ಮಹತ್ವದ ಪಂದ್ಯಕ್ಕೆ ಟೀಮ್​ ಇಂಡಿಯಾಗೆ RCB ಸ್ಟಾರ್​ ಎಂಟ್ರಿ; ತಂಡಕ್ಕೆ ಬಂತು ಆನೆಬಲ

author-image
Ganesh Nachikethu
Updated On
ಮಹತ್ವದ ಪಂದ್ಯಕ್ಕೆ ಟೀಮ್​ ಇಂಡಿಯಾಗೆ RCB ಸ್ಟಾರ್​ ಎಂಟ್ರಿ; ತಂಡಕ್ಕೆ ಬಂತು ಆನೆಬಲ
Advertisment
  • ಟೀಮ್​ ಇಂಡಿಯಾ, ಸೌತ್​ ಆಫ್ರಿಕಾ ಮಧ್ಯೆ 3ನೇ ಟಿ20 ಪಂದ್ಯ
  • ಮಹತ್ವದ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿ ಭಾರತ ತಂಡ!
  • ಭಾರತ ತಂಡಕ್ಕೆ ಆರ್​​ಸಿಬಿ ಸ್ಟಾರ್​ ಬ್ಯಾಟರ್​​​ ಎಂಟ್ರಿ ಸಾಧ್ಯತೆ

ಇತ್ತೀಚೆಗೆ ನಡೆದ 2ನೇ ಟಿ20 ಪಂದ್ಯದಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಮ್​​ ಇಂಡಿಯಾ ಸೋಲು ಕಂಡಿದೆ. ಮೊದಲ ಪಂದ್ಯದಿಂದ 61 ರನ್​​ಗಳಿಂದ ರೋಚಕ ಗೆಲುವು ಸಾಧಿಸಿದ್ದ ಟೀಮ್​ ಇಂಡಿಯಾ 2ನೇ ಟಿ20 ಮ್ಯಾಚ್​​​ ಸೋಲಿಗೆ ಕಾರಣ ಬ್ಯಾಟಿಂಗ್​ ವೈಫಲ್ಯ.

ಇನ್ನು, 3ನೇ ಟಿ20 ಪಂದ್ಯ ಗೆದ್ದು ಹೇಗಾದ್ರೂ ಟಿ20 ಸರಣಿ ವಶಪಡಿಸಿಕೊಳ್ಳೋ ಯೋಚನೆಯಲ್ಲಿ ಟೀಮ್​ ಇಂಡಿಯಾ ಇದೆ. ಅದಕ್ಕಾಗಿ ಕ್ಯಾಪ್ಟನ್​​ ಸೂರ್ಯಕುಮಾರ್ ಯಾದವ್ ಭರ್ಜರಿ ಸರ್ಕಸ್​​ ಮಾಡುತ್ತಿದ್ದಾರೆ. ಮುಂದಿನ ಪಂದ್ಯಕ್ಕೆ ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​​ನಲ್ಲಿ ಮೇಜರ್​​​ ಸರ್ಜರಿ ಆಗಲಿದೆ. ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಯಶ್​ ದಯಾಳ್​​​​ ಡೆಬ್ಯೂ ಮಾಡಲಿದ್ದಾರೆ.

ಸಂಜು ಸ್ಯಾಮ್ಸನ್​ ಮೇಲೆ ಎಲ್ಲರ ಕಣ್ಣು

ಟೀಮ್​ ಇಂಡಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ಸೌತ್​ ಆಫ್ರಿಕಾಗೆ ಹೀನಾಯ ಸೋಲಾಗಿತ್ತು. ಕೇವಲ 17.5 ಓವರ್​​ನಲ್ಲೇ ಆಲೌಟ್​ ಆದ ಕಾರಣ 20 ಓವರ್​ ಆಡಲು ಆಗಿರಲಿಲ್ಲ. ಮೊದಲ ಟಿ20 ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ದಾಖಲೆ ಬರೆದಿದ್ದ ಸಂಜು ಸ್ಯಾಮ್ಸನ್​​ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಆದರೆ, 2ನೇ ಪಂದ್ಯದಲ್ಲಿ ಸ್ಯಾಮ್ಸನ್​ ಡಕೌಟ್​ ಆದ್ರು. ಮುಂದಿನ ಪಂದ್ಯದಲ್ಲಿ ಇವರ ಮೇಲೆ ಬಹಳ ಭರವಸೆ ಇದೆ.

ಸೆಂಚೂರಿ ಸ್ಟಾರ್​​ಗೆ ಗೇಟ್​​ಪಾಸ್​​

ಟೀಮ್ ಇಂಡಿಯಾದ ಸ್ಟಾರ್​ ಯುವ ಬ್ಯಾಟರ್​ ಅಭಿಷೇಕ್‌ ಶರ್ಮಾ. ಇವರು ರನ್‌ ಕಲೆ ಹಾಕುವಲ್ಲಿ ಫೇಲ್ಯೂರ್​ ಆಗುತ್ತಿದ್ದಾರೆ. ಹೀಗಾಗಿ ಟೀಮ್​ ಇಂಡಿಯಾಗೆ ಅಭಿಷೇಕ್​ ಶರ್ಮಾ ಅವರದ್ದು ದೊಡ್ಡ ಚಿಂತೆಯಾಗಿದೆ. ಕಾರಣ ಇವರು ಇದುವರೆಗೆ ಆಡಿರೋ 9 ಇನ್ನಿಂಗ್ಸ್​​ನಲ್ಲಿ 1 ಶತಕ ಸಿಡಿಸಿದ್ರು. ಉಳಿದ 7 ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್​ ಹೈಎಸ್ಟ್​​ ಸ್ಕೋರ್​​ ಕೇವಲ 16 ರನ್​​. ನಿನ್ನೆಯೂ ಅಭಿಷೇಕ್​​ ಕೇವಲ 4 ರನ್​ಗೆ ವಿಕೆಟ್​​ ಒಪ್ಪಿಸಿದ್ರು. ಹೀಗಾಗಿ ಇವರು ರನ್​ ಕಲೆ ಹಾಕದೆ ಹೋದಲ್ಲಿ ಮುಂದಿನ ಎಲ್ಲಾ ಪಂದ್ಯಗಳಿಂದಲೂ ಗೇಟ್​​ಪಾಸ್​ ನೀಡುವ ಸಾಧ್ಯತೆ ಇದೆ.

ಮಧ್ಯಮ ಕ್ರಮಾಂಕದ ಬ್ಯಾಟರ್ಸ್​ ಅಬ್ಬರಿಸಲೇಬೇಕು

ಟೀಮ್ ಇಂಡಿಯಾದ ಪರ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಿಂಕು ಸಿಂಗ್ ಇದ್ದಾರೆ. ಇವರು ಸ್ಥಿರ ಪ್ರದರ್ಶನ ನೀಡಬೇಕಿದೆ. ಸ್ಟಾರ್​ ಆಲ್​ರೌಂಡರ್ಸ್​ ಆದ ಹಾರ್ದಿಕ್​ ಪಾಂಡ್ಯ, ಅಕ್ಷರ್ ಪಟೇಲ್‌ ತಮ್ಮ ಕ್ಷಮತೆ ಪ್ರದರ್ಶಿಸಲೇಬೇಕಿದೆ.

2ನೇ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಅರ್ಷದೀಪ್‌ ಸಿಂಗ್​​ ಬದಲಿಗೆ ಆರ್​​ಸಿಬಿ ಸ್ಟಾರ್​​ ಬೌಲರ್​​​ ಡೆಬ್ಯೂ ಮಾಡುವ ಸಾಧ್ಯತೆ ಇದೆ. ರವಿ ಬಿಷ್ಣೋಯ್​ ಮತ್ತು ವರುಣ್​ ಚಕ್ರವರ್ತಿ ಕೂಡ ತಂಡದ ಭಾಗವಾಗಿ ಇರಲಿದ್ದಾರೆ.

ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​ ಹೀಗಿದೆ!

ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್​), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಯಶ್​​ ದಯಾಳ್​, ಆವೇಶ್​ ಖಾನ್​​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment