/newsfirstlive-kannada/media/post_attachments/wp-content/uploads/2025/06/Yash-Dayal2.jpg)
ಆರ್ಸಿಬಿ ಸ್ಟಾರ್ ಯಶ್ ದಯಾಳ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಮಾಡಿದ ಆರೋಪ ಬೆನ್ನಲ್ಲೇ, ಇವತ್ತು ಮಹತ್ವದ ಬೆಳವಣಿಗೆಗಳು ನಡೆದಿವೆ.
ಇವತ್ತು ಗಾಜಿಯಾಬಾದ್ ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಬೆನ್ನಲ್ಲೇ ಕ್ರಮ ತೆಗೆದುಕೊಂಡಿರುವ ಪೊಲೀಸರು ಯಶ್ ದಯಾಳ್ಗೆ ತನಿಕೆಗೆ ಬಂದು ಹೇಳಿಕೆ ನೀಡುವಂತೆ ನೋಟಿಸ್ ನೀಡಿದ್ದಾರೆ. ತನಿಖೆಗೆ ಸಹಕಾರ ನೀಡಬೇಕು. ಯಾವುದೇ ವಿಳಂಬ ಆಗಬಾರದು ಎಂದು ಪೊಲೀಸರು ತಮ್ಮ ನೋಟಿಸ್ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬ್ಯುಸಿನೆಸ್ ಲೋಕಕ್ಕೆ ಕೊಹ್ಲಿ ಗ್ರ್ಯಾಂಡ್ ಎಂಟ್ರಿ.. 40 ಕೋಟಿಯೊಂದಿಗೆ ಮೊದಲ ಇನ್ನಿಂಗ್ಸ್ ಆರಂಭ!
2019ರಿಂದ ಸೋಶಿಯಲ್ ಮೀಡಿಯಾ ಮೂಲಕ ದಯಾಳ್ ಜೊತೆ ನಾನು ಮಾತನಾಡಲು ಶುರುಮಾಡಿದೆ ಎಂದು ಸಂತ್ರಸ್ತೆ ಇವತ್ತು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ನಂತರ ಇನ್ಸ್ಟಾಗ್ರಾಮ್ನಲ್ಲಿ ನಮ್ಮಿಬ್ಬರ ಮಾತುಕತೆ ಜೋರಾಗಿತ್ತು. ಯಶ್ ನಮ್ಮ ಮದುವೆ ಬಗ್ಗೆ ಮಾತನಾಡಿದರು. ಅಲ್ಲದೇ ನಾನು ಅನೇಕ ನಗರಗಳಿಗೆ ಯಶ್ ಜೊತೆ ಸುತ್ತಾಟ ನಡೆಸಿದ್ದೇನೆ ಹೇಳಿಕೆ ನೀಡಿದ್ದಾಳೆ ಅಂತಾ ವರದಿಯಾಗಿದೆ.
ಇದನ್ನೂ ಓದಿ: ಸಿರಾಜ್ಗೆ ಸ್ಪೆಷಲ್ ಟ್ರೈನಿಂಗ್; ಇದರ ಹಿಂದೆ ಟೀಂ ಇಂಡಿಯಾದ ಮಾಸ್ಟರ್ ಪ್ಲಾನ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ