ಆರ್ಸಿಬಿ ಫ್ಯಾನ್ಸ್ ಮನದಲ್ಲಿ ಹೆಚ್ಚಾಯ್ತು ತಳಮಳ
ರೆಡ್ ಆರ್ಮಿಯ ರಿಟೈನ್ ಆಟಗಾರರ ಲಿಸ್ಟ್ ರೆಡಿ
ವಿರಾಟ್ ಕೊಹ್ಲಿ ಜೊತೆ ನಾಲ್ವರಿಗೆ ಹಾಕಲಿದೆ ಮಣೆ..!
2025ನೇ ಐಪಿಎಲ್ ಮೆಗಾ ಆಕ್ಷನ್ ಆರಂಭಕ್ಕೆ ಕೆಲ ತಿಂಗಳಷ್ಟೇ ಬಾಕಿ ಇದೆ. ಅದಕ್ಕೂ ಮುನ್ನ ಯಾವ ಫ್ರಾಂಚೈಸಿ, ಯಾರನ್ನ ರಿಟೇನ್ ಮಾಡಿಕೊಳ್ಳುತ್ತೆ? ಯಾರನ್ನೆಲ್ಲಾ ರಿಲೀಸ್ ಮಾಡುತ್ತೆ ಅನ್ನೋ ಕುತೂಹಲ ಗರಿಗೆದರಿದೆ. ಅದರಲ್ಲೂ ಆರ್ಸಿಬಿ ಯಾರನ್ನು ಉಳಿಸಿಕೊಳ್ಳುತ್ತೆ ಅನ್ನೋ EXCITEMENT ಫ್ಯಾನ್ಸ್ ಹಾರ್ಟ್ ಬೀಟ್ ಡಬಲ್ ಮಾಡಿದೆ.
18ನೇ ಐಪಿಎಲ್ ಸೀಸನ್ಗೆ ಐಪಿಎಲ್ ಫ್ರಾಂಚೈಸಿಗಳ ಸಿದ್ಧತೆ ಜೋರಾಗಿದೆ. ಈಗಾಗಲೇ ನ್ಯೂ ಸಂಪೋರ್ಟಿಂಗ್ ಸ್ಟಾಫ್ಗಳನ್ನ ನೇಮಿಸಿಕೊಂಡಿರುವ ಫ್ರಾಂಚೈಸಿಗಳು, ಸೀಸನ್-18ರ ಐಪಿಎಲ್ನಲ್ಲಿ ಹೊಸ ರೂಪದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಇದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಹೊರತಾಗಿಲ್ಲ.
ಇದನ್ನೂ ಓದಿ:2024ರ IPLನಲ್ಲಿ ಅತ್ಯಧಿಕ ಸಂಭಾವನೆ ಪಡೆದಿದ್ದು ಯಾರು? ಭಾರತದವರೇ ಆದ್ರೆ ಕೊಹ್ಲಿ, ರೋಹಿತ್ ಅಲ್ಲ!
ಐಪಿಎಲ್ ಗೌರ್ನಿಂಗ್ ಕೌನ್ಸಿಲ್ ಸಭೆ ಕರೆದಿದ್ದು, ರಿಟೈನ್ ಆಟಗಾರರ ಸಂಖ್ಯೆಯನ್ನ ಐದಕ್ಕೇರಿಸಿದೆ. ಜೊತೆಗೆ ಒಂದು ರೈಟ್ ಟು ಮ್ಯಾಚ್ ಕಾರ್ಡ್ ಬಳಕೆಗೆ ಅಸ್ತು ಎಂದಿರುವ ಐಪಿಎಲ್ ಕೌನ್ಸಿಲ್, ಇನ್ನಷ್ಟೇ ಅಧಿಕೃತ ಘೋಷಣೆ ಮಾಡಿದೆ. ಈ ಬೆನ್ನಲ್ಲೇ ಆರ್ಸಿಬಿ ಯಾರನ್ನ ರಿಲೀಸ್ ಮಾಡುತ್ತೆ. ಯಾರನ್ನ ಉಳಿಸಿಕೊಳ್ಳುತ್ತೆ ಎಂಬ ಲೆಕ್ಕಾಚಾರಗಳು ಜೋರಾಗಿದೆ.
ವಿರಾಟ್ ಕೊಹ್ಲಿ (17 ಕೋಟಿ), ಮ್ಯಾಕ್ಸ್ವೆಲ್ (14 ಕೋಟಿ), ಮೊಹಮ್ಮದ್ ಸಿರಾಜ್ (11 ಕೋಟಿ), ವಿಲ್ ಜಾಕ್ಸ್ (8 ಕೋಟಿ), ರಜತ್ ಪಟಿದಾರ್ (5 ಕೋಟಿ) ಈ ಸ್ಟಾರ್ ಆಟಗಾರ ಉಳಿಸಿಕೊಳ್ಳಲು ಮುಂದಾಗಿದೆ. ಈ ರಿಟೈನ್ ಲೆಕ್ಕಚಾರದ ಹಿಂದೆ ರೆಡ್ ಆರ್ಮಿಯ ಮೆಗಾ ಸ್ಟ್ರಾಟರ್ಜಿ ಜೊತೆಗೆ ಕಾರಣಗಳೂ ಅಡಗಿದೆ. ಮೊದಲ ಮೂರು ಆಯ್ಕೆ ಆಟಗಾರರಿಗೆ ಹಣದಲ್ಲೂ ಹೆಚ್ಚಳ ಮಾಡೋ ಚಿಂತನೆಯಲ್ಲಿದೆ.
ವೈಫಲ್ಯದ ನಡುವೆಯೂ ಮ್ಯಾಕ್ಸಿಗೆ ಮಣೆ ಹಾಕುತ್ತಾ?
ಆರ್ಸಿಬಿಯ 2ನೇ ರಿಟೈನ್ ವಿಲ್ ಜಾಕ್ಸ್ ಆಗಿರ್ತಾರೆ ಅನ್ನೋದು ಎಲ್ಲರ ಲೆಕ್ಕಚಾರ. ಬಿಗ್ ಹಿಟ್ಟರ್ ವಿಲ್ ಜಾಕ್ಸ್ ಬದಲಿಗೆ 2ನೇ ಆಟಗಾರನಾಗಿ ಮ್ಯಾಕ್ಸಿಗೆ ಮಣೆ ಹಾಕುವ ಚಿಂತನೆಯಲ್ಲಿದೆ. ಸಿಂಗಲ್ ಹ್ಯಾಂಡೆಡ್ಲಿ ಮ್ಯಾಚ್ ಗೆಲ್ಲಿಸೋ ಮ್ಯಾಕ್ಸಿ, ಕಳೆದ ಸೀಸನ್ನಲ್ಲಿ ಸೈಲೆಂಟ್ ಆಗಿದ್ದರು. ಹಿಂದಿನ 2 ಸೀಸನ್ಗಳಲ್ಲಿ ರಿಯಲ್ ಗೇಮ್ ಚೇಂಜರ್ ಆಗಿದ್ರು. ಈ ಕಾರಣಕ್ಕೆ ತಂಡದಲ್ಲಿಟ್ಟುಕೊಳ್ಳುವ ಲೆಕ್ಕಚಾರ ಆರ್ಸಿಬಿ ಮುಂದಿದೆ.
ಇದನ್ನೂ ಓದಿ:6 ಆಟಗಾರರ ರಿಟೈನ್ಗೆ ಅನುಮತಿ.. ಧೋನಿಗೂ ಗುಡ್ನ್ಯೂಸ್ ಕೊಟ್ಟ ಬಿಸಿಸಿಐ..!
ಮೊಹಮ್ಮದ್ ಸಿರಾಜ್ ಕೈ ಹಿಡಿಯಲಿದೆ ಆರ್ಸಿಬಿ
ಕಳೆದ ಕೆಲ ವರ್ಷಗಳಿಂದ ಆರ್ಸಿಬಿಯ ಫ್ರಂಟ್ ಲೈನ್ ಬೌಲರ್ ಅನ್ನೋದ್ರಲ್ಲೇ ಡೌಟೇ ಇಲ್ಲ. ಆರ್ಸಿಬಿಯಲ್ಲಿರುವ ಏಕೈಕ ಅನುಭವಿ ಹಾಗೂ ಸ್ಟಾರ್ ಬೌಲರ್ ಸಿರಾಜ್. ಘಾತುಕ ದಾಳಿ ನಡೆಸಬಲ್ಲ ಸಿರಾಜ್, ಯಾವುದೇ ಕ್ಷಣದಲ್ಲಾದರೂ ಗೇಮ್ ಚೇಂಜರ್ ಆಗಬಲ್ಲರು. ಜೊತೆಗೆ ವಿರಾಟ್ ಕೊಹ್ಲಿಯ ಆಪ್ತ. ಹೀಗಾಗಿ ಸಿರಾಜ್ ರಿಟೈನ್ ಆಗೋದು ಬಹುತೇಕ ಫಿಕ್ಸ್ ಎಂದು ಹೇಳಲಾಗ್ತಿದೆ.
ವಿಲ್ ಜಾಕ್ಸ್ ಬಗ್ಗೆಯೂ ಆರ್ಸಿಬಿಗೆ ಇದೆ ಒಲವು
ವಿಲ್ ಜಾಕ್ಸ್.. ದಿ ಬಿಗ್ ಮ್ಯಾಚ್ ವಿನ್ನರ್ ಪ್ಲೇಯರ್. ಈತ ಕ್ರೀಸ್ನಲ್ಲಿದ್ರೆ, ಸಿಕ್ಸರ್ಗಳ ಸುರಿಮಳೆ ಫಿಕ್ಸ್.. ಎಂಥಹ ಘಟಾನುಘಟಿ ಬೌಲರ್ಗಳನ್ನಾಗಲಿ ಸುಲಭವಾಗಿ ಡೀಲ್ ಮಾಡುವ ಈತ, ಕಳೆದ ಸೀಸನ್ನಲ್ಲಿ ಸೃಷ್ಟಿಸಿದ್ದ ವಿಧ್ವಂಸ ಕಣ್ಮುಂದೆಯೇ ಇದೆ. ಹೀಗಾಗಿ ಈ ರಣವಿಕ್ರಮನ ತಂಡದಲ್ಲಿ ಉಳಿಸಿಕೊಳ್ಳಲು ಆರ್ಸಿಬಿ ಆಸಕ್ತಿ ತೋರಿದೆ.
ಇದನ್ನೂ ಓದಿ:ಬಾಂಗ್ಲಾ ವಿರುದ್ಧ ಟಿ20 ಸರಣಿಗೆ ಬಲಿಷ್ಠ ಟೀಮ್ ಇಂಡಿಯಾ ಪ್ರಕಟ; ಸ್ಟಾರ್ ಆಟಗಾರರೇ ಔಟ್
ರಜತ್ ಪಟಿದಾರ್ಗೆ ಬಂಪರ್ ಪಕ್ಕಾ
ರಜತ್ ಪಟಿದಾರ್, ಆರ್ಸಿಬಿಯಲ್ಲೇ ಉಳಿಯೋ ಚಾನ್ಸ್ ಇದೆ. ಮಿಡಲ್ ಆರ್ಡರ್ನ ಬಲವಾಗಿರುವ ಪಟಿದಾರ್, ಕ್ರೂಶಿಯಲ್ ಮ್ಯಾಚ್ಗಳಲ್ಲಿ ತಂಡದ ಕೈ ಹಿಡಿದಿದ್ದಾರೆ. ಆರ್ಸಿಬಿಯ ಭವಿಷ್ಯದ ನಾಯಕನಾಗುವ ಲಕ್ಷಣಗಳಿವೆ. ಈ ಕಾರಣಕ್ಕೆ ಈತನ ಉಳಿಸಿಕೊಳ್ಳುವುದು ಗ್ಯಾರಂಟಿ. ಐವರನ್ನ ರಿಟೈನ್ ಮಾಡಿಕೊಳ್ಳಲಿರುವ ಆರ್ಸಿಬಿ, ಯಾರಿಗೆ ಶಾಕ್ ಕೊಡುತ್ತೋ..? ಯಾರಿಗೆ ಸರ್ಪ್ರೈಸ್ ಗಿಫ್ಟ್ ನೀಡುತ್ತೋ ಎಂಬುವುದರ ಜೊತೆಗೆ ಮೆಗಾ ಹರಾಜಿನಲ್ಲಿ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಯಾರನ್ನ ಖರೀದಿಸುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್