/newsfirstlive-kannada/media/post_attachments/wp-content/uploads/2024/11/RCB-5.jpg)
ಐಸಿಸಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ ಶುರುವಾಗಿದೆ. ಮಹತ್ವದ ಟೂರ್ನಿಗೆ ಎಲ್ಲಾ ರೀತಿಯ ತಯಾರಿ ನಡೆದಿದೆ. ಜತೆಗೆ ಚಾಂಪಿಯನ್ಸ್ ಟ್ರೋಫಿಗೆ ಬಲಿಷ್ಠ ತಂಡಗಳು ಪ್ರಕಟವಾಗಿವೆ. ಇದರ ಸಾಲಿಗೆ ಇಂಗ್ಲೆಂಡ್​ ತಂಡವು ಸೇರಿದೆ.
ಇನ್ನು, ಚಾಂಪಿಯನ್ಸ್ ಟ್ರೋಫಿಗೆ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ 15 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿತ್ತು. ಇಂಗ್ಲೆಂಡ್​ ತಂಡವನ್ನು ಜೋಸ್ ಬಟ್ಲರ್ ಲೀಡ್​ ಮಾಡಲಿದ್ದಾರೆ. ನ್ಯೂಜಿಲೆಂಡ್ ಟೆಸ್ಟ್ ಸರಣಿಯ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿರೋ ಬೆನ್ ಸ್ಟೋಕ್ಸ್​ಗೆ ರೆಸ್ಟ್​ ನೀಡಲಾಗಿದೆ. ಮಾರ್ಕ್ ವುಡ್ ಮತ್ತೆ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ರು. ಆರ್​​​ಸಿಬಿ ಯುವ ಬ್ಯಾಟರ್​​ ಜೇಕಬ್​ ಬೆಥೆಲ್​ ಅವರಿಗೂ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಈಗ ಜೇಕಬ್​ ಬೆಥೆಲ್​ ಬಗ್ಗೆ ಬಿಗ್​ ಅಪ್ಡೇಟ್​ ಸಿಕ್ಕಿದೆ.
ಆರ್​​ಸಿಬಿಗೆ ಸ್ಟಾರ್​ ಆಟಗಾರನ ಬಿಗ್​ ಶಾಕ್​
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಥಾನ ಪಡೆದಿರೋ ಯುವ ಬ್ಯಾಟರ್​​ ಜೇಕಬ್​ ಬೆಥೆಲ್​ ಅವರಿಗೆ ಅವಕಾಶ ಸಿಕ್ಕಿತ್ತು. ಇತ್ತೀಚೆಗೆ ಸೌದಿಯಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಜೇಕಬ್​ ಬೆಥೆಲ್​ ಅವರನ್ನು ಅವರನ್ನು ಆರ್​​ಸಿಬಿ ಭಾರೀ ಮೊತ್ತ ನೀಡಿ ಖರೀದಿ ಮಾಡಿತ್ತು. ಈಗ ಜೇಕಬ್​ ಬೆಥೆಲ್​ ಅವರು ಕಾಲಿಗೆ ಇಂಜುರಿ ಆಗಿರೋ ಕಾರಣ ಚಾಂಪಿಯನ್ಸ್​ ಟ್ರೋಫಿಯಿಂದಲೇ ಹೊರಬಿದ್ದಿದ್ದಾರೆ. ಇವರು ಐಪಿಎಲ್​ ಆಡೋದು ಡೌಟ್​ ಎನ್ನಲಾಗುತ್ತಿದೆ.
ಐಪಿಎಲ್​ ಆಡೋದು ಡೌಟ್​
ಇಂಗ್ಲೆಂಡ್ ತಂಡದ ಯುವ ಆಲ್​ರೌಂಡರ್ ಜೇಕಬ್ ಬೆಥೆಲ್. ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿರೋ ಇವರು ಐಪಿಎಲ್​​ನಲ್ಲಿ ಭಾಗಿಯಾಗುವುದು ಡೌಟ್​ ಆಗಿದೆ. ಐಪಿಎಲ್ ಆರಂಭಕ್ಕೂ ಇನ್ನೂ ಒಂದು ತಿಂಗಳು ಅವಕಾಶ ಇದೆ. ಒಂದು ತಿಂಗಳಲ್ಲಿ ಇವರು ಸಂಪೂರ್ಣ ಫಿಟ್ ಆದಲ್ಲಿ ಮಾತ್ರ ಆರ್​​ಸಿಬಿ ಪರ ಆಡಬಹುದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ