ಒಂದೇ ಒಂದು ವಿಚಾರದಲ್ಲಿ ಯಡವಟ್ಟು.. RCB ಕಟ್ಟಿದ ತಂಡದ ವೀಕ್ನೆಸ್, ಸ್ಟ್ರೆಂಥ್ ಏನು?

author-image
Ganesh
Updated On
Mega Auction; ಎಲ್ಲಾ ಫ್ರಾಂಚೈಸಿಗಿಂತ RCB ಪರ್ಸ್​​ನಲ್ಲೇ ಹೆಚ್ಚು ಹಣ.. ಕೇವಲ 5 ಕೋಟಿ ಉಳಿಸಿಕೊಂಡ ಟೀಮ್?
Advertisment
  • ಆರ್​ಸಿಬಿ ಖರೀದಿಸಿರುವ ಹೊಸ ತಂಡ ಹೇಗಿದೆ?
  • RCB ನಸೀಬು ಬದಲಿಸ್ತಾರಾ ನ್ಯೂ ಸ್ಟಾರ್ಸ್​?
  • ಆರ್​ಸಿಬಿ ವಿದೇಶಿಗರ ಮೇಲೆ ಡಿಪೆಂಡ್ ಆಗಬೇಕಾ?

ಐಪಿಎಲ್ ಸೀಸನ್-18ರ ಬಿಡ್ಡಿಂಗ್​​ನಲ್ಲಿ ಆರ್​ಸಿಬಿ ಸ್ಟಾರ್ ಆಟಗಾರರನ್ನೇ ಖರೀದಿಸಿದೆ. ವರ್ಲ್ಡ್​​ ಕ್ಲಾಸ್​ ಸ್ಟಾರ್​​ಗಳ ಜೊತೆಗೆ ಕೆಲ ಅಚ್ಚರಿ ಆಟಗಾರರನ್ನು ತಂಡಕ್ಕೆ ಕರೆ ತಂದಿದೆ.

ಮೆಗಾ ಹರಾಜಿನಲ್ಲಿ ಚಿನ್ನಸ್ವಾಮಿ ಕಂಡೀಷನ್ಸ್​ಗೆ ತಕ್ಕಂತ ಆಟಗಾರರನ್ನೇ ಖರೀದಿಸಿದ್ದೇವೆ. ಕಳೆದ ಬಾರಿಗಿಂತ ಉತ್ತಮ ತಂಡ ಕಟ್ಟಿದ್ದೇವೆ ಎಂದೇ ಆರ್​ಸಿಬಿ ಡೈರೆಕ್ಟರ್​ ಮೊ ಬೊಬಾಟ್ ಹೇಳ್ತಿದ್ದಾರೆ. ನಿಜಕ್ಕೂ ಆರ್​ಸಿಬಿ ಬೆಸ್ಟ್​ ಟೀಮ್ ಕಟ್ಟಿದ್ಯಾ? ಆರ್​ಸಿಬಿಯ ಬಲಾಬಲ ಏನು? ವಿಕ್ನೇಸ್​ ಏನು? ಈ ಬಗ್ಗೆ ಸದ್ಯ ಚರ್ಚೆ ನಡೀತಿದೆ.

ಆರ್​​ಸಿಬಿ ಸ್ಟ್ರೆಂಥ್​
ಮೆಗಾ ಹರಾಜಿನಲ್ಲಿ ಕೆಲವು ಆಟಗಾರರನ್ನು ಕೈಬಿಟ್ಟರೂ ಆರ್​ಸಿಬಿ ಬಲಿಷ್ಠ ಹಾಗೂ ಬ್ಯಾಲೆನ್ಸಿಂಗ್ ಟೀಮ್​​ ಕಟ್ಟಿದೆ. ವಿರಾಟ್​ ಕೊಹ್ಲಿ, ಫಿಲ್​ ಸಾಲ್ಟ್​, ರಜತ್ ಪಾಟೀದಾರ್, ಜೇಕಬ್ ಬೆಥಲ್​ ಅವರಂತಹ ಡೇಂಜರಸ್ ಟಾಪ್ ಆರ್ಡರ್​ ಬ್ಯಾಟರ್​ಗಳನ್ನು ಹೊಂದಿದೆ. ಮಿಡಲ್ ಆರ್ಡರ್​ನಲ್ಲಿ ಲಿಯಾಮ್ ಲಿವಿಂಗ್​​ಸ್ಟೋನ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ ಪಂದ್ಯದ ಗತಿಯನ್ನೇ ಬದಲಿಸಬಲ್ಲ ದೈತ್ಯರ ಪಡೆಯೂ ಇದೆ. ಮಿಗಿಲಾಗಿ ಜೋಶ್ ಹೇಜಲ್​ವುಡ್​, ಸ್ವಿಂಗ್ ಮಾಸ್ಟರ್​ ಭುವನೇಶ್ವರ್, ಸ್ಟಾರ್ ಬ್ಯಾಟ್ಸ್​ಮನ್​ಗಳನ್ನೇ ನಡುಗಿಸಬಲ್ಲ ಲಂಕನ್ ಪೇಸರ್ ನುವಾನ್ ತುಷಾರಾ, ಆಫ್ರಿಕನ್ ಮಿಸೈಲ್ ಲುಂಗಿ ಎಂನ್ಗಿಡಿ ಅವರಂತಹ ಎಕ್ಸ್​ಪಿರಿಯನ್ಸ್ ಬೌಲಿಂಗ್ ಅಟ್ಯಾಕ್ ಜೊತೆಗೆ ಯಶ್ ದಯಾಳ್, ಮನೋಜ್ ಬಾಂಡೆಗೆಯಂತಹ ಪ್ರತಿಭಾವಂತ ಯುವ ಪಡೆಯ ಬಲವಿದೆ.

ಇದನ್ನೂ ಓದಿ:‘ನನ್ನ ಪ್ರೀತಿಯ..’ ಆರ್​ಸಿಬಿ ಜೊತೆಗಿನ ದಿನಗಳ ನೆನೆದು ಮೊಹ್ಮದ್ ಸಿರಾಜ್ ಭಾವುಕ..

ಆರ್​​ಸಿಬಿ ವೀಕ್ನೆಸ್
ಮೇಲ್ನೋಟಕ್ಕೆ ಬಲಿಷ್ಠವಾಗಿ ಕಾಣ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿಕ್ನೇಸ್ ಕೂಡ ಇದೆ. ಪ್ರತಿ ತಂಡದ ಸಕ್ಸಸ್​ನಲ್ಲಿ ಕೋರ್ ಟೀಮ್ ಪ್ರಮುಖ ಪಾತ್ರ ವಹಿಸುತ್ತದೆ. ಆರ್​ಸಿಬಿ ಕೋರ್ ಟೀಮ್ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇಂಡಿಯನ್ ಆಟಗಾರರ ಬದಲಿಗೆ ವಿದೇಶಿ ಆಟಗಾರರನ್ನೇ ಹೆಚ್ಚು ನೆಚ್ಚಿಕೊಂಡಿದೆ. ಮಿಗಿಲಾಗಿ ಕ್ವಾಲಿಟಿ ಸ್ಪಿನ್ನರ್​ಗಳ ಶಾಪಿಂಗ್​ನಲ್ಲಿ ಎಡವಿದೆ. ಸ್ವಪ್ನಿಲ್ ಸಿಂಗ್, ಸುಯಶ್ ಶರ್ಮಾ ಸ್ಪೆಷಲಿಷ್ಟ್​ ಸ್ಪಿನ್ನರ್​​ಗಳಾಗಿದ್ದಾರೆ. ಇವರಿಗೆ ಸೂಕ್ತ ಬ್ಯಾಕ್ ಆಪ್ ಆಟಗಾರರ ಕೊರತೆಯೂ ಎದ್ದು ಕಾಣ್ತಿದೆ. ಬೆಸ್ಟ್ ಪ್ಲೇಯಿಂಗ್ ಇಲೆವೆನ್ ಕಟ್ಟಲು ಮುಂದಾದ್ರೆ ಬ್ಯಾಟಿಂಗ್ ಡೆಪ್ತ್​ ಇಲ್ಲದಂತಾಗುತ್ತೆ.

ಒಟ್ನಲ್ಲಿ ವಿರಾಟ್​ ಕೊಹ್ಲಿಗೆ ಓಪನರ್​ ಆಗಿ ಫಿಲ್​ ಸಾಲ್ಟ್​ನಂತ ಖತರ್ನಾಕ್ ಜೋಡಿ ಖರೀದಿಸಿರುವ ಆರ್​ಸಿಬಿ, ಫಿನಿಷರ್​ ರೋಲ್​​ ಪ್ಲೇ ಮಾಡಬಲ್ಲ 7 ಆಲ್​ರೌಂಡರ್​ಗಳಿಗೆ ಮಣೆ ಹಾಕಿದೆ. ಚಿನ್ನಸ್ವಾಮಿಗೆ ಹೊಂದಿಕೊಳ್ಳುವ ಫಾಸ್ಟ್ ಬೌಲಿಂಗ್ ಅಟ್ಯಾಕರ್​ಗಳನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಕ್ವಾಲಿಟಿ ಸ್ಪಿನ್ನರ್​ಗಳ ಪಿಕ್​ ಮಾಡುವಲ್ಲಿ ಎಡವಿರುವುದು ಮೇಲ್ನೋಟಕ್ಕೆ ಕಾಣಿಸ್ತಿದೆ. ಈ ವಿಕ್ನೇಸ್​​​​​ ಮೆಟ್ಟಿನಿಂತು ಆನ್​ಫೀಲ್ಡ್​ನಲ್ಲಿ ಆರ್​​ಸಿಬಿ ಅದ್ಭುತ ಪ್ರದರ್ಶನ ನೀಡಬೇಕಿದೆ.

ಇದನ್ನೂ ಓದಿ:ಕಾರ್ತಿಕ್​​ ಸ್ಥಾನಕ್ಕೆ ಇಬ್ಬರನ್ನು ಖರೀದಿಸಿದ ಆರ್​ಸಿಬಿ; ಕೊಹ್ಲಿಗೆ ಇವರಿಬ್ಬರೂ ಉತ್ತಮ ಸಾಥಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment