/newsfirstlive-kannada/media/post_attachments/wp-content/uploads/2024/10/IND-vs-AUS.jpg)
ನಾಳೆ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಮಧ್ಯೆ ಮೂರನೇ ಮಹತ್ವದ ಟೆಸ್ಟ್ ನಡೆಯಲಿದೆ. ಬ್ರಿಸ್ಬೇನ್‌ನಲ್ಲಿ ನಡೆಯಲಿರೋ ಮಹತ್ವದ ಟೆಸ್ಟ್ ಗೆಲುವಿಗೆ ಟೀಮ್ ಇಂಡಿಯಾ ಭರ್ಜರಿ ತಯಾರಿ ನಡೆಸಿಕೊಂಡಿದೆ. ಇದರ ಮಧ್ಯೆ ಆರ್‌ಸಿಬಿ ಫ್ಯಾನ್ಸ್ ಗುಡ್ನ್ಯೂಸ್ ಒಂದಿದೆ.
ಟೀಮ್ ಇಂಡಿಯಾಗೆ ಕಾಡಲು ಆಸ್ಟ್ರೇಲಿಯಾದ ತಂಡದಲ್ಲಿ ಆರ್‌ಸಿಬಿ ಸ್ಟಾರ್ ವೇಗಿ ಸ್ಥಾನ ಪಡೆದಿದ್ದಾರೆ. 2ನೇ ಟೆಸ್ಟ್ನಿಂದ ದೂರ ಉಳಿದಿದ್ದ ಆರ್‌ಸಿಬಿ ಸ್ಟಾರ್ ವೇಗಿ ಜೋಶ್ ಹೇಜಲ್ವುಡ್ 3ನೇ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಸೇರಿಕೊಂಡಿದ್ದಾರೆ. ಆರ್‌ಸಿಬಿ ಸ್ಟಾರ್ ಎಂಟ್ರಿಯಿಂದ ಆಸ್ಟ್ರೇಲಿಯಾ ತಂಡದ ಮನೋಬಲ ಹೆಚ್ಚಾಗಿದೆ.
ಹೇಜಲ್ವುಡ್ ಬಗ್ಗೆ ಆಸೀಸ್ ಕ್ಯಾಪ್ಟನ್ ಏನಂದ್ರು?
ಇನ್ನು, ಈ ಕುರಿತು ಮಾತಾಡಿದ ಆಸ್ಟ್ರೇಲಿಯಾ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಅವರು, ಹೇಜಲ್ವುಡ್ ಅವರು ಸಂಪೂರ್ಣ ಚೇತರಿಕೆ ಕಂಡಿದ್ದಾರೆ. ಇವರ ಮೇಲೆ ವೈದ್ಯಕೀಯ ತಂಡ ನಿಗಾ ಇಟ್ಟಿದೆ. ಆಡಿಲೇಡ್ ಟೆಸ್ಟ್ನಲ್ಲೂ ಇವರು ಹಲವು ಮಹತ್ವದ ಓವರ್ಗಳನ್ನು ಎಸೆದರು ಎಂದರು.
ಹೇಜಲ್ವುಡ್ ತಂಡಕ್ಕೆ ವಾಪಸ್ ಆಗಿದ್ದು, ಬೋಲೆಂಡ್ ನಾಳೆ ಪಂದ್ಯದಿಂದ ಹೊರ ನಡೆಯಲಿದ್ದಾರೆ. ಬೋಲೆಂಡ್ಗೆ 4 ಮತ್ತು 5ನೇ ಟೆಸ್ಟ್ನಲ್ಲಿ ಅವಕಾಶ ಸಿಗಬಹುದು. ನಾವು ಅವರ ಪ್ರತಿಭೆಯನ್ನು ಗುರುತಿಸಿದ್ದೇವೆ ಎಂದರು.
ಹಾಡಿಹೊಗಳಿದ ಪ್ಯಾಟ್ ಕಮಿನ್ಸ್
ಬೋಲೆಂಡ್ ಅವರನ್ನು ತಂಡದಿಂದ ಹೊರಗಿಡುವುದು ದೊಡ್ಡ ನಿರ್ಧಾರ. ಇವರು ಕೆಲವು ದಿನಗಳ ಕಾಲ ಬೆಂಚ್ ಕಾಯಲೇಬೇಕು. ತನಗೆ ಸಿಕ್ಕ ಅವಕಾಶದಲ್ಲಿ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದರು ಎಂದಿದ್ದಾರೆ.
ಇದನ್ನೂ ಓದಿ:ಇಶಾನ್ ಕಿಶನ್ಗೆ RCB ಕೋಚ್ನಿಂದ ಅವಮಾನ; ನಾಲಿಗೆ ಹರಿಬಿಟ್ಟ ದಿನೇಶ್ ಕಾರ್ತಿಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ