/newsfirstlive-kannada/media/post_attachments/wp-content/uploads/2025/06/RCB-stampede-10-Photos.jpg)
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದ ಕರಾಳ ದಿನವನ್ನ ಯಾರು ಮರೆಯಲು ಸಾಧ್ಯವಿಲ್ಲ. 11 ಮಂದಿಯನ್ನು ಕಳೆದುಕೊಂಡವರ ಮನೆಯಲ್ಲಿ ಇನ್ನೂ ಕಣ್ಣೀರು ನಿಂತಿಲ್ಲ. ಸರ್ಕಾರದ ಪರಿಹಾರ ಕುಟುಂಬಸ್ಥರ ನೋವು, ಸಂಕಟವನ್ನು ಕಡಿಮೆ ಮಾಡದಿದ್ದರೂ ಒಂದು ಸಾಂತ್ವನ ಹೇಳಲು ಸಾಧ್ಯವಾಗಬಹುದು ಅಷ್ಟೇ.
ಜೂನ್ 4ರ ಕಾಲ್ತುಳಿತ ದುರಂತದ ಬಳಿಕ ರಾಜ್ಯ ಸರ್ಕಾರದಂತೆ RCB ಮ್ಯಾನೇಜ್‌ಮೆಂಟ್ ಮೃತಪಟ್ಟವರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿತ್ತು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಕೂಡ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಈ ಪರಿಹಾರ ಘೋಷಣೆ ಮಾಡಿದ ಬಳಿಕ ಆರ್‌ಸಿಬಿ ಹಾಗೂ KSCA ಮೌನಕ್ಕೆ ಶರಣಾಗಿದೆ.
RCB ಹಾಗೂ KSCA ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವ ಬಗ್ಗೆ ಯಾವುದೇ ಪ್ರಕ್ರಿಯೆಯನ್ನು ಆರಂಭಿಸಿಲ್ಲ. ಕಾಲ್ತುಳಿತಕ್ಕೆ ಕೇಸ್ ದಾಖಲಾದ ಬಳಿಕ ಆರ್‌ಸಿಬಿ ಮಾರ್ಕೆಂಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಅವರನ್ನು ಅರೆಸ್ಟ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಪರಿಹಾರದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
RCB ಮ್ಯಾನೇಜ್‌ಮೆಂಟ್‌ನಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಕೂಡ ಪರಿಹಾರ ನೀಡುವ ವಿಚಾರಕ್ಕೆ ಗೊಂದಲ ಏರ್ಪಟ್ಟಿದೆ. KSCA ಕಾರ್ಯದರ್ಶಿಗಳು ರಾಜೀನಾಮೆ ನೀಡಿದ್ದಾರೆ. ಸಿಐಡಿ ತನಿಖೆ, ಡಿಸಿ ತನಿಖೆ, ಆಯೋಗದ ತನಿಖೆಯಲ್ಲೇ ಮಗ್ನರಾಗಿರುವ ಕೆಎಸ್‌ಸಿಎ ಹೊಸದಾಗಿ ಕಾರ್ಯದರ್ಶಿ ಹಾಗೂ ಖಜಾಂಚಿಯನ್ನು ನೇಮಕ ಮಾಡಬೇಕು. ಅದಾದ ಬಳಿಕ ಪರಿಹಾರಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ