RCB ಸ್ಟಾರ್​ ವಿರಾಟ್ ಬ್ಯಾಟಿಂಗ್ ಸ್ಪೀಡ್​ ಹೇಗಿದೆ..? ಈ ಐಪಿಎಲ್ ಚೇಸಿಂಗ್​ನಲ್ಲೂ ಕೊಹ್ಲಿ ಕಿಂಗ್!

author-image
Bheemappa
Updated On
RCB ಸ್ಟಾರ್​ ವಿರಾಟ್ ಬ್ಯಾಟಿಂಗ್ ಸ್ಪೀಡ್​ ಹೇಗಿದೆ..? ಈ ಐಪಿಎಲ್ ಚೇಸಿಂಗ್​ನಲ್ಲೂ ಕೊಹ್ಲಿ ಕಿಂಗ್!
Advertisment
  • ಆಸ್ಟ್ರೇಲಿಯಾದ ಬ್ಯಾಟರನನ್ನು ಹಿಂದಿಕ್ಕಲಿರುವ ವಿರಾಟ್ ಕೊಹ್ಲಿ
  • ಐಪಿಎಲ್​ ಇತಿಹಾಸದ ಶ್ರೇಷ್ಠ ಬ್ಯಾಟರ್​ ಎನಿಸಿಕೊಂಡ ವಿರಾಟ್
  • ಈ IPL​ನ ಚೇಸಿಂಗ್​ನಲ್ಲಿ ಎಷ್ಟು ಹಾಫ್​ಸೆಂಚುರಿ ಬಾರಿಸಿದ್ದಾರೆ?

ಟಾರ್ಗೆಟ್​​ ಎಷ್ಟೇ ದೊಡ್ಡದಿರಲಿ, ಎದುರಾಳಿ ಯಾರೇ ಇರಲಿ, ಎಷ್ಟೇ ಒತ್ತಡ ಇರಲಿ, ಅದೆಷ್ಟೇ ದೊಡ್ಡ ಬಿಗ್​ ಟೂರ್ನಮೆಂಟ್​ ಆಗಿರ್ಲಿ.. ಚೇಸಿಂಗ್​ ವೇಳೆ ಕೊಹ್ಲಿ ಕಣದಲ್ಲಿದ್ರೆ ಗೆಲುವು ನಮ್ದೇ. 36ರ ವಯಸ್ಸಿನಲ್ಲೂ ವಿರಾಟ್​ ಕೊಹ್ಲಿ ಆಟ, ಇದನ್ನು ಸಾರಿ ಸಾರಿ ಹೇಳ್ತಿದೆ.

ಮಾಡ್ರನ್​ ಡೇ ಕ್ರಿಕೆಟ್​ನ ಕಿಂಗ್​, ವಿಶ್ವ ಕ್ರಿಕೆಟ್​​ನ ರನ್​ ಮಷಿನ್, ದಿ ವಾರಿಯರ್​, ದಿ ಮಾಸ್ಟರ್​ ಆಫ್​ ಚೇಸಿಂಗ್. ಯೆಸ್ ಈ ವಿಶೇಷಣಗಳಿಗೆಲ್ಲಾ ಕೇರ್ ಆಫ್ ಅಡ್ರೆಸ್ ಒನ್​ & ಒನ್ಲಿ ಕಿಂಗ್​ ಕೊಹ್ಲಿ.

publive-image

ಕ್ರೀಸ್​​​ನಲ್ಲಿರುವ ತನಕ ರನ್ ಶಿಖರ ಕಟ್ಟುವ ಈ ರನ್ ​ಸರದಾರ, ಚೇಸಿಂಗ್ ವೇಳೆ ಅಖಾಡದಲ್ಲಿದ್ರೆ, ಎದುರಾಳಿಗೆ ಸೋಲು ಕಟ್ಟಿಟ್ಟ ಬುತ್ತಿ. ದಿ ವಾರಿಯರ್ ಕಿಂಗ್ ಕೊಹ್ಲಿಗೆ ಚೇಸಿಂಗ್ ಎಂಬ ಚಾಲೆಂಜ್ ಅಂದ್ರೆ, ಎಲ್ಲಿಲ್ಲದ ಇಷ್ಟ. ಚೇಸಿಂಗ್​ ಮಾಸ್ಟರ್​​ ಎಂದೇ ಕ್ರಿಕೆಟ್​ ಲೋಕದಲ್ಲಿ ಗುರುತಿಸಿಕೊಂಡಿರೋ ವಿರಾಟ್​​, ಈ ಸೀಸನ್​​ ಐಪಿಎಲ್​ನಲ್ಲೂ ಕ್ಲಾಸಿಕ್​ ಆಟದಿಂದ ಮಿಂಚುತ್ತಿದ್ದಾರೆ.

ಸೀಸನ್​​ 18ರ ಐಪಿಎಲ್​ನಲ್ಲಿ ಕೊಹ್ಲಿ ದರ್ಬಾರ್​​..!

ಸೀಸನ್​​-18ರ ಐಪಿಎಲ್.. ಕಿಂಗ್ ಕೊಹ್ಲಿಯ ಸೀಸನ್​ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ, ಈ ಐಪಿಎಲ್​ನಲ್ಲಿ ಜೆರ್ಸಿ ನಂಬರ್​​ 18ರ ದರ್ಬಾರ್​ ಅಷ್ಟು ಜೋರಾಗಿ ನಡೀತಿದೆ. ಪಂದ್ಯದಿಂದ ಪಂದ್ಯಕ್ಕೆ ಶೈನ್ ಆಗ್ತಿರುವ ವಿರಾಟ್​, ಆರ್​ಸಿಬಿ ತಂಡದ ಗೆಲುವಿನ ರೂವಾರಿಯಾಗಿದ್ದಾರೆ. ಅದ್ರಲ್ಲೂ ಚೇಸಿಂಗ್​ ವೇಳೆ ಕಿಂಗ್ ಕೊಹ್ಲಿ ಕಟ್ಟುತ್ತಿರುವ ಒಂದೊಂದು ಇನ್ನಿಂಗ್ಸ್​, ಚೇಸಿಂಗ್​ಗೆ ನಾನ್ಯಾಕೆ​​ ಮಾಸ್ಟರ್ ಅನ್ನೋದನ್ನ ನಿರೂಪಿಸ್ತಿವೆ.

ಪ್ರಸಕ್ತ ಐಪಿಎಲ್​​ ಸೀಸನ್​ನಲ್ಲಿ ಸಾಲಿಡ್ ಬ್ಯಾಟಿಂಗ್ ನಡೆಸ್ತಿರುವ ವಿರಾಟ್, ಬ್ಯಾಟ್​ ಬೀಸಿರುವ 11 ಪಂದ್ಯಗಳಿಂದ 63.13ರ ಸರಾಸರಿಯಲ್ಲಿ 505 ರನ್​ ಕೊಳ್ಳೆ ಹೊಡೆದಿದ್ದಾರೆ. 143.46ರ ಸ್ಟ್ರೈಕ್​ರೇಟ್​ನಲ್ಲಿ ರನ್ ಗಳಿಸಿರುವ ವಿರಾಟ್​, ಒಂದಲ್ಲ, ಎರಡಲ್ಲ ಬರೋಬ್ಬರಿ 7 ಬಾರಿ ಹಾಫ್​​ ಸೆಂಚುರಿ ದಾಖಲಿಸಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಈ ಪೈಕಿ 4 ಅರ್ಧಶತಕಗಳು ಚೇಸಿಂಗ್ ವೇಳೆ ಸಿಡಿದಿವೆ.

ಚೇಸಿಂಗ್​​ ವೇಳೆ ಅರ್ಧಶತಕ ಮಿಸ್ಸೇ ಇಲ್ಲ..!

ಹೈಫ್ರಷರ್​ ಟೈಮ್​ನಲ್ಲಿ ಅರ್ಧಶತಕದ ಗಡಿ ದಾಟುವುದು ಸುಲಭದ ಮಾತಲ್ಲ. ಆದ್ರೆ, ವಿರಾಟ್ ಕೊಹ್ಲಿ ಈ ಕೆಲಸವನ್ನ ಸಿಕ್ಕಾಪಟ್ಟೆ ಸುಲಭ ಅನಿಸಿಬಿಟ್ಟಿದ್ದಾರೆ. ಚೇಸಿಂಗ್ ವೇಳೆ ಈವರೆಗೆ 4 ಅರ್ಧಶತಕಗಳನ್ನ ವಿರಾಟ್​ ಸಿಡಿಸಿದ್ದಾರೆ. ಈ ಪೈಕಿ 3 ಇನ್ನಿಂಗ್ಸ್​ಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ. ಚೇಸಿಂಗ್​ನ ಪ್ರತಿ ಮ್ಯಾಚ್​ನಲ್ಲಿ ಅರ್ಧಶತಕ ಸಿಡಿಸಿರುವ ವಿರಾಟ್​, 4 ಪಂದ್ಯಗಳಿಂದ 245 ರನ್ ಗಳಿಸಿದ್ದಾರೆ.

ಚೇಸಿಂಗ್​​ ವೇಳೆ ವಿರಾಟ್​ ಕೊಹ್ಲಿ

ಕೆಕೆಆರ್ ಎದುರಿನ ಪಂದ್ಯದಲ್ಲಿ 36 ಎಸೆತದಲ್ಲಿ ಅಜೇಯ 59 ರನ್ ಗಳಿಸಿದ್ದ ವಿರಾಟ್​, ರಾಜಸ್ಥಾನ್​​​ ಎದುರು 45 ಎಸೆತಗಳಲ್ಲಿ ಅಜೇಯ 62 ರನ್ ಸಿಡಿಸಿ ವಿಶ್ವರೂಪ ತೋರಿಸಿದ್ರು. ಪಂಜಾಬ್ ಎದುರು 54 ಎಸೆತಗಳಲ್ಲಿ ಅಜೇಯ 73 ರನ್ ಸಿಡಿಸಿದ್ದ ವಿರಾಟ್, ಡೆಲ್ಲಿ ಎದುರು 47 ಎಸೆತಗಳಲ್ಲಿ 51 ರನ್​​​​​​​​ ಗಳಿಸಿದ್ರು.

ಇದನ್ನೂ ಓದಿ: RCBಗೆ ಆತಂಕ ತಂದ ಮಳೆಯಲ್ಲಿ ಕೊಚ್ಚಿ ಪಂದ್ಯ.. ಪಾಯಿಂಟ್​ ಟೇಬಲ್​ನಲ್ಲಿ 3ನೇ ಸ್ಥಾನಕ್ಕೆ ಬಂದ್ರೆ ಕಷ್ಟ!

publive-image

IPLನಲ್ಲಿ ದಾಖಲೆಯ ಅರ್ಧಶತಕಕ್ಕೆ ಒಂದೇ ಹೆಜ್ಜೆ..!

ಐಪಿಎಲ್​ನಲ್ಲಿ ಬರೋಬ್ಬರಿ 62 ಅರ್ಧಶತಕಗಳನ್ನ ವಿರಾಟ್ ಸಿಡಿಸಿದ್ದಾರೆ. 62 ಹಾಫ್​ಸೆಂಚುರಿ ಪೈಕಿ 28 ಅರ್ಧಶತಕಗಳು ಚೇಸಿಂಗ್ ವೇಳೆ ಬಂದಿವೆ. ಸದ್ಯ 62 ಬಾರಿ ಹಾಫ್​ ಸೆಂಚುರಿ ಗಡಿ ದಾಟಿರುವ ವಿರಾಟ್​ ಕೊಹ್ಲಿ ಇನ್ನೊಂದು ಅರ್ಧಶತಕ ಗಳಿಸಿದ್ರೆ, ಐಪಿಎಲ್​ನಲ್ಲಿ ಗರಿಷ್ಠ ಅರ್ಧಶತಕ ಸಿಡಿಸಿದ ಆಟಗಾರ ಎಂಬ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಆಸ್ಟ್ರೇಲಿಯಾ ಡೇವಿಡ್ ವಾರ್ನರ್​ನ ಹಿಂದಿಕ್ಕಿಲಿದ್ದಾರೆ.

ಐಪಿಎಲ್​ ಇತಿಹಾಸದ ಶ್ರೇಷ್ಠ ಬ್ಯಾಟರ್​ ಎನಿಸಿಕೊಂಡಿರೋ ವಿರಾಟ್, ಪ್ರಸಕ್ತ ಆವೃತ್ತಿಯಲ್ಲೂ ರನ್​ ಬೇಟೆಯಾಡ್ತಿದ್ದಾರೆ. ಎದುರಾಳಿ ಮೇಲೆ ದಂಡೆಯಾತ್ರೆ ನಡೆಸ್ತಿದ್ದಾರೆ. ಯುವ ಆಟಗಾರರಿಗೆ ಪೈಪೋಟಿ ಕೊಡ್ತಿರೋ ವಿರಾಟ್, ಐಪಿಎಲ್ ಅಖಾಡಲ್ಲಿ ಮತ್ತಷ್ಟು ಘರ್ಜಿಸಲಿ, ಟ್ರೋಫಿ ಗೆಲ್ಲಿಸಿಕೊಡಲಿ ಅನ್ನೋದೆ ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment