/newsfirstlive-kannada/media/post_attachments/wp-content/uploads/2024/11/RAJAT-2.jpg)
ಇಲ್ಲಿಯವರೆಗೆ ಐಪಿಎಲ್ ಕಪ್ ಗೆಲ್ಲದ ಕೆಲವೇ ಕೆಲವು ಫ್ರಾಂಚೈಸಿಗಳಲ್ಲಿ ಆರ್ಸಿಬಿ ಕೂಡ ಒಂದು. ಐಪಿಎಲ್-2025ರಲ್ಲಿ ಕಪ್ ಗೆಲ್ಲುವ ಗುರಿ ಹೊಂದಿರುವ ಆರ್ಸಿಬಿ, ತಂಡದಲ್ಲಿ ಭಾರೀ ಬದಲಾವಣೆ ಮಾಡಲಿದೆ.
ಅದಕ್ಕಾಗಿ ಸಮರ್ಥ ಕ್ಯಾಪ್ಟನ್ ಹುಡುಕಾಟದಲ್ಲಿದೆ. ಫಾಫ್ ಡುಪ್ಲೆಸಿಸ್ಗೆ ಕ್ಯಾಪ್ಟನ್ಸಿ ಸ್ಥಾನದಿಂದ ಕೊಕ್ ನೀಡಿ ತಂಡದಿಂದಲೇ ಕೈಬಿಡಲಾಗಿದೆ. ಹೀಗಾಗಿ ಫಾಫ್ ಸ್ಥಾನವನ್ನು ಯಾರು ನಿಭಾಯಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ. ಈ ನಡುವೆ ಕನ್ನಡಿಗ, ಟೀಂ ಇಂಡಿಯಾದ ಮಾಜಿ ಸ್ಟಾರ್ ರಾಬಿನ್ ಉತ್ತಪ್ಪ ಆರ್ಸಿಬಿ ಕ್ಯಾಪ್ಟನ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ಆರ್ಸಿಬಿ ಬೌಲಿಂಗ್ ವಿಭಾಗಕ್ಕೆ ಆನೆಬಲ; ಯಾರು ಈ ಓಂಕಾರ್ ಸಾಲ್ವಿ..?
ಎರಡು ವರ್ಷಗಳ ನಂತರ ಆರ್ಸಿಬಿಗೆ ಹೊಸ ಕ್ಯಾಪ್ಟನ್ ಅಗತ್ಯ ಇದೆ. ಅವರು ರಜತ್ ಪಾಟೀದರ್ ಅವರನ್ನು ಕ್ಯಾಪ್ಟನ್ ಆಯ್ಕೆ ಮಾಡುವ ಬಗ್ಗೆ ಯೊಚಿಸಬೇಕು ಎಂದು ನಾನು ಭಾವಿಸುತ್ತೇನೆ. ಮುಂದಿನ ಮೂರರಿಂದ ಐದು ಸೀಸನ್ಗಳವರೆಗೆ ಸಮರ್ಥ ನಾಯಕನೊಂದಿಗೆ ತಂಡ ಕಟ್ಟಬೇಕು ಅಂದರೆ ಹೊಸ ನಾಯಕನ ಅಗತ್ಯವಿದೆ. ನನ್ನ ಪ್ರಕಾರ ಅದನ್ನು ರಜತ್ ಪಾಟೀದರ್ ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ಉತ್ತಪ್ಪ ಹೇಳಿದ್ದಾರೆ.
ಅಂದ್ಹಾಗೆ ಆರ್ಸಿಬಿ ರಜತ್ ಪಾಟೀದರ್ ಅವರನ್ನು ರಿಟೈನ್ಡ್ ಮಾಡಿಕೊಂಡಿದೆ. ಬರೋಬ್ಬರಿ 11 ಕೋಟಿ ರೂಪಾಯಿ ಹಣ ನೀಡಿ ಅವರನ್ನು ಉಳಿಸಿಕೊಂಡಿದೆ. ಜೊತೆಗೆ ಕಿಂಗ್ ವಿರಾಟ್ ಕೊಹ್ಲಿ ಹಾಗೂ ಯಶ್ ದಯಾಳ್ ಅವರನ್ನು ಆರ್ಸಿಬಿ ಉಳಿಸಿಕೊಂಡು ಉಳಿದೆಲ್ಲ ಆಟಗಾರರನ್ನು ರಿಲೀಸ್ ಮಾಡಿದೆ.
ಇದನ್ನೂ ಓದಿ:RTM ನಿಯಮದಡಿ ಆರ್ಸಿಬಿಗೆ ಮೂವರು ಸ್ಟಾರ್ ಎಂಟ್ರಿ.. ವಿಲ್ ಜಾಕ್ಸ್ ಸೇರಿ ಯಾಱರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ