/newsfirstlive-kannada/media/post_attachments/wp-content/uploads/2025/05/JITESH-SHARMA-4.jpg)
ಆರ್ಸಿಬಿ ಸೆನ್ಸೇಷನಲ್ ಕ್ಯಾಪ್ಟನ್ ಜಿತೇಶ್ ಶರ್ಮಾ ಸಖತ್ ಟ್ರೆಂಡಿಂಗ್ನಲ್ಲಿದ್ದಾರೆ. ಅದಕ್ಕೆ ಕಾರಣ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಲಕ್ನೋ ವಿರುದ್ಧ ಆಡಿದ ಆಟ. ನಾಯಕ ರಜತ್ ಪಾಟೀದಾರ್ ಅನುಪಸ್ಥಿತಿಯಲ್ಲಿ ಜಿತೇಶ್ ತಂಡವನ್ನು ಲೀಡ್ ಮಾಡಿದ್ದರು. ಅದರಲ್ಲಿ ಲಕ್ನೋ ವಿರುದ್ಧದ ಪಂದ್ಯ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತೆ ಮಾಡಿದೆ.
ಇದನ್ನೂ ಓದಿ: ಸೋಲಿಗೆ ಕಾರಣ ತಿಳಿಸಿದ ಶ್ರೇಯಸ್ ಅಯ್ಯರ್.. ಹೊಣೆ ಮಾಡಿದ್ದು ಯಾರನ್ನ..?
ಜಿತೇಶ್ ಪ್ರೇಮಕತೆ ಗೊತ್ತಾ..?
ಜಿತೇಶ್ ಶರ್ಮಾ 2024 ರಲ್ಲಿ ಶಲಾಕಾ ಮಕೇಶ್ವರ್ (Shalaka Makeshwar) ಅವರನ್ನು ಮದುವೆ ಆಗಿದ್ದಾರೆ. ಶಲಾಕಾ ಎಂ.ಟೆಕ್ ಪದವಿದರೆ. ವರದಿಗಳ ಪ್ರಕಾರ, ಶಲಾಕಾ ಮಹಾರಾಷ್ಟ್ರದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾರೆ. ಶಲಾಕಾ ಮತ್ತು ಜಿತೇಶ್ ತುಂಬಾ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದರು. ಮದುವೆಗೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿದ್ದವು. ಜಿತೇಶ್ರನ್ನು ಬೆಂಬಲಿಸಲು ಶಲಾಕಾ ಆಗಾಗ ಮೈದಾನಕ್ಕೆ ಬರುತ್ತಾರೆ. ಜಿತೇಶ್ ಶರ್ಮಾ ಕೂಡ ಶಲಾಕಾಗೆ ಸಪೋರ್ಟಿವ್ ಆಗಿದ್ದಾರೆ.
ಇದನ್ನೂ ಓದಿ: ಪ್ರತಿ RCB ಪಂದ್ಯದಲ್ಲೂ ಅನುಷ್ಕಾ ಶರ್ಮಾ ಪಕ್ಕದಲ್ಲಿ ಕೂರುವ ಈ ಮಹಿಳೆ ಯಾರು..?
ಜಿತೇಶ್ ಶರ್ಮಾ ಆಡುವ ಪಂದ್ಯಗಳ ವೀಕ್ಷಣೆಗೆ ಬರುವ ಶಲಾಕ ವೀಕ್ಷಕರ ಗ್ಯಾಲರಿಯಲ್ಲಿ ಕೂತು ಹುರಿದುಂಬಿಸುತ್ತಾರೆ. ಸೋತಾಗ ಸಂತೈಸ್ತಾರೆ. ಗೆದ್ದಾಗ ಪತಿ ಜೊತೆ ಸೇರಿ ಸಂಭ್ರಮಿಸ್ತಾರೆ. ಇನ್ನು, ಲಕ್ನೋ ವಿರುದ್ಧದ ಮ್ಯಾಚ್ನಲ್ಲಿ ಜಿತೇಶ್ ಶರ್ಮಾ, 33 ಎಸೆತಗಳಲ್ಲಿ 85 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಒಟ್ಟು 8 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಬಾರಿಸಿದರು.
ಇದನ್ನೂ ಓದಿ: ಪ್ರತಿ RCB ಪಂದ್ಯದಲ್ಲೂ ಅನುಷ್ಕಾ ಶರ್ಮಾ ಪಕ್ಕದಲ್ಲಿ ಕೂರುವ ಈ ಮಹಿಳೆ ಯಾರು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ