/newsfirstlive-kannada/media/post_attachments/wp-content/uploads/2025/05/Romario_Shepherd_Khaleel-Ahmed.jpg)
ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಲ್ಪಮೊತ್ತಕ್ಕೆ ಕುಸಿಯುವ ಎಲ್ಲ ಲಕ್ಷಣಗಳು ಇದ್ದವು. ಇನ್ನಿಂಗ್ಸ್ ಮುಗಿಯಲು ಕೇವಲ 2 ಓವರ್ ಬಾಕಿ ಇರುವಾಗ 159 ರನ್ ಮಾತ್ರ ಗಳಿಸಿತ್ತು. ಆದ್ರೆ ಈ ವೇಳೆ ಆರ್ಸಿಬಿಗೆ ರನ್ಗಳ ಹೊಳೆ ಹರಿಸಿದ್ದು ಮಾತ್ರ ವೆಸ್ಟ್ ಇಂಡೀಸ್ ಪ್ಲೇಯರ್ ರೊಮಾರಿಯೋ ಶೆಫರ್ಡ್.. ಈ ದೈತ್ಯ ಆಟಗಾರನ ಬ್ಯಾಟಿಂಗ್ ಹೇಗಿತ್ತು?.
ಆರ್ಸಿಬಿ ರನ್ಗಳು 18 ಓವರ್ನಲ್ಲಿ 159 ಆಗಿದ್ದವು. ಈ ವೇಳೆ ಚೆನ್ನೈ ತಂಡದ ಪರವಾಗಿ ಖಲೀಲ್ ಅಹ್ಮದ್ ಅವರು ಬೌಲಿಂಗ್ ಮಾಡಲು ಆಗಮಿಸಿದರು. ಬ್ಯಾಟಿಂಗ್ ಸ್ಟ್ರೈಕ್ನಲ್ಲಿ ರೊಮಾರಿಯೋ ಶೆಫರ್ಡ್ ಇದ್ದರು. ಖಲೀಲ್ ಅಹ್ಮದ್ ಬೌಲಿಂಗ್ ಅನ್ನು ಸದೆಬಡಿದ ರೊಮಾರಿಯೋ ಶೆಫರ್ಡ್ ಒಂದೇ ಓವರ್ನಲ್ಲಿ 33 ರನ್ಗಳನ್ನು ಕೊಳ್ಳೆ ಹೊಡೆದರು.
ಖಲೀಲ್ ಅಹ್ಮದ್ ಹಾಕಿದ ಮೊದಲ ಬಾಲ್ ಅನ್ನು ಶೆಫರ್ಡ್ ಸಿಕ್ಸ್ ಬಾರಿಸಿದರು. 2ನೇ ಬಾಲ್ ಅನ್ನು ಸಿಕ್ಸರ್ಗೆ ಕಳಿಸಿದರು. 3 ಬಾಲ್ ಕೂಡ ಬ್ಯಾಟ್ಗೆ ಎಡ್ಜ್ ಆಗಿ ಥರ್ಡ್ ಮ್ಯಾನ್ ಮೂಲಕ ಬೌಂಡರಿಗೆ ಹೋಯಿತು. 4ನೇ ಬಾಲ್ ಅನ್ನು ವಿಕೆಟ್ಗೆ ನೇರವಾಗಿ ಸ್ಟ್ರೇಟ್ ಆಗಿ ಸಿಕ್ಸರ್ಗೆ ಅಟ್ಟಿದರು. ಇದರಿಂದ ಟೆನ್ಷನ್ಗೆ ಒಳಗಾದ ಖಲೀಲ್ ಅಹ್ಮದ್, ನೋಬಾಲ್ ಹಾಕಿದರು. ಇದನ್ನು ಬಿಡದ ಶೆಫರ್ಡ್, ಸಿಕ್ಸರ್ ಪಿಚ್ಚರ್ ತೋರಿಸಿದರು. 5ನೇ ಎಸೆತ ಟಾಟ್ ಆದರೆ, ಕೊನೆಯ ಚೆಂಡನ್ನು ಬೌಂಡರಿಗೆ ಕಳುಹಿಸಿ ರೊಮಾರಿಯೋ ಶಫರ್ಡ್ ಹಿರಿ ಹಿರಿ ಹಿಗ್ಗಿದರು.
ಇದನ್ನೂ ಓದಿ:ಬೆಥೆಲ್, ಕೊಹ್ಲಿ ಅಲ್ಲ.. RCB ಕ್ಯಾಪ್ಟನ್ ರಜತ್ ಪಾಟಿದಾರ್ ಗೆಲುವಿನ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ..?
ಒಂದೇ ಓವರ್ನಲ್ಲಿ 32 ರನ್ ಬಂದಿದ್ದರಿಂದ ರೊಮಾರಿಯೋ ಶಫರ್ಡ್ ಕೇವಲ 14 ಎಸೆತಗಳಲ್ಲಿ ಸಿಡಿಲಬ್ಬರದ ಅರ್ಧಶತಕ ಬಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕೇವಲ 14 ಬಾಲ್ಗಳಲ್ಲಿ 4 ಬೌಂಡರಿ, 6 ಆಕಾಶದೆತ್ತರದ ಸಿಕ್ಸರ್ಗಳಿಂದ 53 ರನ್ಗಳನ್ನು ಗಳಿಸಿದರು. ಒಂದು ರೀತಿಯಲ್ಲಿ ಶಫರ್ಡ್ ಬಾರಿಸಿದ ರನ್ಗಳೇ ಆರ್ಸಿಬಿ ಗೆಲುವಿಗೆ ಕಾರಣವಾದವು ಎಂದು ಹೇಳಬಹುದು.
ಈ ಐಪಿಎಲ್ ಟೂರ್ನಿಯಲ್ಲಿ ಒಂದು ಓವರ್ನಲ್ಲಿ ಅತಿ ಹೆಚ್ಚು ರನ್ಗಳನ್ನು ಹೊಡೆಸಿಕೊಂಡ ಬೌಲರ್ ಖಲೀಲ್ ಅಹ್ಮದ್ ಆಗಿದ್ದಾರೆ. ಈ ಮೊದಲು ಗುಜರಾತ್ ಟೈಟನ್ಸ್ ತಂಡದ ಯುವ ಬೌಲರ್ ಕರೀಮ್ ಜನತ್ ಇದ್ದರು. ಗುಜರಾತ್ ವಿರುದ್ಧ ಸ್ಫೋಟಕ ಸೆಂಚುರಿ ಸಿಡಿಸಿದ್ದ ರಾಜಸ್ಥಾನ್ ತಂಡದ ವೈಭವ್ ಸೂರ್ಯವಂಶಿ, ಕರೀಮ್ ಜನತ್ನ ಒಂದೇ ಓವರ್ನಲ್ಲಿ 30 ರನ್ ಚಚ್ಚಿದ್ದರು. ಆದ್ರೆ ಈಗ 33 ರನ್ಗಳನ್ನು ಬಾರಿಸಿಕೊಂಡ ಖಲೀಲ್ ಅಹ್ಮದ್ ಮೊದಲಿಗರು ಆಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ