RCB ಸ್ಟಾರ್ ದಯಾಳ್ ಜೊತೆಗಿನ ವಿಡಿಯೋ ಕರೆಯ ಸ್ಕ್ರೀನ್​ಶಾಟ್ ಹಂಚಿಕೊಂಡ ಸಂತ್ರಸ್ತೆ.. ಚಾಟ್ ಕೂಡ ವೈರಲ್

author-image
Ganesh
Updated On
RCB ಸ್ಟಾರ್ ದಯಾಳ್ ಜೊತೆಗಿನ ವಿಡಿಯೋ ಕರೆಯ ಸ್ಕ್ರೀನ್​ಶಾಟ್ ಹಂಚಿಕೊಂಡ ಸಂತ್ರಸ್ತೆ.. ಚಾಟ್ ಕೂಡ ವೈರಲ್
Advertisment
  • ಯಶ್ ದಯಾಳ್ ವಿರುದ್ಧ ಯುವತಿ ಗಂಭೀರ ಆರೋಪ
  • ಇದೀಗ ದಯಾಳ್ ಜೊತೆಗಿನ ಮಾತುಕತೆಗೆ ಸಾಕ್ಷಿ ಕೊಟ್ಟ ಯುವತಿ
  • ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತನಿಖೆ ನಡೀತಿದೆ

ಆರ್​ಸಿಬಿ ಸ್ಟಾರ್ ಯಶ್ ದಯಾಳ್, ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ದಯಾಳ್ ವಿರುದ್ಧ ಆರೋಪಗಳನ್ನು ಮಾಡಿರುವ ಯುವತಿ, ಇದೀಗ ದಯಾಳ್ ಮಾಡಿರುವ ವಿಡಿಯೋ ಕರೆಗಳ ಸ್ಕ್ರೀನ್​ಶಾಟ್​ಗಳನ್ನು ಮತ್ತು ಹಳೆಯ ಚಾಟ್​​ಗಳನ್ನು ಹಂಚಿಕೊಂಡಿದ್ದಾಳೆ. ಬೆನ್ನಲ್ಲೇ ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಯಶ್ ದಯಾಳ್ ಅವರ ಗೆಳತಿ ಎನ್ನಲಾದ ಯುವತಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಫೋಟೋಗಳು 2022 ರದ್ದಾಗಿದ್ದು, ಆಗ ಯಶ್ ಗುಜರಾತ್ ಟೈಟಾನ್ಸ್‌ನಲ್ಲಿದ್ದರು. ನಾನು ನಿನ್ನನ್ನು ಬಿಟ್ಟು ಹೋಗಲು ನಿಜವಾಗಿಯೂ ಪ್ರಯತ್ನಿಸಿದೆ. ಎಲ್ಲವನ್ನೂ ಮರೆಯಲು ಸಾಧ್ಯವಿಲ್ಲ. ವಿಶೇಷವಾಗಿ ನೀನು ನನ್ನ ಹೃದಯ ಮತ್ತು ಭಾವನೆಗಳಿಗೆ ನೀಡಿದ ನೋವು ಎಂದು ಪೋಸ್ಟ್​ನಲ್ಲಿ ಬರೆದಿದ್ದಾಳೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಇಂದಿನಿಂದ ಅಗ್ನಿ ಪರೀಕ್ಷೆ; ಶಾರ್ದೂಲ್ ಔಟ್​.. ಬದಲಿ ಆಟಗಾರ ಯಾರು..?

publive-image

ನಾನು ನಿಮ್ಮನ್ನು ಬಿಟ್ಟು, ಎಲ್ಲವನ್ನೂ ದೇವರಿಗೆ ಬಿಡಲು ಪ್ರಯತ್ನಿಸಿದೆ. ನೀನು ನನ್ನಂತಹ ಹುಡುಗಿಯರನ್ನು ಮೋಸಗೊಳಿಸುತ್ತಿರುವ ರೀತಿ, ಬಹುಶಃ ಎಲ್ಲರಿಗೂ ಕಣ್ಣು ತೆರೆಸುವ ಅನುಭವ ಆಗಬಹುದು. ನಿಮ್ಮ ಕುಟುಂಬವು ನಿಮಗೆ ನಿಷ್ಠೆ ಮತ್ತು ಪ್ರಾಮಾಣಿಕತೆಯ ಕಲಿಸುತ್ತದೆ ಎಂದು ಭಾವಿಸುತ್ತೇನೆ. ಇದು ನಿಮ್ಮ ಯಶಸ್ಸಲ್ಲ. ನಿಜವಾದ ಯಶಸ್ಸು ಸಂಬಂಧಗಳಲ್ಲಿ ಸ್ಪಷ್ಟತೆ, ಪ್ರಾಮಾಣಿಕತೆ ಮತ್ತು ಶುದ್ಧತೆ. ಹುಡುಗಿಯರ ಕಡೆಗೆ ಬಳಸಿ ಎಸೆಯುವ ಮನೋಭಾವ ಯಶಸ್ಸು ಅಲ್ಲ. ನಾನು ಬಹಳಷ್ಟು ಹೇಳಬಹುದಿತ್ತು.. ನಾನು ಕರ್ಮವನ್ನು ನಂಬುತ್ತೇನೆ ಎಂದು ಬರೆದುಕೊಂಡಿದ್ದಾಳೆ.

Image

ದಯಾಳ್ ಚಾಟ್ ವೈರಲ್..!

ಯುವತಿ ಇನ್​ಸ್ಟಾಗ್ರಾಮ್​ನಲ್ಲಿ 2022 ರಲ್ಲಿ ಯಶ್ ನಡೆಸಿದ ಮಾತುಕತೆಯ ಚಾಟ್​ ಶೇರ್ ಮಾಡಲಾಗಿದೆ. ಅದಕ್ಕೆ ಯಶ್ ದಯಾಳ್ ಕಾಮೆಂಟ್ ಮಾಡಿದ್ದಾರೆ. ‘ಹಾಯ್ ಲವ್’ ಎಂದು ಬರೆದಿದ್ದಾರೆ. ಯಶ್ ದಯಾಳ್ ಬರೆದಿರುವ ಅನೇಕ ಚಾಟ್​ಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಆರೋಪ ಸಂಬಂಧ ಘಾಜಿಯಾಬಾದ್ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈಗಾಲೇ ಅಧಿಕಾರಿಗಳು ಸಂತ್ರಸ್ತ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಯಶ್ ದಯಾಳ್​ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಆದರೆ ದಯಾಳ್ ಅವರಿಂದ ಆರೋಪ ಸಂಬಂಧ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇದನ್ನೂ ಓದಿ: ಧೋನಿ, ಕೊಹ್ಲಿ ಬಳಿ ಆಗದಿದ್ದು ಗಿಲ್ ಮಾಡ್ತಾರಾ? 58 ವರ್ಷದ ಇತಿಹಾಸ ಅಳಿಸಲು ಯಂಗ್ ಇಂಡಿಯಾ ರೆಡಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment