ಕ್ರಿಕೆಟ್​ ಅನ್ನೇ ಬಿಡಬೇಕು ಎಂದಿದ್ದ ಕೊಹ್ಲಿ ಆಪ್ತ; ಖರೀದಿ ಮಾಡಿ ಮರುಜೀವ ಕೊಟ್ಟ RCB

author-image
Ganesh Nachikethu
Updated On
2025ರ ಐಪಿಎಲ್​​ ಲೀಗ್​: ದೇಶೀಯ ಪ್ರತಿಭೆಗೆ ಆರ್​​ಸಿಬಿಯ ಕ್ಯಾಪ್ಟನ್ಸಿ ಪಟ್ಟ
Advertisment
  • ಕ್ರಿಕೆಟ್​​ ಅನ್ನೇ ತೊರೆಯಬೇಕು ಎಂದಿದ್ದ ಸ್ಟಾರ್​​ ಆಟಗಾರ!
  • ಮೆಗಾ ಹರಾಜಿನಲ್ಲಿ ಈ ಆಟಗಾರನಿಗೆ ಆರ್​​ಸಿಬಿ ತಂಡ ಮಣೆ
  • ಕೇವಲ ಒಂದೇ ಒಂದು ಸಾನ್ಸ್​ ಕೊಡಿ ಎಂದಿದ್ದ ಆರ್​​ಸಿಬಿ ಸ್ಟಾರ್​​

2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​ ಮೆಗಾ ಹರಾಜಿನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಟೀಮ್​ ಅನ್​ಕ್ಯಾಪ್ಟ್​​ ಆಲ್​ರೌಂಡರ್​​ ಸ್ವಪ್ನಿಲ್​ ಸಿಂಗ್​ ಅವರನ್ನು ಖರೀದಿ ಮಾಡಿದೆ. ಆರ್​​ಟಿಎಂ ಕಾರ್ಡ್​ ಬಳಸುವ ಮೂಲಕ 50 ಲಕ್ಷಕ್ಕೆ ಖರೀದಿ ಮಾಡಿರುವುದು ವಿಶೇಷ.

ಮೊದಲು ಆರ್​​ಸಿಬಿ ತಂಡವೇ ಸ್ವಪ್ನಿಲ್​ ಸಿಂಗ್​ ಅವರನ್ನು ಬೇಸ್​ ಪ್ರೈಸ್​​ 30 ಲಕ್ಷಕ್ಕೆ ಬಿಡ್​ ಮಾಡಿತು. ನಂತರ ಡೆಲ್ಲಿ ಕ್ಯಾಪಿಟಲ್ಸ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮಧ್ಯೆ ಸ್ವಪ್ನಿಲ್​ ಸಿಂಗ್​ಗಾಗಿ ಪೈಪೋಟಿ ನಡೆಯಿತು. ಕೊನೆಗೆ 50 ಲಕ್ಷಕ್ಕೆ ಸ್ವಪ್ನಿಲ್​ ಸಿಂಗ್​ ಆರ್​​ಸಿಬಿ ಸೇರಿದ್ರು.

ಆರ್​​ಸಿಬಿ ಪಾಲಿನ ಅದೃಷ್ಟವಂತ

ಈತ ಆರ್​​ಸಿಬಿ ಪಾಲಿನ ಅದೃಷ್ಟವಂತ.. ಈತ ತಂಡಕ್ಕೆ ಎಂಟ್ರಿಕೊಟ್ಟಿದ್ದೇ, ಕೊಟ್ಟಿದ್ದು ಆರ್​​ಸಿಬಿ ಸೋಲು ಅನ್ನೋದನ್ನೇ ನೋಡಿಲ್ಲ. ಕಳೆದ ಸೀಸನ್​​ನಲ್ಲಿ ಸತತ 7 ಪಂದ್ಯಗಳ ದಿಗ್ವಿಜಯದ ಹಿಂದೆ ಈ ಲಕ್ಕಿಮ್ಯಾನ್​ ಶ್ರಮ ಅಪಾರ. ಇವರು ಯಾರು ಅಲ್ಲ RCBಯ ನಯಾ ಸೆನ್ಸೇಷನ್​​ ಸ್ವಪ್ನಿಲ್​ ಸಿಂಗ್​ ಬಗ್ಗೆ. ಆರ್​​ಸಿಬಿ ಪಾಲಿನ ಅದೃಷ್ಟವಂತನಾಗಿರೋ ಈತ ಬಹುತೇಕರಿಗೆ ಯಾರು ಅಂತಾನೇ ಗೊತ್ತಿಲ್ಲ. ಈತನ ಕ್ರಿಕೆಟ್​ ಜರ್ನಿ ನಿಜಕ್ಕೂ ರೋಚಕ. ಯುವ ಕ್ರಿಕೆಟಿಗರ ಪಾಲಿಗಂತೂ ಈತನ ಕಥೆ ಸ್ಫೂರ್ತಿಯ ಚಿಲುಮೆ.

ಸ್ವಪ್ನಿಲ್​ ಸಿಂಗ್​.. ಐಪಿಎಲ್​ ಮಿನಿ ಆಕ್ಷನ್​ನಲ್ಲಿ ಈ ಸ್ಪಿನ್ನರ್​ನ ಆರ್​​ಸಿಬಿ ಖರೀದಿಸಿದಾಗ ಹೆಚ್ಚು ಚರ್ಚೆಯಾಗದ ಹೆಸರಿದು. ಯಾರೋ ಒಬ್ಬ ಪ್ಲೇಯರ್​ ಎಂದು NEGLECT​ ಮಾಡಿದವರೇ ಹೆಚ್ಚು. ಇಂದು ಈತನೇ ಸೆನ್ಸೇಷನ್​​. ಆರ್​​​ಸಿಬಿ ಪಾಲಿನ ಅದೃಷ್ಟವಂತನಾಗಿದ್ದಾನೆ. ಈತ ಆಡಿದ ಎಲ್ಲಾ ಪಂದ್ಯಗಳಲ್ಲಿ ತಂಡವೂ ಜಯ ಸಾಧಿಸಿದೆ. ಸಿಕ್ಕ ಚಾನ್ಸ್​​​ನಲ್ಲಿ ಸ್ವಪ್ನಿಲ್​ ಕೂಡ ಭರ್ಜರಿ ಪರ್ಫಾಮೆನ್ಸ್​ ನೀಡಿದ್ರು. ಹರಾಜಿಗೆ ಮುನ್ನ ಕೈ ಬಿಟ್ಟಿದ್ದ ಆರ್​​ಸಿಬಿ ಈಗ ಮಣೆ ಹಾಕಿದೆ.

ಒಂದು ಚಾನ್ಸ್​ ಕೊಡಿ ಎಂದಿದ್ದ ಸ್ವಪ್ನಿಲ್​​

ಸೀಸನ್​​ಗೂ ಮುನ್ನ ಒಂದು ಟ್ರಯಲ್​ ಕ್ಯಾಂಪ್​ ಇತ್ತು. ನಾನು ಆಗ ಕೋಚ್​ ಆ್ಯಂಡಿ ಸರ್​ಗೆ ನನ್ನ ಸೀಸನ್​ ಹೇಗಾಗಿದೆ ಎಂದು ತಿಳಿಸಿದೆ. ಆ ಬಳಿಕ ನಾನು ಕೇಳಿದ್ದು ಒಂದೇ ಮಾತು ದಯವಿಟ್ಟು ನನಗೆ ಒಂದು ಚಾನ್ಸ್​ ಕೊಡಿ. ಇದು ಬಹುತೇಕ ನನ್ನ ಕೊನೆಯ ಅವಕಾಶ ಎಂದು. ​ಅವ್ರು ಹೇಳಿದ್ರು ನಿನ್ನ ಮೇಲೆ ಭರವಸೆ ಇದೆ ಅಂತಾ. ಆದ್ರೆ, ಹೇಗೆ ಹೋಗುತ್ತೆ ಅನ್ನೋದನ್ನು ನೋಡಬೇಕು ಅಂದಿದ್ರು.

33ರ ಗಡಿ ದಾಟಿರೋ ಸ್ವಪ್ನಿಲ್​, ಡೊಮೆಸ್ಟಿಕ್​ ಕ್ರಿಕೆಟ್​ಗೆ ಮಾತ್ರ ಸೀಮಿತವಾಗಿದ್ರು. ಹೀಗಾಗಿಯೇ ಕಳೆದ ಸೀಸನ್​ನಲ್ಲಿ ಐಪಿಎಲ್​ ಆಡದಿದ್ರೆ, ಗುಡ್ ಬೈ ಹೇಳಿ ಬೇರೆ ಹಾದಿ ಹಿಡಿಯೋ ಲೆಕ್ಕಾಚಾರದಲ್ಲಿದ್ರು. ಕೊನೆ ಕ್ಷಣದಲ್ಲಿ ಆರ್​​ಸಿಬಿ ಸ್ವಪ್ನಿಲ್​ಗೆ ಮಣೆ ಹಾಕ್ತು. ಆ ಘಳಿಗೆಯನ್ನ ನೆನೆದ್ರೆ ಈಗಲೂ ಸ್ವಪ್ನಿಲ್ ಕಣ್ಣಂಚಲ್ಲಿ ನೀರು ಜಿನುಗುತ್ತೆ​.

ಸ್ವಪ್ನಿಲ್​ ಸಿಂಗ್​ ಒಂದೇ ಬಾರಿ ಸಕ್ಸಸ್​ನ ರುಚಿ ಕಂಡ ಕ್ರಿಕೆಟರ್​​ ಅಲ್ಲ. ಕಲ್ಲು ಮುಳ್ಳಿನ ಹಾದಿ ಸವೆಸಿ, ಅವಮಾನಗಳನ್ನ ಎದುರಿಸಿ ಬಂದ ಕ್ರಿಕೆಟಿಗ. ಚೆನ್ನಾಗಿ ಆಡಿದ್ರೂ ಚಾನ್ಸ್​ ಸಿಗದೇ ತಂಡದಿಂದಲೇ ಹೊರ ತಳ್ಳಲ್ಪಟ್ಟ ಕ್ರಿಕೆಟಿಗ.

ಆರ್​​ಸಿಬಿಯಿಂದ ಬಂತು ಲಕ್​​​

ನಾನು ಇದಕ್ಕೂ ಮೊದಲು ಐಪಿಎಲ್​ನಲ್ಲಿ ಫೋರ್​, ಸಿಕ್ಸ್​ ಹೊಡೆದಿರಲಿಲ್ಲ. ಕೇವಲ ಒಂದು ವಿಕೆಟ್​ ತೆಗೆದಿದ್ದೆ. ನನಗೆ ಒಂದು ಫೋರ್​, ಸಿಕ್ಸ್​​ ಹೊಡೆಯೋ ಆಸೆಯಿತ್ತು. ನನ್ನ ಬಳಿ ವಿಕೆಟ್​ ಅಂತೂ ಇತ್ತು ಎನ್ನುತ್ತಾರೆ ಅವರು.

ಡೊಮೆಸ್ಟಿಕ್​ ಟೀಮ್​ನಲ್ಲೂ ಸ್ಥಾನ ಕಳೆದುಕೊಂಡ ಸ್ವಪ್ನಿಲ್​ಗೆ ಲಕ್ನೋ ತಂಡದಲ್ಲೋ ಆಡೋ ಚಾನ್ಸ್​ ಸಿಗಲಿಲ್ಲ. ಆದ್ರೇ ದೇವರ ಆಶಿರ್ವಾದವೋ ಏನೋ ಈ ಬಾರಿ ಆರ್​​ಸಿಬಿ ಮಣೆ ಹಾಕ್ತು. ಒಂದು ಫೋರ್​​, ಒಂದು ಸಿಕ್ಸರ್​ ಹೊಡೆಯೋ ಆಸೆಯನ್ನಿಟ್ಟುಕೊಂಡು ಬಂದ ಈ ಸ್ವಪ್ನಿಲ್​ ಸಿಂಗ್​, ಮೊದಲ ಪಂದ್ಯದಲ್ಲೇ ಆ ಸಾಧನೆ ಮಾಡಿಬಿಟ್ರು. ಇಷ್ಟೇ ಅಲ್ಲ.. ಆರ್​​​ಸಿಬಿಯ ಅದೃಷ್ಟವನ್ನೇ ಬದಲಾಯಿಸಿದ್ದಾರೆ.

ಇದನ್ನೂ ಓದಿ: ಮೆಗಾ ಹರಾಜಿನಲ್ಲಿ ಮಹಾ ಎಡವಟ್ಟು; ಸ್ಟಾರ್​​​ ಆಟಗಾರನ ಕೈ ಬಿಟ್ಟು ತಪ್ಪು ಮಾಡಿತಾ RCB?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment