/newsfirstlive-kannada/media/post_attachments/wp-content/uploads/2025/04/Tim_David.jpg)
ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ ನಿಗದಿತ 14 ಓವರ್ಗಳಲ್ಲಿ 96 ರನ್ಗಳ ಟಾರ್ಗೆಟ್ ಅನ್ನು ಪಂಜಾಬ್ ಕಿಂಗ್ಸ್ಗೆ ನೀಡಿದೆ. ಕೊನೆಯಲ್ಲಿ ಟಿಮ್ ಡೇವಿಡ್ ಅವರ ಭರ್ಜರಿ ಬ್ಯಾಟಿಂಗ್, ಅಭಿಮಾನಿಗಳಿಗೆ ದೊಡ್ಡ ಮನರಂಜನೆ ನೀಡಿತು.
ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಆರ್ಸಿಬಿ ಪರ ಓಪನರ್ಗಳಾಗಿ ಬ್ಯಾಟಿಂಗ್ಗೆ ಬಂದ ವಿರಾಟ್ ಕೊಹ್ಲಿ ಹಾಗೂ ಫಿಲಿಪ್ ಸಾಲ್ಟ್ ವಿಫಲ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಸಾಲ್ಟ್ 4 ರನ್ಗೆ ಔಟ್ ಆದ್ರೆ, ಕೊಹ್ಲಿ 1 ರನ್ಗೆ ವಿಕೆಟ್ ಒಪ್ಪಿಸಿದರು. ಈ ಇಬ್ಬರು ಆರ್ಸಿಬಿಗೆ ಭದ್ರ ಬುನಾದಿ ಹಾಕುವಲ್ಲಿ ಸೋತರು ಎನ್ನಬಹುದು.
ಇದನ್ನೂ ಓದಿ: ಬೇಗ ಕ್ರೀಸ್ ಖಾಲಿ ಮಾಡಿದ ಕೊಹ್ಲಿ, ಸಾಲ್ಟ್; RCBಗೆ ದೊಡ್ಡ ಪೆಟ್ಟು, ಈ ಪಂದ್ಯವಾದರೂ ಗೆಲ್ಲುತ್ತಾ?
ಆರ್ಸಿಬಿ ಕ್ಯಾಪ್ಟನ್ ಕೊಂಚ ತಂಡಕ್ಕೆ ಆಶ್ರಯವಾದಂತೆ ಕಾಣಿಸಿದರೂ 23 ರನ್ಗೆ ಚಹಲ್ ಸ್ಪಿನ್ ಬೌಲಿಂಗ್ನಲ್ಲಿ ಕ್ಯಾಚ್ ಕೊಟ್ಟರು. ಉಳಿದಂತೆ ಲಿವಿಂಗ್ಸ್ಟೋನ್ 4, ಜಿತೇಶ್ ಶರ್ಮಾ 2, ಕೃನಾಲ್ ಪಾಂಡ್ಯ 1, ಕನ್ನಡಿಗ ಮನೋಜ್ ಭಾಂಡಗೆ 1, ಭುವನೇಶ್ವರ್ 8, ಇವರೆಲ್ಲ ಬಂದಷ್ಟೇ ವೇಗವಾಗಿ ಪೆವಿಲಿಯನ್ಗೆ ನಡೆದರು. ಮಳೆ ಬಂದಿದ್ದರಿಂದ ಯಾರಿಗೂ ಸರಿಯಾದ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ.
ಆದರೆ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದು ಅಬ್ಬರಿಸಿದ ಟಿಮ್ ಡೇವಿಡ್ ಪಂಜಾಬ್ ಕಿಂಗ್ಸ್ ಬೌಲರ್ಗಳಿಗೆ ಬೆವರಿಳಿಸಿದರು. ಕೇವಲ 26 ಎಸೆತಗಳನ್ನು ಎದುರಿಸಿದ ಟಿಮ್ ಡೇವಿಡ್ 5 ಬೌಂಡರಿ, 3 ಬ್ಯಾಕ್ ಟು ಬ್ಯಾಕ್ ಸಿಕ್ಸರ್ಗಳಿಂದ ಅರ್ಧಶತಕ ಪೂರೈಸಿ ಆರ್ಸಿಬಿಗೆ ನೆರವಾದರು. ಟಿಮ್ ಡೇವಿಡ್ ಅವರ ಅಬ್ಬರದ ಬ್ಯಾಟಿಂಗ್ನಿಂದ ಆರ್ಸಿಬಿ ನಿಗದಿತ 14 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 96 ರನ್ಗಳ ಗುರಿಯನ್ನು ನೀಡಿದೆ. ಮಳೆಯ ಕಾರಣದಿಂದ ತಡವಾಗಿ ಪಂದ್ಯ ಆರಂಭಿಸಿದ್ದಕ್ಕೆ 14 ಓವರ್ಗಳನ್ನು ನಿಗದಿ ಮಾಡಲಾಗಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ