newsfirstkannada.com

ಕೊಹ್ಲಿಯನ್ನು ಭೇಟಿ ಮಾಡಿದ RCB ಸ್ಟಾರ್​ ಶ್ರೇಯಾಂಕಾ; ಈ ಬಗ್ಗೆ ಏನಂದ್ರು ಕನ್ನಡತಿ..?

Share :

Published March 20, 2024 at 8:51pm

  ಮಹಿಳಾ ಪ್ರೀಮಿಯರ್ ಲೀಗ್ ಫೈನಲ್​ ಪಂದ್ಯದಲ್ಲಿ ಗೆದ್ದು ಬೀಗಿದ ಆರ್​​ಸಿಬಿ!

  ಕಪ್​​ ಗೆದ್ದ ಆರ್​​ಸಿಬಿ ತಂಡದ ಭಾಗವಾಗಿದ್ದ ಕರ್ನಾಟಕ ಶ್ರೇಯಾಂಕಾ ಪಾಟೀಲ್​​

  ವಿರಾಟ್​ ಕೊಹ್ಲಿಯನ್ನು ಭೇಟಿ ಮಾಡಿದ ಬಳಿಕ ಶ್ರೇಯಾಂಕಾ ಪಾಟೀಲ್​ ಏನಂದ್ರು?

ಇತ್ತೀಚೆಗೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಮ್​​ನಲ್ಲಿ ನಡೆದ 2024ರ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ವಿರುದ್ಧ ಆರ್​​ಸಿಬಿ ಗೆದ್ದು ಬೀಗಿದೆ. ಕೊನೆಗೂ ಕಪ್​ ಗೆಲ್ಲೋ ಮೂಲಕ ಆರ್​​ಸಿಬಿ ಇತಿಹಾಸ ನಿರ್ಮಿಸಿದೆ. ಈ ತಂಡದ ಭಾಗವಾಗಿದ್ದವರು ಕರ್ನಾಟಕದ ಶ್ರೇಯಾಂಕಾ ಪಾಟೀಲ್​​.

ಶ್ರೇಯಾಂಕಾ ಪಾಟೀಲ್​​ ಆರ್​​ಸಿಬಿ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿಯನ್ನು ಭೇಟಿ ಮಾಡಿದ್ದಾರೆ. ಕೊಹ್ಲಿ ಭೇಟಿ ಮಾಡಿದ ಬಳಿಕ ಈ ಬಗ್ಗೆ ಟ್ವೀಟ್​ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಕೊಹ್ಲಿ ನಗು ನನಗೆ ಇಷ್ಟ. ಇವರನ್ನು ಭೇಟಿಯಾಗಿದ್ದು ನನ್ನ ಜೀವನದ ಅತ್ಯುತ್ತಮ ಕ್ಷಣ ಎಂದು ಬರೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಕ್ರಿಕೆಟ್ ನೋಡುತ್ತಾ ಬೆಳೆದವಳು ನಾನು. ಅವರಂತೆ ಆಗಬೇಕೆಂದು ಕನಸು ಕಾಣುತ್ತಾ ಕ್ರಿಕೆಟ್​ ಆಡುತ್ತಿದ್ದೇನೆ. ಕೊನೆಗೂ ನನ್ನ ಸ್ಫೂರ್ತಿಯನ್ನು ಭೇಟಿ ಮಾಡಿದ್ದೇನೆ. ಇಂದು ನನ್ನ ಅತ್ಯಂತ ಸಂತಸದ ದಿನ. ಹಾಯ್ ಶ್ರೇಯಾಂಕಾ, ಚೆನ್ನಾಗಿ ಬೌಲಿಂಗ್ ಮಾಡಿದ್ದೀಯಾ ಎಂದು ನನಗೆ ವಿರಾಟ್​ ಹೇಳಿದ್ರು ಎಂದು ಟ್ವೀಟ್​ ಮಾಡಿದ್ದಾರೆ ಶ್ರೇಯಾಂಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿಯನ್ನು ಭೇಟಿ ಮಾಡಿದ RCB ಸ್ಟಾರ್​ ಶ್ರೇಯಾಂಕಾ; ಈ ಬಗ್ಗೆ ಏನಂದ್ರು ಕನ್ನಡತಿ..?

https://newsfirstlive.com/wp-content/uploads/2024/03/Kohli_Shreyanka.jpg

Load More