ್​​ಸಿಬಿ ಪ್ಲೇ ಆಫ್​ ಕನಸು ಜೀವಂತ

ಇಂದು ನಡೆದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗೆದ್ದು ಬೀಗಿದೆ. ಬರೋಬ್ಬರಿ 60 ರನ್​ಗಳಿಂದ ಗೆದ್ದು ಪ್ಲೇ ಆಫ್​​ ಕನಸು ಜೀವಂತವಾಗಿ ಇರಿಸಿಕೊಂಡಿದೆ.

ಆರ್​​ಸಿಬಿ ನೀಡಿದ 242 ರನ್​ಗಳ ಬೃಹತ್​ ಟಾರ್ಗೆಟ್​ ಬೆನ್ನತ್ತಿದ ಪಂಜಾಬ್​ ಪರ ಓಪನರ್​ ಆಗಿ ಬಂದ ಜಾನಿ ಬೇರ್​ಸ್ಟೋ 16 ಬಾಲ್​ನಲ್ಲಿ 1 ಸಿಕ್ಸರ್​, 4 ಫೋರ್​ ಸಮೇತ 27 ರನ್​ ಸಿಡಿಸಿದ್ರು. ಇವರಿಗೆ ಸಾಥ್​ ನೀಡಿದ ರಿಲೀ ರೋಸೋ 27 ಬಾಲ್​ನಲ್ಲಿ 3 ಭರ್ಜರಿ ಸಿಕ್ಸರ್​​, 9 ಫೋರ್​ ಸಮೇತ 61 ರನ್​​ ಚಚ್ಚಿದ್ರು. ಶಶಾಂಕ್​ 37, ಸ್ಯಾಮ್​ ಕರನ್​​ 22 ರನ್​ ಗಳಿಸಿದ್ರು. ಪಂಜಾಬ್​​ 17 ಓವರ್​ನಲ್ಲಿ 181 ರನ್​ಗಳಿಗೆ ಆಲೌಟ್​ ಆಗಿದೆ.

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಆರ್​ಸಿಬಿ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ಫಾಫ್​​ ಡುಪ್ಲೆಸಿಸ್​​ ಮತ್ತೆ ಕೈ ಕೊಟ್ಟರು. 7 ಬಾಲ್​​ನಲ್ಲಿ 2 ಫೋರ್​ ಸಮೇತ ಕೇವಲ 9 ರನ್​ ಗಳಿಸಿ ಔಟಾದ್ರು. ಕನ್ನಡಿಗ ಕಾವೇರಪ್ಪ ಬೌಲಿಂಗ್​​ನಲ್ಲಿ ವಿಕೆಟ್​ ಒಪ್ಪಿಸಿ ಮೈದಾನದಿಂದ ಹೊರ ನಡೆದರು.

ಫಾಫ್​​, ವಿಲ್​ ಜಾಕ್ಸ್​ ಔಟಾದ ಬಳಿಕ ಕ್ರೀಸ್​ಗೆ ಬಂದ ರಜತ್​ ಪಾಟೀದಾರ್​ ಆರ್​​ಸಿಬಿ ಪರ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಎದುರಾಳಿ ಬೌಲರ್​ ಯಾರು ಎಂದು ನೋಡದೆ ಹಿಗ್ಗಾಮುಗ್ಗಾ ಚಚ್ಚಿದ್ರು. ಕೇವಲ 21 ಬಾಲ್​ನಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿದ್ರು. ಅದರಲ್ಲೂ 6 ಭರ್ಜರಿ ಸಿಕ್ಸರ್​​, 3 ಫೋರ್​ ಚಚ್ಚಿದ್ರು. ಇವರ ಬ್ಯಾಟಿಂಗ್​​​ ಸ್ಟ್ರೈಕ್​ ರೇಟ್​​ 250ಕ್ಕೂ ಹೆಚ್ಚಿತ್ತು.

ಜತೆಗೆ ಆರ್​​ಸಿಬಿ ಮಾಜಿ ಕ್ಯಾಪ್ಟನ್​​​ ವಿರಾಟ್​ ಕೊಹ್ಲಿ ಕೂಡ ಅಬ್ಬರದ ಬ್ಯಾಟಿಂಗ್​ ಮಾಡಿದ್ರು. ಕೇವಲ 47 ಬಾಲ್​​ನಲ್ಲಿ 6 ಸಿಕ್ಸರ್​​, 7 ಫೋರ್​​ನೊಂದಿಗೆ 92 ರನ್​ ಸಿಡಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 195ಕ್ಕೂ ಹೆಚ್ಚಿತ್ತು. ಕ್ಯಾಮೆರಾನ್​ ಗ್ರೀನ್​​ 27 ಬಾಲ್​ನಲ್ಲಿ 1 ಸಿಕ್ಸರ್​​, 5 ಫೋರ್​ ಸಮೇತ 46 ಮತ್ತ ದಿನೇಶ್​ ಕಾರ್ತಿಕ್​ 7 ಬಾಲ್​ನಲ್ಲಿ 2 ಸಿಕ್ಸರ್​​, 1 ಫೋರ್​ನೊಂದಿಗೆ 18 ರನ್​ ಚಚ್ಚಿದ್ರು. ಇದರ ಪರಿಣಾಮ ಆರ್​ಸಿಬಿ ನಿಗದಿತ 20 ಓವರ್​​ನಲ್ಲಿ 7 ವಿಕೆಟ್​​ ನಷ್ಟಕ್ಕೆ 241 ರನ್​ ಕಲೆ ಹಾಕಿತು.

ಇದನ್ನೂ ಓದಿ: ವಿರಾಟ್​​ ಕೊಹ್ಲಿ ಭರ್ಜರಿ ಬ್ಯಾಟಿಂಗ್​​.. ಪಂಜಾಬ್​​ಗೆ ಆರ್​​ಸಿಬಿ ಬರೋಬ್ಬರಿ 242 ರನ್​ ಬಿಗ್​ ಟಾರ್ಗೆಟ್​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪಂಜಾಬ್​​ ವಿರುದ್ಧ 60 ರನ್​ನಿಂದ ಗೆದ್ದು ಬೀಗಿದ ಬೆಂಗಳೂರು; ಆರ್​​​ಸಿಬಿ ಪ್ಲೇ ಆಫ್​​ ಕನಸು ಜೀವಂತ!

https://newsfirstlive.com/wp-content/uploads/2024/05/RCB-won-match.jpg

Load More