/newsfirstlive-kannada/media/post_attachments/wp-content/uploads/2025/05/RCB_LSG.jpg)
ನಾಯಕ ರಿಷಭ್ ಪಂತ್ ಸೆಂಚುರಿ ಬಾರಿಸಿದರೂ ಲಕ್ನೋ ಸೂಪರ್ ಜೈಂಟ್ಸ್ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲೋಪ್ಪಿಕೊಂಡಿತು. ಬೃಹತ್ ಮೊತ್ತದ ರನ್ಗಳನ್ನು ಚೇಸ್ ಮಾಡಿದ ಆರ್ಸಿಬಿ ಹೋರಾಟಕ್ಕೆ ಫ್ಯಾನ್ಸ್ ಫುಲ್ ಫಿದಾ ಆದರು. ಈ ಪಂದ್ಯದಲ್ಲಿ ಸಿಕ್ಸರ್ಗಳಿಗಿಂತ ಬೌಂಡರಿಗಳ ಸುರಿಮಳೆಗೈದಿದ್ದೇ ಹೆಚ್ಚು. ಆರ್ಸಿಬಿ ಬಾರಿಸಿದ ಬೌಂಡರಿಗಳ ಸಂಖ್ಯೆ..?
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿತು. ಓಪನರ್ ಮಿಚೆಲ್ ಮಾರ್ಷ್ 4 ಬೌಂಡರಿ, 5 ಸಿಕ್ಸರ್ಗಳಿಂದ 67 ರನ್ ಚಚ್ಚಿದರು. ಮತ್ತೊಬ್ಬ ಆರಂಭಿಕ ಬ್ಯಾಟರ್ ಮ್ಯಾಥ್ಯೂ ಬ್ರೀಟ್ಜ್ಕೆ 1 ಸಿಕ್ಸರ್, 1 ಬೌಂಡರಿಯಿಂದ 14 ರನ್ ಚಚ್ಚಿದರು. 3ನೇ ಕ್ರಮಾಂಕದಲ್ಲಿ ಅಖಾಡಕ್ಕೆ ಇಳಿದ ರಿಷಭ್ ಪಂತ್ ಸಿಡಿಲಬ್ಬರದ ಸೆಂಚುರಿ ಬಾರಿಸಿದರು.
ಪಂದ್ಯದಲ್ಲಿ ಒಟ್ಟು 61 ಎಸೆತಗಳನ್ನು ಆಡಿದ ಪಂತ್ 11 ಅದ್ಭುತವಾದ ಬೌಂಡರಿ ಹಾಗೂ 8 ಮುಗಿಲೆತ್ತರದ ಸಿಕ್ಸರ್ಗಳಿಂದ 118 ರನ್ ಬಾರಿಸಿ ಅಜೇಯರಾಗಿ ಉಳಿದರು. ಇದರಿಂದ ಎಲ್ಎಸ್ಜಿ ತಂಡ ಈ ಪಂದ್ಯದಲ್ಲಿ ಒಟ್ಟು 14 ಸಿಕ್ಸರ್ ಹಾಗೂ 17 ಬೌಂಡರಿಗಳಿಂದ 3 ವಿಕೆಟ್ಗೆ 228 ರನ್ಗಳ ದೊಡ್ಡ ಟಾರ್ಗೆಟ್ ಅನ್ನು ಆರ್ಸಿಬಿಗೆ ನೀಡಿತ್ತು.
ಈ ಟಾರ್ಗೆಟ್ ಸ್ವೀಕರಿಸಿದ ಆರ್ಸಿಬಿ ಆರಂಭದಲ್ಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿತು. ಸಾಲ್ಟ್ 6 ಸಿಕ್ಸರ್ಗಳಿಂದ 30 ರನ್ ಚಚ್ಚಿದರು. ವಿರಾಟ್ ಕೊಹ್ಲಿ ಪಂದ್ಯದಲ್ಲಿ ಸಿಕ್ಸರ್ ಬಾರಿಸದೇ 10 ಬೌಂಡರಿಗಳಿಂದ ಮತ್ತೊಂದು ಅರ್ಧಶತಕ ಬಾರಿಸಿದರು. ರಜತ್ ಕೂಡ 1 ಸಿಕ್ಸರ್, 1 ಬೌಂಡರಿಯಿಂದ 14 ರನ್ ಚಚ್ಚಿದರು. ಮಯಾಂಕ್ ಅಗರ್ವಾಲ್ ಹಾಗೂ ಜಿತೇಶ್ ಅತ್ಯುತ್ತಮ ಜೊತೆಯಾಟ ಆಡಿದರು.
ಮಯಾಂಕ್ ಸಿಕ್ಸರ್ ಬಾರಿಸದೇ 5 ಬೌಂಡರಿಗಳಿಂದ 41 ಬಾರಿಸಿದರು. ನಾಯಕ ಜಿತೇಶ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ, 8 ಬೌಂಡರಿ, 6 ಸಿಕ್ಸರ್ಗಳಿಂದ 85 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಆರ್ಸಿಬಿ ಪಂದ್ಯದಲ್ಲಿ ಕೇವಲ 7 ಸಿಕ್ಸರ್ ಹಾಗೂ 30 ಬೌಂಡರಿಗಳೊಂದಿಗೆ 4 ವಿಕೆಟ್ಗೆ 230 ರನ್ಗಳ ಬಿಗ್ ಟಾರ್ಗೆಟ್ ಅನ್ನು ಚೇಸ್ ಮಾಡಿತು.
ಇದನ್ನೂ ಓದಿ:ಆರ್ಸಿಬಿಗೆ ಪಂಜಾಬ್ ಸವಾಲು.. ಐಪಿಎಲ್ನ ಮುಂದಿನ ಪಂದ್ಯಗಳು ಹೇಗಿರಲಿವೆ..?
ಇನ್ನು ಈ ಪಂದ್ಯದಲ್ಲಿ ಒಟ್ಟು 21 ಸಿಕ್ಸರ್ಗಳು ಹಾಗೂ 47 ಬೌಂಡರಿಗಳು ಹರಿದು ಬಂದಿವೆ. ವಿಶೇಷ ಎಂದರೆ ಈ ಪಂದ್ಯದಲ್ಲಿ ಲಕ್ನೋ ತಂಡ ಹೆಚ್ಚು ಸಿಕ್ಸರ್ (14) ಬಾರಿಸಿದರೆ, ಆರ್ಸಿಬಿ ಅತಿ ಹೆಚ್ಚು ಬೌಂಡರಿ (30) ಗಳನ್ನು ಬಾರಿಸಿದೆ. ಆರ್ಸಿಬಿ ಮುಂದಿನ ಕ್ವಾಲಿಫೈಯರ್-1 ಪಂದ್ಯವನ್ನು ಪಂಜಾಬ್ ವಿರುದ್ಧ ನಾಳೆ ಆಡಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ