newsfirstkannada.com

ಕೇವಲ 10 ಬಾಲ್​ನಲ್ಲಿ 28 ರನ್​ ಚಚ್ಚಿದ ದಿನೇಶ್​​ ಕಾರ್ತಿಕ್​​; ಈ ಬಗ್ಗೆ ಹೇಳಿದ್ದೇನು..?

Share :

Published March 26, 2024 at 8:40pm

Update March 26, 2024 at 8:47pm

    ಪಂಜಾಬ್​​ ವಿರುದ್ಧ ಗೆದ್ದು ಬೀಗಿದ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು

    ಪಂದ್ಯದಲ್ಲಿ ಆರ್​​​ಸಿಬಿ ಫಿನಿಶರ್​ ದಿನೇಶ್​ ಕಾರ್ತಿಕ್​​ ಅದ್ಭುತ ಬ್ಯಾಟಿಂಗ್​..!​​

    ತನ್ನ ಬ್ಯಾಟಿಂಗ್​ ಬಗ್ಗೆ ಸ್ಟಾರ್​ ಫಿನಿಶರ್​​ ದಿನೇಶ್​ ಕಾರ್ತಿಕ್​ ಹೇಳಿದ್ದೇನು..?

ಇತ್ತೀಚೆಗೆ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ 6ನೇ ಪಂದ್ಯದಲ್ಲಿ ಪಂಜಾಬ್​​ ಕಿಂಗ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ರೋಚಕ ಗೆಲುವು ಸಾಧಿಸಿದೆ. ಟಾಸ್ ಸೋತರೂ ಫಸ್ಟ್​ ಬ್ಯಾಟಿಂಗ್​​​ ಮಾಡಿದ ಪಂಜಾಬ್​​​ 176 ರನ್​ ಗಳಿಸಿ ಬಿಗ್​ ಟಾರ್ಗೆಟ್​​ ನೀಡಿತ್ತು. ಈ ರನ್​ ಚೇಸ್​ ಮಾಡಿದ ಆರ್​​​ಸಿಬಿ ನಿಗದಿತ 19.2 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್​ ಗಳಿಸಿ ಗೆದ್ದು ಬೀಗಿದೆ.

ಇನ್ನು, ಈ ಪಂದ್ಯದ ಗೆಲುವಿನ ರುವಾರಿ ದಿನೇಶ್​ ಕಾರ್ತಿಕ್ ಎಂದರೆ ತಪ್ಪಾಗಲಾರದು​. ಬ್ಯಾಟ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡೂ ಸಂಕಷ್ಟದಲ್ಲಿದ್ದ ಆರ್​​ಸಿಬಿ ಕೈ ಹಿಡಿದ ಕೊಹ್ಲಿ 2 ಸಿಕ್ಸರ್​​, 11 ಫೋರ್​ ಸಿಡಿಸಿ 77 ರನ್​ ಪೇರಿಸಿದ್ರು. ಕೊಹ್ಲಿ ವಿಕೆಟ್ ಪತವಾಗುತ್ತಿದ್ದಂತೆ ಪಂದ್ಯ ಪಂಜಾಬ್​ ಕಡೆ ವಾಲಿತ್ತು. ಆಗ ಬಂದ ದಿನೇಶ್​ ಕಾರ್ತಿಕ್​​​ ಪಂದ್ಯದ ದಿಕ್ಕನ್ನೇ ಬದಲಿಸಿದ್ರು. ತಾನು ಎದುರಿಸಿದ ಕೇವಲ 10 ಬಾಲ್​ನಲ್ಲಿ ದಿನೇಶ್​ ಕಾರ್ತಿಕ್​​ 2 ಸಿಕ್ಸರ್​​, 3 ಫೋರ್​ ಸಮೇತ 28 ರನ್​​ ಸಿಡಿಸಿ ಬೆಂಗಳೂರನ್ನು ಗೆಲ್ಲಿಸಿದ್ರು.

ಆರ್​​​ಸಿಬಿ ಗೆದ್ದ ಬಳಿಕ ಮಾತಾಡಿದ ದಿನೇಶ್​​ ಕಾರ್ತಿಕ್​​, ನಾನು ಸಂಪೂರ್ಣ ಕಂಟ್ರೋಲ್​ನಲ್ಲಿ ಇರಲಿಲ್ಲ. ಬ್ಯಾಟು ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಆರ್​​ಸಿಬಿ ಸಂಕಷ್ಟಕ್ಕೆ ಸಿಲುಕಿತ್ತು. ಆಗ ಮಹಿಪಾಲ್​​​ ಬಂದು ನನ್ನ ಮೇಲಿನ ಒತ್ತಡ ಕಡಿಮೆ ಮಾಡಿದ್ರು. ಆತ ಸಿಡಿಸಿದ ಸಿಕ್ಸರ್​ ಕ್ರೂಷಿಯಲ್​ ಆಗಿತ್ತು. ಹರ್ಷಲ್ ಆಗಾಗ ಪ್ರೆಶರ್​ ಕ್ರಿಯೇಟ್​ ಮಾಡಲು ಸ್ಲೋ ಬಾಲ್​ ಹಾಕುತ್ತಾನೆ. ಅದಕ್ಕಾಗಿ ಕಾದು ಸಿಕ್ಸ್​​ ಹೊಡೆದೆ ಎಂದರು.

ಇದನ್ನೂ ಓದಿ: VIDEO: ಡಿಕೆ ಸಿಕ್ಸರ್​ ಸಿಡಿಸಿದಾಗ ಕುಣಿದು ಕುಪ್ಪಳಿಸಿದ ಕೊಹ್ಲಿ; ಹೇಗಿತ್ತು ವಿರಾಟ್​​ ರಿಯಾಕ್ಷನ್..​​?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇವಲ 10 ಬಾಲ್​ನಲ್ಲಿ 28 ರನ್​ ಚಚ್ಚಿದ ದಿನೇಶ್​​ ಕಾರ್ತಿಕ್​​; ಈ ಬಗ್ಗೆ ಹೇಳಿದ್ದೇನು..?

https://newsfirstlive.com/wp-content/uploads/2024/03/Dinesh-Karthik_RCB1.jpg

Load More