/newsfirstlive-kannada/media/post_attachments/wp-content/uploads/2025/03/RCB-unbox-Punith-Rajkumar-1.jpg)
ಪುನೀತ್ ರಾಜ್‌ಕುಮಾರ್, ಕನ್ನಡಿಗರ ಹೃದಯದಲ್ಲಿ ನೆಲೆಸಿರೋ ರಾಜಕುಮಾರ. ಅಪ್ಪು ಅಭಿಮಾನಿಗಳು ನಿನ್ನೆ ಪುನೀತ್ 50ನೇ ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಭರ್ಜರಿಯಾಗಿ ಆಚರಿಸಿದ್ದಾರೆ. ಅಪ್ಪು ಹುಟ್ಟುಹಬ್ಬದ ಈ ಖುಷಿಯಲ್ಲಿ RCB ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನ್‌ಬಾಕ್ಸಿಂಗ್ ಇವೆಂಟ್ ಇದೇ ಮೊದಲ ಬಾರಿಗೆ ಅಪರೂಪದ ದೃಶ್ಯಗಳಿಗೆ ಸಾಕ್ಷಿಯಾಯಿತು. ಅನ್‌ಬಾಕ್ಸಿಂಗ್ ಆರಂಭದಲ್ಲಿ ಇಡೀ ಕ್ರೀಡಾಂಗಣದಲ್ಲಿ ಕನ್ನಡದ ಬಾವುಟ ರಾರಾಜಿಸಿದ್ದು ಕನ್ನಡಿಗರ ಹೃದಯ ಗೆದ್ದಿತು.
ಆರ್‌ಸಿಬಿ ಅನ್‌ಬಾಕ್ಸಿಂಗ್ ಇವೆಂಟ್‌ನಲ್ಲಿ ವಿರಾಟ್ ಕೊಹ್ಲಿಗಿಂತಲೂ ಹೆಚ್ಚು ಕಿಚ್ಚು ಹೊತ್ತಿಸಿದ್ದು ನಮ್ಮ ಪ್ರೀತಿಯ ಅಪ್ಪು, ಪುನೀತ್‌ರ ರಾಜಕುಮಾರ ಹಾಡು.
ಇದನ್ನೂ ಓದಿ: ಅಪ್ಪು ಹೆಸರಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಂದು ದಿಟ್ಟ ಹೆಜ್ಜೆ.. ಇದು ಭಾರತದಲ್ಲೇ ಮೊಟ್ಟ ಮೊದಲು; ಏನದು?
ಗಾಯಕ ವಿಜಯಪ್ರಕಾಶ್ ನೀನೇ ರಾಜಕುಮಾರ ಅಂತ ಹಾಡ್ತಿದ್ರೆ ಇಡೀ ಸ್ಟೇಡಿಯಂ ಹಾಡಿಗೆ ಧ್ವನಿಗೂಡಿಸಿತು. ತಮ್ಮ ತಮ್ಮನ ಮೇಲಿನ ಅಭಿಮಾನದ ಸಾಗರಕ್ಕೆ ಸ್ಟೇಡಿಯಂನಲ್ಲಿ ಕುಳಿತಿದ್ದ ಶಿವಣ್ಣ ಮೂಕವಿಸ್ಮಿತರಾದ್ರು. ಚಿನ್ನಸ್ವಾಮಿಯಲ್ಲಿ ಅಪ್ಪು ಹುಟ್ಟುಹಬ್ಬಕ್ಕೆ ವಿಶೇಷ ಗೌರವ ಸಲ್ಲಿಸಿದ್ದು ಅಭಿಮಾನಿಗಳನ್ನು ರೋಮಾಂಚನಗೊಳಿಸಿತು.
ಇವರಿಗೆ ಸಿಗುವ ಗೌರವ ಎಷ್ಟು ಜನರಿಗೆ ನಿದ್ದೆ ಕೆಡಿಸಿದೆಯೋ ಗೊತ್ತಿಲ್ಲ,,
ರಾಜಕುಮಾರ ಎಲ್ಲಿ ಇದ್ರೂ ರಾಜಕುಮಾರನೆ #DrpuneethRajakumar#RCBUnboxpic.twitter.com/RODa4DfA6J
— Kalki (@Ajayappu009)
ಇವರಿಗೆ ಸಿಗುವ ಗೌರವ ಎಷ್ಟು ಜನರಿಗೆ ನಿದ್ದೆ ಕೆಡಿಸಿದೆಯೋ ಗೊತ್ತಿಲ್ಲ,,
ರಾಜಕುಮಾರ ಎಲ್ಲಿ ಇದ್ರೂ ರಾಜಕುಮಾರನೆ #DrpuneethRajakumar#RCBUnboxpic.twitter.com/RODa4DfA6J— Kalki (@Ajayappu009) March 17, 2025
">March 17, 2025
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪುನೀತ್ ರಾಜ್‌ಕುಮಾರ್ ಅವರ ರಾಜಕುಮಾರ ಹಾಡು ಹೊಸ ಲೋಕವನ್ನೇ ಸೃಷ್ಟಿಸಿದ್ದು, ಅಭಿಮಾನಿಗಳ ಸಾಗರದಲ್ಲಿ ಶಿವಣ್ಣ ಭಾವುಕರಾದ ಈ ವಿಡಿಯೋ ಸಖತ್ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ