/newsfirstlive-kannada/media/post_attachments/wp-content/uploads/2024/05/Rajat-Patidar_321.jpg)
ಸದ್ಯ ನಡೆಯುತ್ತಿರೋ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ, ಮುಂಬೈ ತಂಡಗಳು ಸೆಣಸಾಡುತ್ತಿವೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಮಧ್ಯಪ್ರದೇಶ ನಿಗದಿತ 20 ಓವರ್​​ನಲ್ಲಿ 8 ವಿಕೆಟ್​ ನಷ್ಟಕ್ಕೆ 174 ರನ್​ ಕಲೆ ಹಾಕಿದ್ದಾರೆ.
ಇನ್ನು, ಮಧ್ಯಪ್ರದೇಶದ ಪರ ಓಪನಿಂಗ್​ ಮಾಡಿದ ಅರ್ಪಿತ್​ ಗೌಡ, ಹರ್ಷ್​​ ಗೌಲಿ ಸಿಂಗಲ್ ಡಿಜಿಟ್​​ಗೆ ಔಟಾದ್ರು. ಬಳಿಕ ಬಂದ ಸುಭ್ರಾಂಶು ಸೇನಾಪತಿ 23 ರನ್​​ ಸಿಡಿಸಿ ವಿಕೆಟ್​ ಒಪ್ಪಿಸಿದ್ರು. ಹರ್ಪ್ರಿತ್ ಸಿಂಗ್ ಕೂಡ ಕ್ಯಾಪ್ಟನ್​ ರಜತ್​ ಪಾಟಿದಾರ್​​ಗೆ ಸಾಥ್​ ನೀಡುವಲ್ಲಿ ಎಡವಿದರು.
ರಜತ್​ ಪಾಟಿದಾರ್​ ಏಕಾಂಗಿ ಹೋರಾಟ
ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಬ್ಯಾಟರ್​ ಮತ್ತು ಮಧ್ಯಪ್ರದೇಶದ ಕ್ಯಾಪ್ಟನ್​​ ರಜತ್​ ಪಾಟಿದಾರ್​​ ತನ್ನ ಆರ್ಭಟ ಮುಂದುವರಿಸಿದ್ರು. ಏಕಾಂಗಿ ಹೋರಾಟ ನಡೆಸಿದ ರಜತ್ ಮುಂಬೈ ತಂಡದ ಬೌಲರ್​ಗಳನ್ನು ಕಾಡಿದ್ರು.
RAJAT CLUTCH PATIDAR 81*(40) ALONE WARRIOR INNINGS AGAINST MUMBAI🔥👏 pic.twitter.com/N9rMxfj8Kw
— Vinay (@Koxassassin) December 15, 2024
ಸ್ಫೋಟಕ ಅರ್ಧಶತಕ
ತಾನು ಎದುರಿಸಿದ 40 ಬಾಲ್​​ನಲ್ಲಿ ರಜತ್​ ಪಾಟಿದಾರ್​​​ ಅಜೇಯ 81 ರನ್​​ ಚಚ್ಚಿದ್ರು. ಬ್ಯಾಕ್​ ಟು ಬ್ಯಾಕ್​​ 6 ಫೋರ್​ ಮತ್ತು ಬರೋಬ್ಬರಿ 6 ಭರ್ಜರಿ ಸಿಕ್ಸರ್​​ಗಳನ್ನು ಸಿಡಿಸಿದ್ರು. ಫಿಯರ್​ಲೆಸ್​ ಬ್ಯಾಟಿಂಗ್​ ಮಾಡಿದ ಇವರ ಸ್ಟ್ರೈಕ್​ರೇಟ್​​ 200ಕ್ಕೂ ಹೆಚ್ಚು ಇತ್ತು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್