/newsfirstlive-kannada/media/post_attachments/wp-content/uploads/2024/12/Devdutt-Padikkal-News.jpg)
ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಸ್ಟಾರ್ ಕನ್ನಡಿಗನನ್ನು ಖರೀದಿಸುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಶಸ್ವಿಯಾಗಿದೆ. ತನ್ನ ಐಪಿಎಲ್ ವೃತ್ತಿಜೀವನವನ್ನು ಆರ್ಸಿಬಿಯಿಂದಲೇ ಶುರು ಮಾಡಿದ್ದ ಸ್ಟಾರ್ ಬ್ಯಾಟರ್ ದೇವದತ್ ಪಡಿಕ್ಕಲ್ ಅವರು 2 ಕೋಟಿ ಬೇಸ್ ಪ್ರೈಸ್ಗೆ ಬೆಂಗಳೂರು ತಂಡದ ಪಾಲಾಗಿದ್ದಾರೆ.
ಲಕ್ನೋ ತಂಡದಿಂದ ಪಡಿಕ್ಕಲ್ ರಿಲೀಸ್
ಕಳೆದ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದ ಪಡಿಕ್ಕಲ್ಗೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ. ಇವರಿಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಲಿಲ್ಲ. ಹೀಗಾಗಿ ಲಕ್ನೋ ತಂಡ ಕನ್ನಡಿಗ ಪಡಿಕ್ಕಲ್ ಅವರನ್ನು ರಿಲೀಸ್ ಮಾಡಿತ್ತು.
ಆರ್ಸಿಬಿ ಪರ ಪಡಿಕ್ಕಲ್ ಭರ್ಜರಿ ಪ್ರದರ್ಶನ
ದೇವದತ್ ಪಡಿಕ್ಕಲ್ ಆರ್ಸಿಬಿ ಸೇರುತ್ತಿರುವುದು ಇದೇ ಮೊದಲಲ್ಲ. 2020ರ ಐಪಿಎಲ್‌ನಲ್ಲಿ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪಡಿಕ್ಕಲ್ ಪ್ರತಿನಿಧಿಸಿದ್ದರು. ತನ್ನ ಚೊಚ್ಚಲ ಐಪಿಎಲ್ ಸೀಸನ್ನಲ್ಲೇ 5 ಅರ್ಧ ಶತಕಗಳ ಸಹಾಯದಿಂದ 473 ರನ್ ಚಚ್ಚಿದ್ರು. 2021ರ ಸೀಸನ್ನಲ್ಲಿ ಪಡಿಕ್ಕಲ್ ಒಂದು ಶತಕ ಮತ್ತು ಅರ್ಧಶತಕದ ಸಹಾಯದಿಂದ 411 ರನ್ ಬಾರಿಸಿದ್ರು. 2 ಸೀಸನ್ನಲ್ಲೂ ಆರ್ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ್ರೂ ಇವರನ್ನು 2022ರ ಮೆಗಾ ಹರಾಜಿಗೆ ಮುನ್ನ ಬಿಡುಗಡೆ ಮಾಡಲಾಗಿತ್ತು.
ಪಡಿಕ್ಕಲ್ಗೆ ಬಿಗ್ ಶಾಕ್
2022ರ ಐಪಿಎಲ್‌ನಲ್ಲಿ ರಾಜಸ್ಥಾನ್ ಪರ 376 ರನ್ ಬಾರಿಸಿದ್ದ ಪಡಿಕ್ಕಲ್, ಐಪಿಎಲ್ 2023ರಲ್ಲಿ 261 ರನ್ ಮಾತ್ರ ಕಲೆ ಹಾಕಿದ್ದರು. 2024ರಲ್ಲಿ ಲಕ್ನೋ ತಂಡ ಸೇರಿದ್ದ ಪಡಿಕ್ಕಲ್ 7 ಪಂದ್ಯಗಳನ್ನು ಆಡಿ ಕೇವಲ 38 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಇವರನ್ನು ಮುಂದಿನ ಸೀಸನ್ನಲ್ಲಿ ಆರ್ಸಿಬಿ ಬೆಂಚ್ ಕಾಯಿಸಬಹುದು. ಇವರು ಆರ್ಸಿಬಿ ಪರ ಓಪನಿಂಗ್ ಅಥವಾ 1ನೇ ಕ್ರಮಾಂಕದಲ್ಲಿ ಆಡಬಹುದು. ಸದ್ಯ ಆರ್ಸಿಬಿಗೆ ಓಪನಿಂಗ್ ಮಾಡಲು ಫಿಲ್ ಸಾಲ್ಟ್ ಇದ್ದು, 1ನೇ ಕ್ರಮಾಂಕದಲ್ಲಿ ಜೇಕಬ್ ಬೆಥೆಲ್ ಅವರನ್ನು ಆಡಿಸಬಹುದು. ಹೀಗಾಗಿ ಪಡಿಕ್ಕಲ್ ಆರ್ಸಿಬಿಗೆ ಕೇವಲ ಬ್ಯಾಕಪ್ ಪ್ಲೇಯರ್ ಆಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಇದನ್ನೂ ಓದಿ: ಕೈ ಕೊಟ್ಟ ಕೊಹ್ಲಿ, ರೋಹಿತ್; ಭಾರತ ತಂಡದ ಮರ್ಯಾದೆ ಉಳಿಸಿದ ಆಟಗಾರರು ಇವರೇ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ