ಆರ್​​ಸಿಬಿ ಸ್ಟಾರ್​​​ ಪ್ಲೇಯರ್​ಗೆ ಮಾಸ್ಟರ್​ ಸ್ಟ್ರೋಕ್​​; ತಂಡದಿಂದಲೇ ಔಟ್​​

author-image
Ganesh Nachikethu
Updated On
2025ರ ಐಪಿಎಲ್​​ ಲೀಗ್​: ದೇಶೀಯ ಪ್ರತಿಭೆಗೆ ಆರ್​​ಸಿಬಿಯ ಕ್ಯಾಪ್ಟನ್ಸಿ ಪಟ್ಟ
Advertisment
  • ಟೀಮ್​ ಇಂಡಿಯಾ, ಇಂಗ್ಲೆಂಡ್ ನಡುವೆ 3ನೇ ಟಿ20 ಪಂದ್ಯ
  • ರಾಜ್​​ಕೋಟ್​​​ ಸ್ಟೇಡಿಯಮ್​​ನಲ್ಲಿ ನಡೆಯಲಿರೋ ಮ್ಯಾಚ್​​
  • 3ನೇ ಪಂದ್ಯ ಗೆಲ್ಲೋ ವಿಶ್ವಾಸದಲ್ಲಿರೋ ಟೀಮ್​​ ಇಂಡಿಯಾ

ಇಂದು ಟೀಮ್​ ಇಂಡಿಯಾ, ಇಂಗ್ಲೆಂಡ್ ನಡುವೆ 3ನೇ ಮಹತ್ವದ ಟಿ20 ಪಂದ್ಯ ನಡೆಯಲಿದೆ. ರಾಜ್​​ಕೋಟ್​​​ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆಯಲಿರೋ ಈ ಪಂದ್ಯವನ್ನು ಗೆಲ್ಲಲೇಬೇಕು ಅನ್ನೋ ಒತ್ತಡದಲ್ಲಿ ಇಂಗ್ಲೆಂಡ್​ ಇದೆ. ಇಷ್ಟೇ ಅಲ್ಲ 3ನೇ ಪಂದ್ಯ ಗೆದ್ದು ಸೀರೀಸ್​​ ವಶಪಡಿಸಿಕೊಳ್ಳೋ ವಿಶ್ವಾಸದಲ್ಲಿ ಟೀಮ್​​ ಇಂಡಿಯಾ ಇದೆ.

3ನೇ ಟಿ20 ಪಂದ್ಯಕ್ಕೆ ಇಂಗ್ಲೆಂಡ್​ ತಂಡ ಪ್ಲೇಯಿಂಗ್​ ಎಲೆವೆನ್​​​ ಘೋಷಣೆ ಆಗಿದೆ. ಈ ತಂಡದಲ್ಲಿ ಆರ್​​ಸಿಬಿ ಇಬ್ಬರು ಸ್ಟಾರ್​​ ಆಟಗಾರರಿಗೆ ಅವಕಾಶ ನೀಡಲಾಗಿದೆ. 2ನೇ ಪಂದ್ಯ ಮಿಸ್​ ಮಾಡಿಕೊಂಡಿದ್ದ ಆರ್​​ಸಿಬಿ ಯುವ ಬ್ಯಾಟರ್​​​ ಜೇಕಬ್​​ ಬೆಥೆಲ್​ ಅವರನ್ನು 3ನೇ ಟಿ20ಯಿಂದಲೂ ಕೂರಿಸಲಾಗಿದೆ. ಇದು ಆರ್​​ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

4ನೇ ಪಂದ್ಯದಲ್ಲಾದ್ರೂ ಸಿಗುತ್ತಾ ಚಾನ್ಸ್​?

ಮೆಗಾ ಹರಾಜಿನಲ್ಲಿ ಸ್ಫೋಟಕ ಬ್ಯಾಟರ್​​ಗೆ ಆರ್​​ಸಿಬಿ ಮಣೆ ಹಾಕಿತ್ತು. ಈ ಯುವ ಆಟಗಾರನ ಆಟವನ್ನು ಕಣ್ಣು ತುಂಬಿಕೊಳ್ಳುವ ಆರ್​​ಸಿಬಿ ಅಭಿಮಾನಿಗಳು ಕಾಯುತ್ತಿದ್ದರು. ಇನ್ನು 2 ಟಿ20 ಪಂದ್ಯಗಳು ಉಳಿದಿದ್ದು, ಈ ಪಂದ್ಯಗಳಲ್ಲಾದ್ರೂ ಅವಕಾಶ ಸಿಗುತ್ತದಾ ಎಂಬುದನ್ನು ಕಾದು ನೋಡಬೇಕಿದೆ.

ಕೈ ಕೊಟ್ಟ ಬ್ಯಾಟರ್ಸ್​​

ಮೊದಲ 2 ಪಂದ್ಯಗಳಲ್ಲಿ ಇಂಗ್ಲೆಂಡ್​​ ಬ್ಯಾಟರ್​ಗಳು ಸರಿಯಾಗಿ ಕೈ ಕೊಟ್ಟಿದ್ದರು. ಬೌಲರ್​​ಗಳು ಮಾತ್ರ ತಮ್ಮ ಕರ್ತವ್ಯ ಸಮರ್ಥವಾಗಿ ನಿಭಾಯಿಸಿದ್ದರು. ಹೀಗಾಗಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬದಲಿಗೆ ನಾಯಕ ಜೋಸ್‌ ಬಟ್ಲರ್ ಚೆನ್ನೈನಲ್ಲಿ ಇಳಿಸಿದ ತಂಡವನ್ನೇ ಉಳಿಸಿಕೊಂಡಿದ್ದಾರೆ.

ಇಂಗ್ಲೆಂಡ್‌ ತಂಡ ಹೀಗಿದೆ!

ಬೆನ್ ಡಕೆಟ್, ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಜೇಮೀ ಸ್ಮಿತ್, ಜೇಮೀ ಓವರ್ಟನ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.

ಇದನ್ನೂ ಓದಿ:ದೆಹಲಿಯಿಂದ ವಿರಾಟ್​​ಗೆ ಭರ್ಜರಿ ಆಫರ್​​​; ಕೊಹ್ಲಿ ಹೆಗಲಿಗೆ ನಾಯಕತ್ವ ಜವಾಬ್ದಾರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment