RCB ನಿರ್ಧಾರ ಇದೇನಾ..? ಮ್ಯಾಕ್ಸ್​ವೆಲ್​ರನ್ನ ಟಾರ್ಗೆಟ್ ಮಾಡಿದ 3 ಐಪಿಎಲ್​ ಟೀಮ್​ಗಳು!

author-image
Bheemappa
Updated On
ಮೂವರು ಸ್ಟಾರ್ ಆಲ್​ರೌಂಡರ್​​ ಖರೀದಿಗೆ RCB ಬಿಗ್ ಟಾರ್ಗೆಟ್; ಇವರು ಬಂದ್ರೆ ಕಪ್ ಪಕ್ಕಾ..!
Advertisment
  • 2025ಕ್ಕೆ ಸ್ಟ್ರಾಂಗ್ ಟೀಮ್ ಕಟ್ಟಲು ಆರ್​​ಸಿಬಿ ಮುಂದಾಗಿದೆಯಾ?
  • RCB ಸ್ಟಾರ್​​ ಪ್ಲೇಯರ್ ಮೇಲೆ ಕಣ್ಣು ಹಾಕಿರುವ ತಂಡಗಳು ಇವು
  • ಈ ಬಾರಿ ಆಲ್​ರೌಂಡರ್​ ಆಟಗಾರನನ್ನ ಕೈ ಬಿಡುತ್ತಾ ಆರ್​ಸಿಬಿ..?

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್ ಆಲ್​ರೌಂಡರ್​ ಮ್ಯಾಕ್ಸ್​ವೆಲ್​ರನ್ನ ಫ್ರಾಂಚೈಸಿ ಕೈ ಬಿಡುತ್ತ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ 2024ರ ಐಪಿಎಲ್​ನಲ್ಲಿ ಮ್ಯಾಕ್ಸ್​ವೆಲ್ ಸಾಧನೆ ಅಷ್ಟೇನೂ ಉತ್ತಮವಾಗಿರಲಿಲ್ಲ. ಅಲ್ಲದೇ ಯಂಗ್ ಪ್ಲೇಯರ್​ಗಳನ್ನ ಟೀಮ್​ಗೆ ತಗೊಂಡು ಕಪ್​ ಗೆಲ್ಲುವ ನಿರೀಕ್ಷೆಯಲ್ಲಿರೋ ಆರ್​ಸಿಬಿ ಮುಂದೆ ಸದ್ಯ ಬಿಗ್ ಚಾಲೆಂಜ್​ಗಳಿವೆ. ಇದರ ಬೆನ್ನಲ್ಲೇ 3 ತಂಡಗಳು ಮ್ಯಾಕ್ಸ್​ವೆಲ್​ರನ್ನ ಟಾರ್ಗೆಟ್ ಮಾಡಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಕೊಹ್ಲಿ ಲಕ್ ಕಂಪ್ಲೀಟ್ ಚೇಂಜ್​.. 16 ವರ್ಷಗಳ ಕರಿಯರ್​ನಲ್ಲಿ ವಿರಾಟ್​ಗೆ ಇದು ಅನ್​ಲಕ್ಕಿ ಇಯರ್; ಯಾಕೆ?

ಸ್ಟಾರ್​ ಆಲ್​ರೌಂಡರ್ ಮ್ಯಾಕ್ಸ್​ವೆಲ್​ ಬ್ಯಾಟಿಂಗ್​​​ನಲ್ಲಿ ಅಬ್ಬರಿಸಲು ನಿಂತರೇ ರನ್​ಗಳ ಮಳೆಗೈಯ್ಯುತ್ತಾರೆ. ಆದರೆ ಅದೇನೋ ಗೊತ್ತಿಲ್ಲ ಕಳೆದ ಐಪಿಎಲ್​​ನಲ್ಲಿ 10 ಪಂದ್ಯಗಳಿಂದ ಕೇವಲ 52 ರನ್​ ಗಳಿಸಿ, 6 ವಿಕೆಟ್​ಗಳನ್ನ ಮಾತ್ರ ಪಡೆದುಕೊಂಡಿದ್ದರು. ಆರ್​ಸಿಬಿ ಕೀ ಪ್ಲೇಯರ್ ಆಗಿದ್ದ ಮ್ಯಾಕ್ಸ್​ವೆಲ್​ರಿಂದ ತಂಡಕ್ಕೆ ಭಾರೀ ಹೊಡೆತ ಬಿದ್ದಿತ್ತು. ಹೀಗಾಗಿ ಸ್ಟ್ರಾಂಗ್​ ಟೀಮ್ ಕಟ್ಟುವುದಕ್ಕಾಗಿ ಈ ಸಲ ಫ್ರಾಂಚೈಸಿ ಮ್ಯಾಕ್ಸಿರನ್ನ ಕೈ ಬಿಡುವ ನಿರ್ಧಾರ ಮಾಡುತ್ತಾ ಎನ್ನುವುದು ಕಾದು ನೋಡಬೇಕಿದೆ.

ಇದನ್ನೂ ಓದಿ: KL ರಾಹುಲ್ ಹೇಳಿದ್ದೇನು.. ಕೋಚ್ ಹುದ್ದೆಯಿಂದ ಮಾಜಿ ಕ್ರಿಕೆಟರ್ ಹಿಂದೆ ಸರಿಯಲು ಕನ್ನಡಿಗ ಕಾರಣನಾ?

publive-image

ಯಾವ್ಯಾವ ತಂಡಗಳು ಖರೀದಿಗೆ ಮುಂದಾಗಿವೆ..?

ಒಂದು ವೇಳೆ ಆರ್​ಸಿಬಿ ಕೈ ಬಿಟ್ಟರೂ 2025ರ ಆಕ್ಷನ್​​ನಲ್ಲಿ 3 ತಂಡಗಳು ಮ್ಯಾಕ್ಸ್​ವೆಲ್​ರನ್ನ ಖರೀದಿ ಮಾಡಲು ಟಾರ್ಗೆಟ್ ಮಾಡಿವೆ ಎನ್ನಲಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ಲೇಯರ್​ಗಾಗಿ ಹುಡುಕುತ್ತಿರುವ ಚೆನ್ನೈ ಫ್ರಾಂಚೈಸಿ ಮ್ಯಾಕ್ಸ್​ವೆಲ್​ರನ್ನ ತಮ್ಮ ಟೀಮ್​ಗೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ ಎನ್ನುವ ಮಾತು ಕೇಳಿ ಬಂದಿವೆ. ಗುಜರಾತ್​ ಟೈಟನ್ಸ್ ಕೂಡ ಮ್ಯಾಕ್ಸಿ ಮೇಲೆ ಕಣ್ಣು ಹಾಕಿದೆ. ಏಕೆಂದರೆ ಮೋದಿ ಸ್ಟೇಡಿಯಂನಲ್ಲಿ ಮ್ಯಾಕ್ಸಿ ಬ್ಯಾಟಿಂಗ್ ಅಬ್ಬರ ಬೇರೆನೇ ಇರುತ್ತೆ. ಜೊತೆಗೆ ಫಿನಿಶಿಂಗ್​​ ಮಾಡೋ ಒಬ್ಬ ಬಲಿಷ್ಠ ಆಟಗಾರನಿಗಾಗಿ ಗುಜರಾತ್ ಎದುರು ನೋಡ್ತಿದೆ. ಇನ್ನು ಪಜಾಬ್​ ಕಿಂಗ್ಸ್​ ಸಹ ಮ್ಯಾಕ್ಸಿರನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮುಂದಾಗಿದೆ. ಏಕೆಂದರೆ ಟೀಮ್​ನಲ್ಲಿ ಅಗ್ರೆಸ್ಸಿವ್ ಆಗಿ ಬ್ಯಾಟ್ ಬೀಸೋ ಪ್ಲೇಯರ್​ ಬೇಕಾಗಿದ್ದರಿಂದ ಮ್ಯಾಕ್ಸ್​ವೆಲ್​ಗೆ ಗಾಳ ಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment