ಪಾಟೀದಾರ್ ಮೇಲೆ ಕೊಹ್ಲಿ ಅಸಮಾಧಾನ.. ಕಾರ್ತಿಕ್ ಎದುರು ವಿರಾಟ್ ಅಕ್ಷರಶಃ ಕೆಂಡ..!

author-image
Ganesh
Updated On
ಪಾಟೀದಾರ್ ಮೇಲೆ ಕೊಹ್ಲಿ ಅಸಮಾಧಾನ.. ಕಾರ್ತಿಕ್ ಎದುರು ವಿರಾಟ್ ಅಕ್ಷರಶಃ ಕೆಂಡ..!
Advertisment
  • ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್​ಸಿಬಿಗೆ ಸೋಲು
  • ಸೋಲು ಖಚಿತ ಆಗ್ತಿದ್ದಂತೆ ಕಾರ್ತಿಕ್​ ಜೊತೆ ಚರ್ಚೆ
  • ಚರ್ಚೆಯಲ್ಲಿ ವಿರಾಟ್ ಅಸಮಾಧಾನ, ಆಕ್ರೋಶ

ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಆರ್​ಸಿಬಿ ಡೆಲ್ಲಿ ಕ್ಯಾಪಿಟಲ್ಸ್​​ ಎದುರು ಮುಖಭಂಗ ಎದುರಿಸಿದೆ. ಎದುರಾಳಿಗೆ ಆರ್​​ಸಿಬಿ 164 ರನ್​ಗಳ ಟಾರ್ಗೆಟ್ ನೀಡಿತ್ತು. 163 ರನ್​ಗಳನ್ನು ಡಿಪೆಂಡ್ ಮಾಡಿಕೊಳ್ಳಲು ಫೀಲ್ಡಿಂಗ್​ಗೆ ಇಳಿದಿದ್ದ ಆರ್​​ಸಿಬಿ ಆರಂಭದಲ್ಲಿ ಯಶಸ್ವಿ ಕೂಡ ಆಯಿತು.

ಕೇವಲ 30 ರನ್​ಗಳಿಗೆ ಟಾಪ್ ಆರ್ಡರ್​​ನ ಮೂರು ಬ್ಯಾಟರ್​​ಗಳನ್ನು ಔಟ್ ಮಾಡಿ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ನಾಲ್ಕನೇ ಆರ್ಡರ್​​ನಲ್ಲಿ ಬ್ಯಾಟಿಂಗ್​ಗೆ ಬಂದ ಡೆಲ್ಲಿ ಕ್ಯಾಪಿಟಲ್ಸ್​ನ ವಿಕೆಟ್ ಕೀಪರ್​ ಕೆ.ಎಲ್.ರಾಹುಲ್, 53 ಬಾಲ್​ಗೆ 93 ರನ್​ ಚಚ್ಚಿದರು. ಅಲ್ಲದೇ ತಂಡವನ್ನು ಗೆಲ್ಲಿಸುವಲ್ಲಿಯೂ ಯಶಸ್ವಿಯಾದರು.

ಇದನ್ನೂ ಓದಿ: 3.5ನೇ ಓವರ್​ನಲ್ಲಿ ನಡೆದ ಆ ಒಂದು ಘಟನೆ RCB ಸೋಲಿಗೆ ಕಾರಣ..!

ಇನ್ನೇನು ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುತ್ತೆ ಅನ್ನೋ ವೇಳೆಗೆ ಆರ್​ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಕೋಪದಲ್ಲಿ ಇದ್ದಂತೆ ಕಂಡು ಬಂದಿದೆ. ಫೀಲ್ಡಿಂಗ್ ವೇಳೆ ಕೋಚ್ ದಿನೇಶ್ ಕಾರ್ತಿಕ್ ಬಳಿ ಸಿಟ್ಟಿನಿಂದ ಚರ್ಚಿಸಿದ್ದಾರೆ. ಚರ್ಚೆ ವೇಳೆ ಯಾವುದೋ ಆಟಗಾರನ ವಿರುದ್ಧ ದೂರು ನೀಡಿದಂತೆ ಕಂಡುಬಂದಿದೆ. ಇದನ್ನು ನೋಡಿರುವ ಅನೇಕರು, ಕ್ಯಾಪ್ಟನ್ ರಜತ್ ಪಾಟೀದಾರ್​ ಮೇಲೆ ವಿರಾಟ್ ಬೇಸರಗೊಂಡಿದ್ದಾರೆ ಎನ್ನುತ್ತಿದ್ದಾರೆ.

ರಜತ್ ಮೇಲೆ ಮುನಿಸು..

ವಿರಾಟ್ ಕೊಹ್ಲಿ ಕ್ಯಾಪ್ಟನ್ ರಜತ್ ಪಾಟೀದಾರ್​ ಜೊತೆ ಮುನಿಸಿಕೊಂಡಿದ್ದಾರೆ ಅಂತಾ ವೀಕ್ಷಕ ವಿವರಣೆಗಾರರು ಅರ್ಥೈಸಿದ್ದಾರೆ. ಬೌಲಿಂಗ್ ವೇಳೆ ಮಿಡಲ್ ಓವರ್​ಗಳಲ್ಲಿ ತೆಗೆದುಕೊಂಡ ಕೆಟ್ಟ ನಿರ್ಧಾರಗಳಿಂದ ಕೊಹ್ಲಿ ಕೆಂಡ ಕಾರುತ್ತಿದ್ದಾರೆ. ಸರಿಯಾಗಿ ಫೀಲ್ಡಿಂಗ್ ಸೆಟ್ ಮಾಡುವುದರ ಜೊತೆಗೆ, ಕ್ಯಾಪ್ಟನ್ ನಿರ್ಧಾರ ಸರಿ ಇದ್ದರೆ ಗೆಲ್ಲಬಹುದಿತ್ತು ಅನ್ನೋದು ಕೊಹ್ಲಿ ವಾದ ಎನ್ನುತ್ತಿದ್ದಾರೆ.

ಇದನ್ನೂ ಓದಿ: ಗೆರೆ ಎಳೆದು ಬ್ಯಾಟ್ ಕುಟ್ಟಿ ಸಂಭ್ರಮ.. KL ರಾಹುಲ್ ಟಾಂಟ್ ಕೊಟ್ಟಿದ್ದು ಯಾರಿಗೆ..?

ಆಕಾಶ್ ಚೋಪ್ರಾ ಮತ್ತು ವೀರೇಂದ್ರ ಸೆಹ್ವಾಗ್ ಅವರು, ಕೊಹ್ಲಿಯ ಕೋಪವನ್ನು ಟೀಕಿಸಿದ್ದಾರೆ. ಬೇಸರಗೊಳ್ಳುವುದಲ್ಲ. ಏನೇ ಇದ್ದರೂ ಕ್ಯಾಪ್ಟನ್ ಪಾಟೀದಾರ್​ಗೆ ತಿಳಿಸಿಬೇಕು ಎಂದಿದ್ದಾರೆ. ಇದಲ್ಲದೇ, ಪಂದ್ಯ ಮುಗಿದ ಬಳಿಕ, ಕೊಹ್ಲಿ ಮತ್ತು ರಜತ್ ಪಾಟೀದಾರ್​ ಮುಖಾಮುಖಿ ಆದಾಗಲೂ ಕೋಪದಲ್ಲೇ ಇರೋದು ಕಂಡು ಬಂದಿದೆ. ಇನ್ನು, ರಜತ್ ಪಾಟೀದಾರ್​ ಕೆ.ಎಲ್.ರಾಹುಲ್ ಅವರ ಕ್ಯಾಚ್ ಕೂಡ ಬಿಟ್ಟು ತಪ್ಪು ಮಾಡಿದ್ದರು. ಇದೇ ವಿಚಾರಕ್ಕೆ ವಿರಾಟ್ ಕೊಹ್ಲಿ ಕೋಪಿಸಿಕೊಂಡಿದ್ದರು ಎನ್ನಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment