6,6,6,4,4,4,4,4,4,4; RCB ಸ್ಟಾರ್ ಪ್ಲೇಯರ್​​​​ ಫಿಲ್​ ಸಾಲ್ಟ್​ ಬ್ಯಾಟಿಂಗ್​​ಗೆ ಬೆಚ್ಚಿಬಿದ್ದ ಭಾರತ

author-image
Ganesh Nachikethu
Updated On
ಸ್ಫೋಟಕ ಬ್ಯಾಟರ್​​ ಟ್ರ್ಯಾಕ್​ ರೆಕಾರ್ಡ್​​ ಬೆಚ್ಚಿಬಿದ್ದ RCB; ಫಿಲ್​ ಸಾಲ್ಟ್​ ಖರೀದಿಗೆ ಪ್ಲಾನ್​ ಹೇಗಿತ್ತು ಗೊತ್ತಾ?
Advertisment
  • ಭಾರತ, ಇಂಗ್ಲೆಂಡ್​​ ನಡುವಿನ ಕೊನೆಯ ಟಿ20 ಪಂದ್ಯ!
  • ಆರ್​​ಸಿಬಿ ಸ್ಟಾರ್​ ಬ್ಯಾಟರ್​​ನಿಂದ ಅಬ್ಬರದ ಅರ್ಧಶತಕ
  • ಸಾಲ್ಟ್​​ ಬ್ಯಾಟಿಂಗ್​​ಗೆ​ ಬೆಚ್ಚಿಬಿದ್ದ ಟೀಮ್​ ಇಂಡಿಯಾ ಬೌಲರ್ಸ್​​

ಭಾರತ, ಇಂಗ್ಲೆಂಡ್​​ ನಡುವಿನ 5 ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಮುಗಿದಿದೆ. ಇಂದು ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​​ ಸ್ಟೇಡಿಯಮ್​ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಇಂಗ್ಲೆಂಡ್​​ ವಿರುದ್ಧ ಟೀಮ್​​ ಇಂಡಿಯಾ 150 ರನ್​​ಗಳಿಂದ ಗೆದ್ದು ಬೀಗಿದೆ.

ಭಾರತದ 248 ರನ್​ಗಳ ಬೃಹತ್​ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್​​​ ಕೇವಲ 97 ರನ್​ಗಳಿಗೆ ಆಲೌಟ್​ ಆಗಿದೆ. ಟೀಮ್​ ಇಂಡಿಯಾದ ಬೌಲರ್​ಗಳ ಆರ್ಭಟದ ಮುಂದೆ ಇಂಗ್ಲೆಂಡ್ ಬ್ಯಾಟರ್ಸ್​ ಮಂಕಾಗಿ ಹೋದರು.

ಉತ್ತಮ ಓಪನಿಂಗ್​​

ಪ್ರವಾಸಿ ಇಂಗ್ಲೆಂಡ್​ ಸಾಲಿಡ್​​ ಓಪನಿಂಗ್​ ಪಡೆದುಕೊಂಡಿತು. ಫಾರ್ಮ್​ಗೆ ಬಂದು ಭರ್ಜರಿ ಬ್ಯಾಟಿಂಗ್​ ಮಾಡಿದ ಫಿಲ್​ ಸಾಲ್ಟ್​ ಮೊದಲ ಓವರ್​ನಲ್ಲೇ 17 ರನ್​ ಚಚ್ಚಿದ್ರು. ಅಬ್ಬರದ ಆರಂಭದ ಬೆನ್ನಲ್ಲೇ ಆಂಗ್ಲರಿಗೆ ಆಘಾತ ಕಾದಿತ್ತು. ಫಿಲ್​ ಸಾಲ್ಟ್​ ಒಂದೆಡೆ ಆರ್ಭಟ ನಡೆಸುತ್ತಿದ್ರೆ, ಇನ್ನೊಂದೆಡೆ ಬೆನ್​ ಡಕೆಟ್​ ಸೊನ್ನೆ ಸುತ್ತಿದ್ರು.

ಕ್ಯಾಪ್ಟನ್​ ಜೋಸ್​ ಬಟ್ಲರ್​ ಕೂಡ ಔಟಾದ್ರು. 7 ರನ್​ಗಳಿಸಿದ್ದ ಆಂಗ್ಲ ನಾಯಕನ ಆಟಕ್ಕೆ ವರುಣ್​ ಚಕ್ರವರ್ತಿ ಅಂತ್ಯ ಹಾಡಿದ್ರು. 4ನೇ ಕ್ರಮಾಂಕದಲ್ಲಿ ಬಂದ ಸ್ಟಾರ್​ ಬ್ಯಾಟರ್​​ ಹ್ಯಾರಿ ಬ್ರೂಕ್ ಬಂದಷ್ಟೇ ವೇಗವಾಗಿ ಹೋದರು.

publive-image

ಫಿಲ್​ ಸಾಲ್ಟ್​ ಅಬ್ಬರ

ಬಳಿಕ ಮೈದಾನಕ್ಕಿಳಿದ ಲಿವಿಂಗ್​​ ಸ್ಟೋನ್​ ಬ್ಯಾಕ್​ ಟು ಬ್ಯಾಕ್​​​ ಬೌಂಡರಿ ಸಿಡಿಸಿ ಅಪಾಯಕಾರಿ ಸೂಚನೆ ನೀಡಿದ್ರು. ಆದ್ರೆ, ವರುಣ್​ ಚಕ್ರವರ್ತಿ ಅದಕ್ಕೆ ಅವಕಾಶ ನೀಡಲಿಲ್ಲ. ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಬಿದ್ರೂ ಕ್ರಿಸ್​ ಕಚ್ಚಿ ನಿಂತಿದ್ದ ಫಿಲ್​ ಸಾಲ್ಟ್​ ಅಬ್ಬರದ ಅರ್ಧಶತಕ ಸಿಡಿಸಿದ್ರು. 23 ಎಸೆತ ಎದುರಿಸಿದ ಸಾಲ್ಟ್ 7 ಬೌಂಡರಿ, 3 ಸಿಕ್ಸರ್​ ಸಹಿತ 55 ರನ್​ ಚಚ್ಚಿದ್ರು.

ಅರ್ಧಶತಕದ ಬೆನ್ನಲ್ಲೇ ಸಾಲ್ಟ್​ ಔಟಾದ್ರು, ಬ್ಯಾಟಿಂಗ್​ ಬಳಿಕ ಬೌಲಿಂಗ್​ನಲ್ಲೂ ಮ್ಯಾಜಿಕ್​ ಮಾಡಿದ ಅಭಿಶೇಕ್​ ಶರ್ಮಾ, ಬ್ರೆಂಡನ್​ ಕರ್ಸ್​, ಜೆಮ್ಮಿ ಓವರ್​ಟನ್​ಗೆ ಪೆವಿಲಿಯನ್​ ದಾರಿ ತೋರಿಸಿದ್ರು.

ಇದನ್ನೂ ಓದಿ:ಇಂಗ್ಲೆಂಡ್​​ ವಿರುದ್ಧ ಭಾರತಕ್ಕೆ ಬರೋಬ್ಬರಿ 150 ರನ್​​ಗಳ ಭರ್ಜರಿ ಜಯ; ಐತಿಹಾಸಿಕ ದಾಖಲೆ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment