ಲೆಗ್ ಸ್ಪಿನ್​​ಗೆ ವಿರಾಟ್​ ಕೊಹ್ಲಿ ಅಭ್ಯಾಸ ಮಾಡೋದೇ ಬೇಕಾಗಿಲ್ಲ- RCB ಕೋಚ್ ಅಚ್ಚರಿ ಹೇಳಿಕೆ!

author-image
Bheemappa
ಲೆಗ್ ಸ್ಪಿನ್​​ಗೆ ವಿರಾಟ್​ ಕೊಹ್ಲಿ ಅಭ್ಯಾಸ ಮಾಡೋದೇ ಬೇಕಾಗಿಲ್ಲ- RCB ಕೋಚ್ ಅಚ್ಚರಿ ಹೇಳಿಕೆ!
Advertisment
  • ಸ್ಪಿನ್ನರ್​​ಗಳ ಎದುರು ಬೇಗ ಮುಗ್ಗರಿಸುವ ಸ್ಟಾರ್ ಬ್ಯಾಟರ್​ ಕೊಹ್ಲಿ
  • ಬೆಂಗಳೂರು ತಂಡದ ಸ್ಪಿನ್​ ಬೌಲಿಂಗ್ ಕೋಚ್​ ಹೆಸರು ಏನು..?
  • ಸ್ಪಿನ್​ಗೆ ಹೇಗೆ ಆಡಬೇಕೆಂದು ಅವರಿಗೆ ತಿಳಿದಿದೆ- RCB ಕೋಚ್

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಸ್ಪಿನ್ ಬೌಲಿಂಗ್​ಗೆ ಆಡಲು ಹೋಗಿ ಎಷ್ಟೋ ಬಾರಿ ಕೈಸುಟ್ಟುಕೊಂಡಿದ್ದಾರೆ. ಈಗಲೂ ಸ್ಪಿನ್​ ಬೌಲಿಂಗ್​​ ಎದುರು ಬ್ಯಾಟ್​ ಬೀಸುವುದು ಎಂದರೆ ಕೊಹ್ಲಿಗೆ ಅಷ್ಟಕ್ಕೆ ಅಷ್ಟೇ. ಆದರೆ ಆರ್​ಸಿಬಿಯ ಸ್ಪಿನ್ ಬೌಲಿಂಗ್ ಕೋಚ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಲೆಗ್​ ಸ್ಪಿನ್ ಅಥವಾ ಲೆಫ್ಟ್​ ಹಾರ್ಮ್​ ಸ್ಪಿನ್​​ ಬೌಲಿಂಗ್​​ಗೆ ವಿರಾಟ್ ಕೊಹ್ಲಿ ಅವರು ಹೆಚ್ಚು ಅಭ್ಯಾಸ ಮಾಡುವುದು ಬೇಕಾಗಿಲ್ಲ. ಕೊಹ್ಲಿ ಪ್ರತಿಭಾನ್ವಿತ ಆಟಗಾರ. ಕಳೆದ 20-25 ವರ್ಷಗಳಿಂದ ಅವರು ಬ್ಯಾಟಿಂಗ್ ಮಾಡುತ್ತಿದ್ದಾರೆ. ಸ್ಪಿನ್​ಗೆ ಹೇಗೆ ಬ್ಯಾಟ್​ ಬೀಸಬೇಕು ಎನ್ನುವುದು ಈಗಾಗಲೇ ಅವರಿಗೆ ಚೆನ್ನಾಗಿ ತಿಳಿದಿದೆ ಎಂದು ಆರ್​ಸಿಬಿ ತಂಡದ ಸ್ಪಿನ್ ಬೌಲಿಂಗ್ ಕೋಚ್ ಮಲೋಲನ್ ರಂಗರಾಜನ್ (Malolan Rangarajan) ಅವರು ಹೇಳಿದ್ದಾರೆ.

ಇದನ್ನೂ ಓದಿ: IPL ಮ್ಯಾಚ್​ಗೆ ಬಿಗ್​ ಶಾಕ್​.. ಪಂಜಾಬ್ ಹಾಗೂ ಕೋಲ್ಕತ್ತಾ ನಡುವಿನ ಪಂದ್ಯ ಸ್ಟಾಪ್​.. ಕಾರಣ?

publive-image

ಮಲೋಲನ್ ರಂಗರಾಜನ್ ಅವರು ಇದಕ್ಕೆ ಉದಾಹರಣೆ ಕೂಡ ನೀಡಿದ್ದಾರೆ. ವರ್ಷದಿಂದ ವರ್ಷಕ್ಕೆ ವಿರಾಟ್​ ಕೊಹ್ಲಿ ಸ್ಪಿನ್​ ವಿರುದ್ಧದ ಬ್ಯಾಟಿಂಗ್​ನಲ್ಲಿ ಸುಧಾರಣೆ ಕಂಡುಕೊಂಡಿದ್ದಾರೆ ಎಂದಿದ್ದಾರೆ. 2024ರಲ್ಲಿ ಸ್ಪಿನ್​ ಬೌಲಿಂಗ್​ ಆಡಲು ಕೊಹ್ಲಿ ಹರಸಾಹಸ ಪಡುತ್ತಿದ್ದರು. ಉದಾಹರಣಗೆ 2023ರಲ್ಲಿ ಲೆಗ್​ ಸ್ಪಿನ್​ ಬೌಲಿಂಗ್​ ಎದುರು 119.79 ಸ್ಟ್ರೈಕ್​ ರೇಟ್​ ಹೊಂದಿದ್ದರು. ಇದಾದ ಮೇಲೆ ಸುಧಾರಣೆ ಕಂಡ ಕೊಹ್ಲಿ, 2024ರ ಐಪಿಎಲ್​​ನಲ್ಲಿ 131.19 ಸ್ಟ್ರೈಕ್​ ರೇಟ್​ ಹೊಂದಿದ್ದರು. ಸದ್ಯ ಈಗ ನಡೆಯುತ್ತಿರುವ ಪಂದ್ಯದಲ್ಲಿ 146.15 ಸ್ಟ್ರೈಕ್​ ರೇಟ್​ ಹೊಂದಿರುವುದು ಬ್ರಿಲಿಯಂಟ್ ಆಗಿದೆ ಎಂದು ಹೇಳಿದ್ದಾರೆ.

ಕಳೆದ 2024ರ ಐಪಿಎಲ್​ ಸೀಸನ್​ನಲ್ಲಿ ಸ್ಪಿನ್ನರ್​ ವಿರುದ್ಧ ವಿರಾಟ್​ ಕೊಹ್ಲಿ ಪರ್ಫಾಮೆನ್ಸ್​ ಕೆಟ್ಟದಾಗಿತ್ತು. ಆ ಮೇಲೆ ಕೊಂಚ ಸುಧಾರಣೆ ಕಂಡುಕೊಂಡಿದ್ದರು. ಆದರೆ ಆರ್​ಸಿಬಿಯ ಉಳಿದ ಆಟಗಾರರು ಕಳೆದ ಬಾರಿ ಕೆಟ್ಟ ಪ್ರದರ್ಶನ ನೀಡಿದ್ದರಿಂದ ಪ್ಲೇ ಆಫ್​ಗೆ ಹೋಗಲು ಕಷ್ಟ ಆಗಿತ್ತು. 2025ರ ಸೀಸನ್​ನಲ್ಲಿ ಕೊಹ್ಲಿ ಹಾಗೂ ಎಲ್ಲ ಆಟಗಾರರ ಪ್ರದರ್ಶನದಿಂದ ಪಾಯಿಂಟ್​ ಪಟ್ಟಿಯಲ್ಲಿ ಆರ್​ಸಿಬಿ ಒಳ್ಳೆಯ ಸ್ಥಾನ ಪಡೆದಿದೆ ಎಂದು ಅವರು ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment