/newsfirstlive-kannada/media/post_attachments/wp-content/uploads/2025/04/KOHLI_Padikkal_SALT.jpg)
ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಅಮೋಘವಾದ ಅರ್ಧಶತಕದ ನೆರವಿನಿಂದ ಆರ್ಸಿಬಿ 206 ರನ್ಗಳ ಬೃಹತ್ ಗುರಿಯನ್ನು ಆರ್ಆರ್ಗೆ ನೀಡಿದೆ.
ಗಾರ್ಡನ್ ಸಿಟಿಯ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಕ್ಯಾಪ್ಟನ್ ರಿಯಾನ್ ಪರಾಗ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದರು. ಇದರಿಂದ ಪಂದ್ಯದಲ್ಲಿ ಆರ್ಸಿಬಿ ಮೊದಲ ಬ್ಯಾಟಿಂಗ್ ಮಾಡಿದೆ. ತವರಿನಲ್ಲಿ ನಡೆಯುತ್ತಿರುವ ಮ್ಯಾಚ್ನಲ್ಲಿ ರಜತ್ ಪಾಟಿದಾರ್ಗೆ ಮತ್ತೆ ಟಾಸ್ ಕೈಕೊಟ್ಟಿದ್ದು ಎಲ್ಲರಿಗೂ ಭಾರೀ ನಿರಾಶೆ ಮೂಡಿಸಿದೆ.
ಆರ್ಸಿಬಿ ಪರ ಓಪನರ್ ಆಗಿ ಮೈದಾನಕ್ಕೆ ಆಗಮಿಸಿದ ವಿರಾಟ್ ಕೊಹ್ಲಿ ಹಾಗೂ ಫಿಲಿಪ್ ಸಾಲ್ಟ್ ಒಳ್ಳೆಯ ಆರಂಭವೇನು ಪಡೆಯಲಿಲ್ಲ. ಆರ್ಸಿಬಿಯ ಸ್ಫೋಟಕ ಬ್ಯಾಟ್ಸ್ಮನ್ ಫಿಲಿಪ್ ಸಾಲ್ಟ್ ಆರಂಭದಲ್ಲೇ ಒಂದು ಜೀವದಾನ ಪಡೆದರೂ 26 ರನ್ ಗಳಿಸಿ ಆಡುವಾಗ ವನಿಂದು ಹಸರಂಗ್ ಬೌಲಿಂಗ್ನಲ್ಲಿ ಕ್ಯಾಚ್ ಔಟ್ ಆದರು. ಇವರ ನಂತರ ಕ್ರೀಸ್ಗೆ ಆಗಮಿಸಿದ ಕನ್ನಡಿಗ ದೇವದತ್ ಪಡಿಕ್ಕಲ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು.
ಇನ್ನೊಂದೆಡೆ ಓಪನರ್ ಆಗಿ ಕ್ರೀಸ್ನಲ್ಲಿದ್ದ ಕಿಂಗ್ ಕೊಹ್ಲಿ ಮತ್ತೊಂದು ಅರ್ಧಶತಕ ಬಾರಿಸಿದರು. 32 ಎಸೆತಗಳಲ್ಲಿ 8 ಬೌಂಡರಿಗಳಿಂದ 51 ರನ್ ಗಳಿಸಿದರು. ಪಂದ್ಯದಲ್ಲಿ ಒಟ್ಟು 42 ಬಾಲ್ ಆಡಿದ ಕೊಹ್ಲಿ, 8 ಬೌಂಡರಿ, 2 ಅಮೋಘ ಸಿಕ್ಸರ್ನಿಂದ 70 ರನ್ ಗಳಿಸಿ ತಂಡಕ್ಕೆ ನೆರವಾದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಬಂದ ಕನ್ನಡಿಗ ದೇವದತ್ ಪಡಿಕ್ಕಲ್ ಅವರು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ರಾಜಸ್ಥಾನ್ ಬೌಲರ್ಗಳನ್ನ ಕಾಡಿದ ಪಡಿಕ್ಕಲ್ ಕೇವಲ 26 ಎಸೆತಗಳಲ್ಲಿ 4 ಫೋರ್ ಹಾಗೂ 3 ದೊಡ್ಡ ಸಿಕ್ಸರ್ಗಳಿಂದ 50 ರನ್ ಚಚ್ಚಿ ಔಟ್ ಆದರು.
ಇದನ್ನೂ ಓದಿ: 4, 4, 4, 4, 4, 4, 4, 4, ಕೊಹ್ಲಿ ಭರ್ಜರಿ ಅರ್ಧಶತಕ.. ರಾಯಲ್ಸ್ ಬೌಲರ್ಸ್ಗೆ ಸ್ಟಾರ್ ಬ್ಯಾಟರ್ ಟಕ್ಕರ್
ತವರಿನಲ್ಲಿ ಪಂದ್ಯದಲ್ಲಿ ಆರ್ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್ (1) ಬ್ಯಾಟಿಂಗ್ನಲ್ಲಿ ವಿಫಲವಾದರು. ಪಂದ್ಯದ ಕೊನೆಯಲ್ಲಿ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ಟಿಮ್ ಡೇವಿಡ್ 15 ಎಸೆತಗಳಲ್ಲಿ 2 ಫೋರ್, 1 ಸಿಕ್ಸರ್ನಿಂದ 23 ರನ್ಗಳಿಸಿದ್ರೆ, ವಿಕೆಟ್ ಕೀಪರ್ ಜಿತೇಶ್ ಶರ್ಮಾ 10 ಬಾಲ್ನಲ್ಲಿ 20 ರನ್ ಚಚ್ಚಿದರು. ಇದರಿಂದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 206 ರನ್ಗಳ ಬೃಹತ್ ಟಾರ್ಗೆಟ್ ಅನ್ನು ರಾಜಸ್ಥಾನ್ಗೆ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ