ಮುಂದಿನ ಸೀಸನ್​ಗೆ ಮುನ್ನ ಆರ್​​ಸಿಬಿಗೆ ಬಿಗ್​ ಶಾಕ್​​; ಟೂರ್ನಿಯಿಂದ ಹೊರಬಿದ್ದ ಸ್ಟಾರ್​ ಪ್ಲೇಯರ್​​

author-image
Ganesh Nachikethu
Updated On
ಗುಜರಾತ್​​​​​ ವಿರುದ್ಧ ಮೊದಲ ಪಂದ್ಯ; ಇಂದು ಬಲಿಷ್ಠ ಆರ್​​ಸಿಬಿ ತಂಡ ಕಣಕ್ಕೆ; ಯಾರಿಗೆ ಸ್ಥಾನ?
Advertisment
  • ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್‌ 2025ರ ಟೂರ್ನಿ
  • ಮೆಗಾ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಜ್ಜು
  • ಮುಂದಿನ ಸೀಸನ್​ಗೆ ಆರ್​​ಸಿಬಿ ತಂಡಕ್ಕೆ ಬಹುದೊಡ್ಡ ಆಘಾತ

ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್‌ 2025ರ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಜ್ಜಾಗುತ್ತಿದೆ. ಕಳೆದ ಬಾರಿ ಆರ್‌ಸಿಬಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೋಫಿ ಮೊಲಿನೆಕ್ಸ್ ತೀವ್ರವಾಗಿ ಗಾಯಗೊಂಡ ಕಾರಣ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದು ಶಾಕಿಂಗ್​ ನ್ಯೂಸ್​ ಆಗಿದ್ದು, ಇವರ ಜಾಗಕ್ಕೆ ಸ್ಟಾರ್​ ಪ್ಲೇಯರ್​ ಎಂಟ್ರಿ ಆಗಿದ್ದಾರೆ.

ಇನ್ನು, ಸೋಫಿ ಮೊಲಿನೆಕ್ಸ್ ಬದಲಿಗೆ ಇಂಗ್ಲೆಂಡ್‌ ಆಫ್‌ಸ್ಪಿನ್ನರ್ ಚಾರ್ಲಿ ಡೀನ್ ಆರ್‌ಸಿಬಿ ತಂಡವನ್ನು ಸೇರಿದ್ದಾರೆ. ಈ ಬಗ್ಗೆ ಆರ್‌ಸಿಬಿ ತನ್ನ ಸೋಷಿಯಲ್​ ಮೀಡಿಯಾ ಖಾತೆ ಮೂಲಕ ಅಧಿಕೃತ ಘೋಷಣೆ ಹೊರಡಿಸಿದೆ. ಇದು ಆರ್​​ಸಿಬಿ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಆಗಿದೆ.

ಸೋಫಿ ಕಾಲಿಗೆ ಇಂಜುರಿ

ಕಳೆದ ಸೀಸನ್​ನಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿತ್ತು. ಆರ್​​ಸಿಬಿ ಚಾಂಪಿಯನ್​ ಆಗಲು ಸೋಫಿ ಮೊಲಿನೆಕ್ಸ್ ಕೊಡುಗೆ ಬಹಳ ಇತ್ತು. ಟೂನಿಯುದ್ಧಕ್ಕೂ ಅದ್ಭುತ ಪ್ರದರ್ಶನ ನೀಡಿದ್ದರು ಮೊಲಿನೆಕ್ಸ್. ಮುಂದಿನ ಸೀಸನ್​​ನಲ್ಲೂ ಇವರು ಮಿಂಚುವ ನಿರೀಕ್ಷೆಯಿತ್ತು. ಆದರೆ, ಮೊಣಕಾಲಿನ ಗಾಯದಿಂದಾಗಿ ಬಳಲುತ್ತಿರೋ ಇವರು ಟೂರ್ನಿಯಿಂದ ಹೊರಬಿದ್ದಿದ್ದಾರೆ.

24 ವರ್ಷದ ಚಾರ್ಲಿ ಡೀನ್ ಅವರನ್ನು 30 ಲಕ್ಷ ನೀಡಿ ಆರ್​​ಸಿಬಿ ಒಪ್ಪಂದ ಮಾಡಿಕೊಂಡಿದೆ. ಇವರು ಆಫ್‌ಸ್ಪಿನ್ನರ್ ಆಗಿದ್ದು, ಇಂಗ್ಲೆಂಡ್ ಪರ ಹಲವು ಪಂದ್ಯಗಳನ್ನು ಆಡಿದ್ದಾರೆ. ಡೀನ್ ಇದುವರೆಗೆ ಆಡಿರೋ 36 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 6.91 ರ ಆರ್ಥಿಕತೆಯಲ್ಲಿ 46 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೆ, 12 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಅವರು 135 ರನ್ ಬಾರಿಸಿದ್ದಾರೆ.

ಆರ್‌ಸಿಬಿ ಮಹಿಳಾ ತಂಡ

ಸ್ಮೃತಿ ಮಂಧಾನ (ನಾಯಕಿ), ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್‌ಕೀಪರ್), ರೇಣುಕಾ ಸಿಂಗ್, ಜಾರ್ಜಿಯಾ ವೇರ್‌ಹ್ಯಾಮ್, ಸೋಫಿ ಡಿವೈನ್, ಕೇಟ್ ಕ್ರಾಸ್, ಸಬ್ಬಿನೇನಿ ಮೇಘನಾ, ಶ್ರೇಯಾಂಕಾ ಪಾಟೀಲ್, ಆಶಾ ಸೊಭಾನಾ, ಏಕ್ತಾ ಬಿಷ್ತ್, ಕನಿಕಾ ಅಹುಜಾ, ಡೇನಿಯಲ್ ವ್ಯಾಟ್, ಪ್ರೇಮಾ ರಾವತ್, ಜೋಶಿತಾ ವಿಜೆ, ರಾಘವಿ ಬಿಸ್ತ್, ಜಾಗರವಿ ಪವಾರ್, ಚಾರ್ಲಿ ಡೀನ್.

ಇದನ್ನೂ ಓದಿ:ನಾಳೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ; ಪತ್ರಿಕಾಗೋಷ್ಠಿಯಿಂದ ಕೋಚ್​​ ಗಂಭೀರ್​ಗೆ ಕೊಕ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment