/newsfirstlive-kannada/media/post_attachments/wp-content/uploads/2024/05/RCB-41.jpg)
ಐಪಿಎಲ್-2024ರ ಜರ್ನಿ ಮುಗಿಸಿರುವ ಆರ್​ಸಿಬಿ 2025ರಲ್ಲಿ ನಡೆಯುವ ಸೀಸನ್‌ಗಾಗಿ ಪ್ಲಾನ್ ರೂಪಿಸುತ್ತಿದೆ. ಈ ವರ್ಷ ಪ್ಲೇ-ಆಫ್​​ಗೆ ಪ್ರವೇಶ ಮಾಡಿದ್ದರೂ ಟ್ರೋಫಿ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ. ಹೇಗಾದರೂ ಮಾಡಿ ಮುಂದಿನ ವರ್ಷ ಟ್ರೋಫಿ ಗೆಲ್ಲುವ ಇರಾದೆಯೊಂದಿಗೆ ಯೋಜನೆ ರೂಪಿಸುತ್ತಿದೆ.
ಐಪಿಎಲ್ ಫೈನಲ್ ಮುಗಿಯುತ್ತ ಬರುತ್ತಿದ್ದಂತೆಯೇ ಸೋತಿರುವ ಫ್ರಾಂಚೈಸಿಗಳ ಚಿತ್ತ ಮೆಗಾ ಹರಾಜಿನತ್ತ ನೆಟ್ಟಿದೆ. ಐಪಿಎಲ್ 2025 ಸೀಸನ್​ಗೂ ಮೊದಲು ಫ್ರಾಂಚೈಸಿಗಳು ತಮ್ಮ ತಂಡವನ್ನು ಪುನರ್​​​ ರಚನೆ ಮಾಡಲಿವೆ. ಐಪಿಎಲ್ ನಿಯಮದ ಪ್ರಕಾರ ಒಂದು ಫ್ರಾಂಚೈಸಿ ಗರಿಷ್ಠ 4 ಆಟಗಾರರನ್ನು ಉಳಿಸಿಕೊಂಡು ಮಿಕ್ಕವರನ್ನು ಕೈಬಿಡಬೇಕು. ಮತ್ತೊಂದು ಕಡೆ ಗರಿಷ್ಠ 8 ಆಟಗಾರರನ್ನು ಉಳಿಸಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿದೆ. ಫ್ರಾಂಚೈಸಿಗಳು ಬಿಸಿಸಿಐ ಜತೆ ಮಾತುಕತೆ ನಡೆಸುತ್ತಿರುವುದರಿಂದ ಅದು ಇನ್ನೂ ದೃಢಪಟ್ಟಿಲ್ಲ.
ಅಂತೆಯೇ ಮೊದಲ IPL ಪ್ರಶಸ್ತಿ ಹುಡುಕಾಟದಲ್ಲಿರುವ ಆರ್​ಸಿಬಿ ತಂಡವನ್ನು ಬಲಪಡಿಸುವ ಸಾಧ್ಯತೆ ಇದೆ. ಒಂದು ವೇಳೆ ಆರ್​ಸಿಬಿ ನಾಲ್ವರು ಆಟಗಾರರನ್ನು ಉಳಿಸಿಕೊಂಡರೆ ಅವರು ಯಾರು ಎಂಬ ಪ್ರಶ್ನೆ ಸಜವಾಗಿಯೇ ಮೂಡುತ್ತದೆ.
ಯಾರನ್ನಲ್ಲ ಉಳಿಸಿಕೊಳ್ಳುತ್ತೆ ಆರ್​ಸಿಬಿ..?
- ವಿರಾಟ್ ಕೊಹ್ಲಿ: ಯಾವುದೇ ಅನುಮಾನವಿಲ್ಲದೆ ಫ್ರಾಂಚೈಸಿಯ ಭಾಗವಾಗುವ ವ್ಯಕ್ತಿ ಅಂದರೆ ವಿರಾಟ್ ಕೊಹ್ಲಿ. ಪ್ರಸಕ್ತ ಋತುವಿನಲ್ಲಿ 741 ರನ್ ಗಳಿಸಿರುವ ಕೊಹ್ಲಿ, ಆರ್​ಸಿಬಿಯ ಸಮರ್ಥ ಆಟಗಾರ. ಅವರನ್ನು ಯಾವುದೇ ಕಾರಣಕ್ಕೂ ಫ್ರಾಂಚೈಸಿಯು ಕೈಬಿಡುವುದಿಲ್ಲ.
- ವಿಲ್ ಜಾಕ್ಸ್​​: RCBಯ ಉದಯೋನ್ಮುಖ ತಾರೆಗಳಲ್ಲಿ ವಿಲ್ ಜಾಕ್ಸ್​ ಕೂಡ ಒಬ್ಬರು. ಯುವ ಇಂಗ್ಲಿಷ್ ಬ್ಯಾಟರ್ ತಮ್ಮ ಪವರ್ ಹಿಟ್ಟಿಂಗ್‌ಗೆ ಹೆಸರುವಾಸಿ. ಇವರನ್ನು ಮತ್ತೆ ರಿಟೈನ್ ಮಾಡಿಕೊಳ್ಳುವ ಪ್ಲಾನ್​ನಲ್ಲಿ ಆರ್​ಸಿಬಿ ಇದೆ ಎನ್ನಲಾಗುತ್ತಿದೆ.
- ಮೊಹಮ್ಮದ್ ಸಿರಾಜ್: ಇವರು RCBಯ ಅನುಭವಿ ಆಟಗಾರ. ಭಾರತ ತಂಡದ ವೇಗಿಯೂ ಆಗಿರುವ ಸಿರಾಜ್​​, ಈ ಋತುವಿನಲ್ಲಿ ಪ್ರದರ್ಶನ ಅಷ್ಟಕಷ್ಟೇ. ಆದರೆ ಇವರನ್ನು ಕೈಬಿಡುವ ಯಾವುದೇ ಪ್ಲಾನ್​ ಆರ್​​ಸಿಬಿಗೆ ಎಲ್ಲ ಎನ್ನಲಾಗಿದೆ. ಚಹಾಲ್ ಮತ್ತು ಹರ್ಷಲ್ ಪಟೇಲ್​ ವಿಚಾರದಲ್ಲಿ ಮಾಡಿದ ತಪ್ಪನ್ನು ಮತ್ತೆ ಆರ್​ಸಿಬಿ ಮಾಡಲ್ಲ ಎನ್ನಲಾಗುತ್ತಿದೆ.
- ಯಶ್ ದಯಾಳ್: ಐಪಿಎಲ್ 2024 ರ ಹರಾಜಿನಲ್ಲಿ ಯಶ್ ದಯಾಳ್ ಅವರನ್ನು RCB ಆಯ್ಕೆ ಮಾಡಿತ್ತು. ಕಳೆದ ವರ್ಷ ಗುಜರಾತ್ ತಂಡ ಅವರನ್ನು ಕೈಬಿಟ್ಟಿತ್ತು. ಆರ್​ಸಿಬಿಗೆ ಬಂದ ಬಳಿಕ ದಯಾಳ್​​ ಮತ್ತೆ ಲಯಕ್ಕೆ ಮರಳಿದ್ದಾರೆ. ಅವರನ್ನು ಮುಂದಿನ ಸೀಸನ್​​ಗೆ ಉಳಿಸಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ:ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಆಘಾತ.. ದಾಂಪತ್ಯದಲ್ಲಿ ಬಿರುಕು..?
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್