/newsfirstlive-kannada/media/post_attachments/wp-content/uploads/2025/04/KOHLI-15.jpg)
ರಾಜಸ್ಥಾನ್ ರಾಯಲ್ಸ್ ಎದುರು ಗೆದ್ದ ಬಳಿಕ ಆರ್ಸಿಬಿ ಕಾನ್ಫಿಡೆನ್ಸ್ ದುಪ್ಪಟ್ಟಾಗಿದೆ. ಹೋಮ್ಗ್ರೌಂಡ್ನಲ್ಲಿ ಮೊದಲ ಜಯ ಸಾಧಿಸಿದ್ದಕ್ಕಿಂತ, ಕಿಂಗ್ ಕೊಹ್ಲಿಯ ಕಮ್ಬ್ಯಾಕ್ ಆತ್ಮವಿಶ್ವಾಸವನ್ನ ಡಬಲ್ ಮಾಡಿದೆ. ರಾಜಸ್ಥಾನ ವಿರುದ್ಧ ಕ್ಲಾಸ್ ಆಟವಾಡಿ ಮಿಂಚಿದ ವಿರಾಟ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ರು. ಅದು ಕೇವಲ ಒಂದು ಇನ್ನಿಂಗ್ಸ್ ಆಗಿರಲಿಲ್ಲ.. ಅದೊಂದು ಸ್ಟೇಟ್ಮೆಂಟ್.
ಚಿನ್ನಸ್ವಾಮಿ ‘ಚಿನ್ನ’ನ ರಾಯಲ್ ಆಟ
ರಾಜಸ್ಥಾನ್ ರಾಯಲ್ಸ್ ಎದುರು ಚಿನ್ನಸ್ವಾಮಿಯ ಚಿನ್ನ ವಿರಾಟ್ ಕೊಹ್ಲಿ ಚಿನ್ನದಂಥ ಇನ್ನಿಂಗ್ಸ್ ಕಟ್ಟಿದ್ರು. ಈ ಸೀಸನ್ನಲ್ಲಿ ಹೋಮ್ಗ್ರೌಂಡ್ನಲ್ಲಿ ಸ್ಟ್ರಗಲ್ ಮಾಡಿದ್ದ ಕೊಹ್ಲಿ, ರಾಜಸ್ಥಾನ್ ವಿರುದ್ಧ ರಿಧಮ್ ಕಂಡುಕೊಂಡ್ರು. 3 ವೈಫಲ್ಯಗಳನ್ನ ಮೆಟ್ಟಿನಿಂತ ಬೆಂಗಳೂರಿನ ದತ್ತುಪುತ್ರ ನೆಚ್ಚಿನ ಮೈದಾನದಲ್ಲಿ ಕ್ಲಾಸ್ ಆಟವಾಡಿದ್ರು. ರಾಜಸ್ಥಾನ್ ಬೌಲರ್ಗಳನ್ನು ಚಿಂದಿ ಉಡಾಯಿಸಿ ಹಾಫ್ ಸೆಂಚುರಿ ಸಿಡಿಸಿದ್ರು.
ಇದನ್ನೂ ಓದಿ: ಈ ಬಾರಿ ಸೋಲುವುದರಲ್ಲೇ ಧೋನಿ ದಾಖಲೆ.. ಚೆನ್ನೈಗೆ ನಿನ್ನೆ ಎಷ್ಟನೇ ಸೋಲು..?
ದತ್ತುಪುತ್ರನ ವಿಶೇಷ ದಾಖಲೆ
ಹಾಫ್ ಸೆಂಚುರಿ ಇನ್ನಿಂಗ್ಸ್ನೊಂದಿಗೆ ಕೊಹ್ಲಿ ಹೊಸ ದಾಖಲೆಯನ್ನೂ ಬರೆದ್ರು. ಟಿ20 ಫಾರ್ಮೆಟ್ನಲ್ಲಿ ಒಂದೇ ಗ್ರೌಂಡ್ನಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದ್ರು. ಈವರೆಗೆ ಚಿನ್ನಸ್ವಾಮಿ ಮೈದಾನದಲ್ಲಿ ಆಡಿದ ಟಿ20 ಪಂದ್ಯಗಳಲ್ಲಿ 26 ಹಾಫ್ ಸೆಂಚುರಿ ಸಿಡಿಸಿದ್ದಾರೆ. ವಿಶ್ವದ ಬೇರಾವ ಬ್ಯಾಟರ್ ಕೂಡ ಒಂದೇ ಮೈದಾನದಲ್ಲಿ ಇಷ್ಟು ಹಾಫ್ ಸೆಂಚುರಿ ಸಿಡಿಸಿ ದಾಖಲೆ ಬರೆದಿಲ್ಲ.
ಇಲ್ಲಿ ನಾನೇ ಕಿಂಗ್
ರಾಜಸ್ಥಾನ್ ರಾಯಲ್ಸ್ ಎದುರಿನ ರಾಯಲ್ ಆಟದೊಂದಿಗೆ ವಿರಾಟ್ ಕೊಹ್ಲಿ ಇದು ನನ್ನ ಕಿಂಗ್ಡಮ್ ಅನ್ನೋ ಸಂದೇಶವನ್ನೂ ರವಾನಿಸಿದ್ದಾರೆ. ಟಿ20 ಫಾರ್ಮೆಟ್ನಲ್ಲಿ ಒಂದೇ ಮೈದಾನದಲ್ಲಿ ಹೆಚ್ಚು ರನ್ಗಳಿಸಿದ ದಾಖಲೆಗೂ ಈಗ ಕೊಹ್ಲಿಯೇ ಕೇರ್ ಆಫ್ ಅಡ್ರೆಸ್. ರಾಜಸ್ಥಾನ್ ಎದುರಿನ ಪಂದ್ಯದೊಂದಿಗೆ ಚಿನ್ನಸ್ವಾಮಿ ಅಂಗಳದಲ್ಲಿ 3,500 ರನ್ಗಳ ಗಡಿ ದಾಟಿದ್ರು. ಒಟ್ಟಾರೆ ಚಿನ್ನಸ್ವಾಮಿ ಗ್ರೌಂಡ್ನಲ್ಲಿ ಆಡಿದ ಟಿ20 ಪಂದ್ಯಗಳಿಂದ 3,556 ರನ್ಗಳನ್ನ ಕೊಹ್ಲಿಗಳಿಸಿದ್ದು. ಒಂದೇ ಮೈದಾನದಲ್ಲಿ ವಿಶ್ವದ ಯಾವೊಬ್ಬ ಬ್ಯಾಟರ್ ಕೂಡ ಇಷ್ಟು ರನ್ಗಳಿಸಿಲ್ಲ.
ಇದನ್ನೂ ಓದಿ: ಪ್ಲೇ-ಆಫ್ ರೇಸ್ನಲ್ಲಿ ಒಟ್ಟು 6 ತಂಡಗಳು.. ಯಾವ್ಯಾವ ತಂಡದ ಲಕ್ ಬದಲಾಗಬೇಕು..?
287 ಬೌಂಡರಿ, 132 ಸಿಕ್ಸರ್, 4 ಭರ್ಜರಿ ಸೆಂಚುರಿ
ಕೇವಲ ಐಪಿಎಲ್ ಪಂದ್ಯಗಳ ಲೆಕ್ಕವನ್ನೇ ತೆಗೆದುಕೊಂಡ್ರೂ ಚಿನ್ನಸ್ವಾಮಿಗೆ ಕೊಹ್ಲಿನೇ ಕಿಂಗ್. ಆಡಿರೋದು 90 ಇನ್ನಿಂಗ್ಸ್, ಗಳಿಸಿರೋದು 3140 ರನ್. ಎವರೇಜ್ 40 ಆಗಿದ್ರೆ, ಸ್ಟ್ರೈಕ್ರೇಟ್ 142.92 ಇದೆ. ಕೊಹ್ಲಿಯ ಕನ್ಸಿಸ್ಟೆನ್ಸಿಗೆ ಇದೇ ಬೆಸ್ಟ್ ಎಕ್ಸಾಂಪಲ್. ಈ ಗ್ರೌಂಡ್ನಲ್ಲಿ 287 ಬೌಂಡರಿ ಬಾರಿಸಿರೋ ವಿರಾಟ್, 132 ಸಿಕ್ಸರ್ ಸಿಡಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ 4 ಅವಿಸ್ಮರಣೀಯ ಶತಕಗಳನ್ನ ಬಾರಿಸಿ ಹೆಮ್ಮೆಯಿಂದ ಬ್ಯಾಟ್ ಎತ್ತಿ ಸಂಭ್ರಮಿಸಿದ್ದಾರೆ.
ಮ್ಯಾನೇಜ್ಮೆಂಟ್ಗೆ ರಿಲೀಫ್..
ಸೀಸನ್ನಲ್ಲಿ ಅವೇ ಪಂದ್ಯಗಳಲ್ಲಿ ಕೊಹ್ಲಿ ಅಬ್ಬರದ ಪರ್ಫಾಮೆನ್ಸ್ ನೀಡ್ತಿದ್ರು. ಹೋಮ್ಗ್ರೌಂಡ್ನಲ್ಲಿ ಮಾತ್ರ ಪರದಾಡಿದ್ರು. ಕೊನೆಗೂ ಚಿನ್ನಸ್ವಾಮಿ ಅಂಗಳದ ಚಾಲೆಂಜ್ನ ಕೊಹ್ಲಿ ಮೆಟ್ಟಿ ನಿಂತಿದ್ದಾರೆ. ಕೊಹ್ಲಿ ಫಾರ್ಮ್ ಕಂಡುಕೊಂಡಿರೋದ್ರಿಂದ ಮ್ಯಾನೇಜ್ಮೆಂಟ್ ನಿಟ್ಟುಸಿರು ಬಿಟ್ಟಿದೆ. ಕೊಹ್ಲಿ ಅಂದ್ರೆ ಕನ್ಸಿಸ್ಟೆನ್ಸಿ ಅನ್ನೋ ಮಾತು ಕ್ರಿಕೆಟ್ ವಲಯದಲ್ಲಿದೆ. ಕನ್ಸಿಸ್ಟೆಂಟ್ ಆಟವನ್ನ ಹೋಮ್ಗ್ರೌಂಡ್ನಲ್ಲಿ ಕೊಹ್ಲಿ ಮುಂದುವರೆಸ್ತಾರೆ ಅನ್ನೋ ಭರವಸೆ ತಂಡದ್ದು.
ಪ್ಲೇ-ಆಫ್ ಎಂಟ್ರಿಗೆ ಹೋಮ್ನಲ್ಲಿ ಉಳಿದಿರೋ 3 ಪಂದ್ಯಗಳಲ್ಲಿ ಗೆಲುವು ಆರ್ಸಿಬಿ ಪಾಲಿಗೆ ಮಹತ್ವದ್ದಾಗಿವೆ. ಈ ಪಂದ್ಯಗಳನ್ನ ಗೆದ್ರೆ ಪ್ಲೇ ಆಫ್ಗೆ ಸಲೀಸಾಗಿ ಎಂಟ್ರಿ ಕೊಡಬಹುದು. ಹೀಗಾಗಿ ಈ ಸಮಯದಲ್ಲಿ ಕೊಹ್ಲಿ ಕಮ್ಬ್ಯಾಕ್ ಮಾಡಿರೋದು ಆರ್ಸಿಬಿ ಕ್ಯಾಂಪ್ನ ಆತ್ಮವಿಶ್ವಾಸವನ್ನ ಮತ್ತಷ್ಟು ಹೆಚ್ಚಿಸಿದೆ. ಅಭಿಮಾನಿಗಳಂತೂ ಸಂತೋಷದಲ್ಲಿ ತೇಲಾಡುವಂತಾಗಿದೆ.
ಇದನ್ನೂ ಓದಿ: ರಾಜಸ್ಥಾನ್ ವಿರುದ್ಧ ಆರ್ಸಿಬಿ ರೋಚಕ ಗೆಲುವು.. ಮೂರು ಸಂಭ್ರಮಕ್ಕೆ ಕಾರಣವಾಯ್ತು ಈ ವಿಕ್ಟರಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್