/newsfirstlive-kannada/media/post_attachments/wp-content/uploads/2024/11/RCB.jpg)
ಇತ್ತೀಚೆಗೆ ರಾಜ್ಕೋಟ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 3ನೇ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಇಂಗ್ಲೆಂಡ್ ಗೆದ್ದು ಬೀಗಿದೆ. ಇಂಗ್ಲೆಂಡ್ ತಂಡದ 2 ಪಂದ್ಯಗಳು ಸತತವಾಗಿ ಸೋಲು ಕಾರಣ ಸ್ಫೋಟಕ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್. ಇವರು ರನ್ ಕಲೆ ಹಾಕದಿರುವುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್. ಸತತ ಮೂರು ಪಂದ್ಯಗಳಲ್ಲೂ ಫಿಲ್ ಸಾಲ್ಟ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ರು. ಇದು ಇಂಗ್ಲೆಂಡ್‌ಗೆ ಮಾತ್ರವಲ್ಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಟೆನ್ಷನ್ ಹೆಚ್ಚಿಸಿದೆ ಎಂಬುದು ಗಮನಾರ್ಹ.
ಫಿಲ್ ಸಾಲ್ಟ್ ಕಳಪೆ ಪ್ರದರ್ಶನ
ಟೀಮ್ ಇಂಡಿಯಾ ವಿರುದ್ಧ ಆಡಿರೋ 3 ಪಂದ್ಯಗಳಲ್ಲಿ ಫಿಲ್ ಸಾಲ್ಟ್ ಕೇವಲ 9 ರನ್ ಕಲೆ ಹಾಕಿದ್ದಾರೆ. ಮೊದಲ ಪಂದ್ಯದಲ್ಲಿ ಡಕೌಟ್ ಆಗಿದ್ದ ಸಾಲ್ಟ್ 2ನೇ ಮ್ಯಾಚ್ನಲ್ಲಿ 4 ರನ್ ಕಲೆ ಗಳಿಸಿದ್ರು. 3ನೇ ಪಂದ್ಯದಲ್ಲಿ ಕೇವಲ 5 ರನ್ಗೆ ವಿಕೆಟ್ ಒಪ್ಪಿಸಿದ್ರು. ಸಾಲ್ಟ್ ಅವರನ್ನು ಆರ್‌ಸಿಬಿ ಐಪಿಎಲ್ ಮೆಗಾ ಹರಾಜಿನಲ್ಲಿ 11.50 ಕೋಟಿ ನೀಡಿ ಖರೀದಿಸಿದ್ದು, ಇವರ ಕಳಪೆ ಆಟ ತಂಡದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.
ಫಾರ್ಮ್ ಸಮಸ್ಯೆ ಎದುರಿಸುತ್ತಿರೋ ಸಾಲ್ಟ್
ಮುಂದಿನ ಸೀಸನ್ಗೆ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಜತೆಗೆ ಫಿಲ್ ಸಾಲ್ಟ್ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ. ಈ ಹೊತ್ತಲ್ಲೇ ಸಾಲ್ಟ್ ಸತತ 3 ಪಂದ್ಯಗಳಿಂದ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದು, ಆರ್‌ಸಿಬಿ ಕಪ್ ಗೆಲ್ಲೋ ಕನಸಿಗೆ ದೊಡ್ಡ ಹೊಡೆತ ಬಿದ್ದಿದೆ.
ಫಿಲ್ ಸಾಲ್ಟ್ 2023ರಲ್ಲಿ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಕಾಣಿಸಿಕೊಂಡರು. ಇವರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತ್ತು. ಇವರು 2023ರ ಐಪಿಎಲ್‌ನಲ್ಲಿ 9 ಪಂದ್ಯಗಳಲ್ಲಿ ಆವರೇಜ್ 27.25ರ ಸರಾಸರಿಯಲ್ಲಿ 218 ರನ್ ಗಳಿಸಿದ್ದರು. ಸ್ಟ್ರೈಕ್ ರೇಟ್ 163.91 ಆಗಿತ್ತು. ಬಳಿಕ 2024ರ ಸೀಸನ್ಗೆ ಸಾಲ್ಟ್ ಕೆಕೆಆರ್ ಸೇರಿದರು.
ಇದನ್ನೂ ಓದಿ:ಗ್ರಾಮೋದ್ಯೋಗ ಮೂಲಕ ಸಾವಿರಾರು ಬಡ ಕುಟುಂಬಗಳಿಗೆ ಆಶ್ರಯ; ಸಿರಿ ಸಂಸ್ಥೆ ಬೆಳೆದು ಬಂದ ಹಾದಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ