/newsfirstlive-kannada/media/post_attachments/wp-content/uploads/2025/03/RCB-1.jpg)
ಸತತ ಐದನೇ ಬಾರಿಗೆ ಸೋತು ಸುಣ್ಣವಾಗಿದ್ದ ಆರ್ಸಿಬಿಗೆ ಕೊನೆಗೂ ಗೆಲುವು ಸಿಕ್ಕಿದೆ. ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ 11 ರನ್ಗಳ ಅಂತರದಿಂದ ಗೆಲುವು ಸಾಧಿಸಿ, ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ಗೆ ವಿದಾಯ ಹೇಳಿದೆ.
ಲೀಗ್ ಹಂತಗಳಲ್ಲಿ ಆರ್ಸಿಬಿ ಒಟ್ಟು 8 ಪಂದ್ಯಗಳನ್ನು ಆಡಿತ್ತು. ಅದರಲ್ಲಿ ಮೂರು ಪಂದ್ಯಗಳನ್ನು ಗೆದ್ದು ನಾಲ್ಕನೇ ಸ್ಥಾನಕ್ಕೆ ಸೀಮಿತವಾಯ್ತು. 8 ಪಂದ್ಯಗಳಲ್ಲಿ ಐದು ಗೆದ್ದುಕೊಂಡಿರುವ ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನದಲ್ಲಿ ಪ್ಲೇ-ಆಫ್ ಪ್ರವೇಶ ಮಾಡಿದೆ.
ಇದನ್ನೂ ಓದಿ: ಟ್ರೋಫಿ ಗೆದ್ದು ವಾಪಸ್ ಆದ ಸ್ಟಾರ್ಗಳಿಗೆ ಯಾವ್ದೇ ಸನ್ಮಾನ ಇಲ್ಲ; BCCI ಈ ನಿರ್ಧಾರಕ್ಕೆ ಕಾರಣ ಏನು?
ನಿನ್ನೆಯ ದಿನ ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ ಮೂರು ವಿಕೆಟ್ ಕಳೆದುಕೊಂಡು 199 ರನ್ಗಳನ್ನು ಕಲೆ ಹಾಕಿತ್ತು. ಆರ್ಸಿಬಿ ಪರ ಮೇಘನಾ 26, ಸ್ಮೃತಿ ಮಂದಾನ 53, ಪೆರಿ 49, ರಿಚಾ ಘೋಷ್ 36, ಜಾರ್ಜಿಯಾ 31 ರನ್ಗಳ ಕಾಣಿಕೆ ನೀಡಿದರು. ಈ ಗುರಿಯನ್ನು ಬೆನ್ನು ಹತ್ತಿದ್ದ ಕೌರ್ ಪಡೆ, 20 ಓವರ್ನಲ್ಲಿ 188 ರನ್ಗಳಿಸಿ ಸೋಲನ್ನು ಒಪ್ಪಿಕೊಳ್ತು.
ಮತ್ತೊಂದು ಕಡೆ ಡೆಲ್ಲಿ ತಂಡ ಗುಂಪು ಹಂತದಲ್ಲಿ ಅಗ್ರ ಸ್ಥಾನದಲ್ಲಿದ್ದು, ನೇರವಾಗಿ ಫೈನಲ್ ಪ್ರವೇಶ ಮಾಡಿದೆ. ಆ ಮೂಲಕ ಡೆಲ್ಲಿ ತಂಡ ಸತತ ಮೂರನೇ ಬಾರಿಗೆ ಫೈನಲ್ ಪ್ರವೇಶ ಮಾಡಿದೆ. ನಾಳೆ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಗುಜರಾತ್ ಹಾಗೂ ಮುಂಬೈ ತಂಡ ಸೆಣಸಾಟ ನಡೆಸಲಿವೆ. ಇಲ್ಲಿ ಗೆದ್ದವರು ಫೈನಲ್ನಲ್ಲಿ ಡೆಲ್ಲಿ ಜೊತೆ ಟ್ರೋಫಿಗಾಗಿ ಕಾದಾಟ ನಡೆಸಲಿವೆ. ಮುಂಬೈ ತಂಡ ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದರೆ, ಗುಜರಾತ್ ಚೊಚ್ಚಲ WPL ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ 48 ಗಂಟೆಗಳ ಡೆಡ್ಲೈನ್.. ಟ್ರೈನ್ ಹೈಜಾಕ್ಗೆ ಮುಖ್ಯ ಕಾರಣ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್