/newsfirstlive-kannada/media/post_attachments/wp-content/uploads/2024/10/RCB_VIRAT.jpg)
ಇತ್ತೀಚೆಗೆ ನಡೆದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಗ್ಲೆಂಡ್ ತಂಡದ ಸ್ಟಾರ್ ವಿಕೆಟ್ ಕೀಪರ್ ಫಿಲ್ ಸಾಲ್ಟ್ ಅವರನ್ನು ಖರೀದಿ ಮಾಡಿದೆ. ಇವರ ಜೊತೆಗೆ ಸ್ಫೋಟಕ ಬ್ಯಾಟರ್ ಜಾಕೋಬ್ ಬೆಥೆಲ್ ಅವರನ್ನು ಖರೀದಿ ಮಾಡಲಾಗಿದೆ.
ಇನ್ನೂ ಐಪಿಎಲ್ನಲ್ಲಿ ತನ್ನ ಸಾಮರ್ಥ್ಯ ಸಾಬೀತು ಪಡಿಸದ ಕಾರಣ ಜಾಕೋಬ್ ಬೆಥೆಲ್ ಅವರಿಗೆ ಬರೋಬ್ಬರಿ 2.6 ಕೋಟಿ ನೀಡಿ ಖರೀದಿ ಮಾಡಿದ್ದು ಎಷ್ಟು ಸರಿ? ಅನ್ನೋ ಪ್ರಶ್ನೆಗಳು ಕೇಳಿ ಬಂದಿವೆ. ಇದಕ್ಕೀಗ ಫಿಲ್ ಸಾಲ್ಟ್ ಖಡಕ್ ಉತ್ತರ ನೀಡಿದ್ದಾರೆ.
ವಿಲ್ ಜಾಕ್ಸ್ಗಿಂತಲೂ ಜಾಕೋಬ್ ಡೇಂಜರ್ ಎಂದ ಫಿಲ್ ಸಾಲ್ಟ್
ಜಾಕೋಬ್ ಬೆಥೆಲ್ ಅವರನ್ನು ಟೀಕಿಸಿದವರಿಗೆ ಫಿಲ್ ಸಾಲ್ಟ್ ಉತ್ತರ ಹೀಗಿತ್ತು. ಜಾಕೋಬ್ ಬಹಳ ಸಮರ್ಥ ಆಟಗಾರ. ಆತನನ್ನು ಟೀಕಿಸೋರು ಯೂಟ್ಯೂಬ್ನಲ್ಲಿ ಜಾಕೋಬ್ ಬ್ಯಾಟಿಂಗ್ ನೋಡಬಹುದು. ಆಗ ನೀವ್ಯಾರು ಆತನ ಖರೀದಿ ಬಗ್ಗೆ ಮಾತಾಡಲ್ಲ ಎಂದರು.
ಇಂಗ್ಲೆಂಡ್ ತಂಡದ ಭರವಸೆಯ ಯುವ ಆಲ್ರೌಂಡರ್ ಜೇಕಬ್. ಇವರಿಗೆ ಕೇವಲ 21 ವರ್ಷ. ಇತ್ತೀಚೆಗೆ ನಡೆದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬರೋಬ್ಬರಿ 2.6 ಕೋಟಿ ನೀಡಿ ಖರೀದಿ ಮಾಡಿತ್ತು.
ಕಳೆದ ತಿಂಗಳು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ದೇಶದ ಆಟಗಾರರಿಗೆ ಹೊಸ ಒಪ್ಪಂದಗಳನ್ನು ಪ್ರಕಟಿಸಿದೆ. ಕೆಲವು ಆಟಗಾರರಿಗೆ 1 ವರ್ಷದ ಕೇಂದ್ರ ಗುತ್ತಿಗೆ ನೀಡಿದ್ದು, ಇನ್ನೂ ಹಲವರಿಗೆ 2 ವರ್ಷ ಕೊಡಲಾಗಿದೆ. 2 ವರ್ಷಗಳ ಕೇಂದ್ರ ಒಪ್ಪಂದ ಪಡೆದ ಆಟಗಾರರಲ್ಲಿ ಜೇಕಬ್ ಬೆಥೆಲ್ ಹೆಸರು ಕೂಡ ಇದೆ.
ಇದನ್ನೂ ಓದಿ:15 ಭರ್ಜರಿ ಸಿಕ್ಸರ್; ಬರೋಬ್ಬರಿ 26 ಫೋರ್; ತ್ರಿಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್