ಆರ್​ಸಿಬಿ ಸಕ್ಸಸ್ ಹಿಂದೆ ಜೋಡೆತ್ತು ಕಾರಣ.. ಕೊಹ್ಲಿಗೆ ಸಾಥಿ ಆಗಿದ್ದು ಒಬ್ಬರಲ್ಲ, ಇಬ್ಬರು..!

author-image
Ganesh
Updated On
ಆರ್​ಸಿಬಿ ಸಕ್ಸಸ್ ಹಿಂದೆ ಜೋಡೆತ್ತು ಕಾರಣ.. ಕೊಹ್ಲಿಗೆ ಸಾಥಿ ಆಗಿದ್ದು ಒಬ್ಬರಲ್ಲ, ಇಬ್ಬರು..!
Advertisment
  • ಈ ಸೀಸನ್​ನಲ್ಲಿ ಕಿಂಗ್​​ ಕೊಹ್ಲಿಗೆ ಇಬ್ಬರು ಜೊತೆಗಾರರು
  • ನಯಾ ಜೋಡೆತ್ತುಗಳೇ ಆರ್​ಸಿಬಿ ಸಕ್ಸಸ್ ಸಿಕ್ರೇಟ್
  • ತ್ರಿಮೂರ್ತಿಗಳ ಜೊತೆಯಾಟ.. RCB ಜಯದ ಓಟ

ಪ್ರತಿ ಸೀಸನ್​ನಲ್ಲಿ ಆರ್​ಸಿಬಿ ತಂಡದಲ್ಲಿ ಜೋಡೆತ್ತುಗಳು ಕಾಣಿಸಿಕೊಳ್ತಾರೆ. ಕೊಹ್ಲಿ ಆ್ಯಂಡ್ ಕ್ರಿಸ್ ಗೇಲ್.. ಕೊಹ್ಲಿ ಆ್ಯಂಡ್ ಎಬಿಡಿ... ಕೊಹ್ಲಿ ಆ್ಯಂಡ್ ಫಾಫ್.. ಕೊಹ್ಲಿ ಆ್ಯಂಡ್ ಮ್ಯಾಕ್ಸ್​ವೆಲ್​.. ಆದ್ರೆ ಈ ಸೀಸನ್​ನಲ್ಲಿ ಆರ್​​ಸಿಬಿ ಸಕ್ಸಸ್​​ ಹಿಂದೆ ಎರಡು ಜೋಡಿ ಇದೆ.

ಸೀಸನ್​-18ರ ಫಸ್ಟ್ ಹಾಫ್ ಪಂದ್ಯಗಳು ಮುಗಿದಿದೆ. ಪ್ಲೇ-ಆಫ್ ಲೆಕ್ಕಾಚಾರಗಳು ಶುರುವಾಗಿದೆ. ಟೇಬಲ್ ಟಾಪರ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇನ್ನೇನು ಪ್ಲೇ ಆಫ್ ಪ್ರವೇಶಿಸಲು ತುದಿಗಾಲಲ್ಲಿ ನಿಂತಿದೆ. ಕಳೆದ ಸೀಸನ್​​ಗಳಿಗಿಂತ ಭಿನ್ನವಾಗಿ ಕಾಣ್ತಿರೋ ಆರ್​​ಸಿಬಿ ಕಪ್​ ಗೆಲ್ಲೋ ಹಾಟ್​ ಫೇವರಿಟ್​ ಅನಿಸಿದೆ. ಆರ್​ಸಿಬಿಯ ಈ ಸಕ್ಸಸ್​ಗೆ ಕಾರಣ ಏನು ಗೊತ್ತಾ.? ಡಬಲ್ ಜೋಡೆತ್ತುಗಳ ಜಬರ್ದಸ್ತ್​ ಆಟ.

ಕೊಹ್ಲಿಗೆ ಒಬ್ಬರಲ್ಲ.. ಇಬ್ಬರು ಜೊತೆಗಾರರು

ಆರ್​ಸಿಬಿ ಅಂದ್ರೆ ಕೊಹ್ಲಿ.. ಕೊಹ್ಲಿ ಅಂದ್ರೆ ಆರ್​ಸಿಬಿ ಅನ್ನೋ ಮಾತಿದೆ. ಕೊಹ್ಲಿ ಇಲ್ಲದ ಆರ್​ಸಿಬಿ ಗೆಲುವು ಅಸಾಧ್ಯ ಅನ್ನೋ ಮಾತೂ ಇದೆ. ಇದಕ್ಕೆ ತಕ್ಕಂತೆ ಕೊಹ್ಲಿ ಪರ್ಫಾಮ್​ ಮಾಡಿದ್ದಾರೆ. ಪ್ರತಿ ಸೀಸನ್​ನಲ್ಲೂ ಕೊಹ್ಲಿಗೆ ಒಬ್ಬರು ಸಾಥ್​ ಕೊಡ್ತಾರೆ. ಕೊಹ್ಲಿ ಆ್ಯಂಡ್ ಕ್ರಿಸ್ ಗೇಲ್, ಕೊಹ್ಲಿ ಆ್ಯಂಡ್ ಎಬಿಡಿ.. ಕೊಹ್ಲಿ ಆ್ಯಂಡ್ ಫಾಫ್.. ಕೊಹ್ಲಿ ಆ್ಯಂಡ್ ಮ್ಯಾಕ್ಸ್​ವೆಲ್​.. ಹೀಗೆ ಜೋಡೆತ್ತುಗಳ ಪರಿಪಾಠ ಆರ್​ಸಿಬಿಯಲ್ಲಿ ನಡೆದುಕೊಂಡು ಬಂದಿದೆ. ಈ ಸಲ ಆರ್​ಸಿಬಿಗೆ ಒಬ್ಬರಲ್ಲ.. ಇಬ್ಬರು ಜೊತೆಗಾರರು ಸಿಕ್ಕಿದ್ದಾರೆ. ಈ ನಯಾ ಜೊತೆಗಾರರು ಆರ್​ಸಿಬಿ ಗೆಲುವಿನ ಹಿಂದಿನ ಸೂತ್ರಧಾರಿಗಳಾಗಿದ್ದಾರೆ.

ಇದನ್ನೂ ಓದಿ: ರಿಂಕು ಸಿಂಗ್​ ಕಪಾಳಕ್ಕೆ ಬಾರಿಸಿದ ಕುಲ್ದೀಪ್ ಯಾದವ್​.. IPLನಲ್ಲಿ ಇದೆಂಥ ಅವ್ಯವಸ್ಥೆ.. VIDEO

publive-image

ತ್ರಿಮೂರ್ತಿಗಳ ಜೊತೆಯಾಟ..

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜಯದ ಓಟಕ್ಕೆ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವ್​ದತ್​ ಪಡಿಕ್ಕಲ್ ಜುಗಲ್​ಬಂದಿ ಮುಖ್ಯ ಕಾರಣವಾಗಿದೆ. ಈ ತ್ರಿವಳಿ ಆಟಗಾರರ ಜೊತೆಯಾಟವೇ ಆರ್​ಸಿಬಿಗೆ ಶ್ರೀರಕ್ಷೆಯಾಗಿದೆ. ಜೋಡೆತ್ತುಗಳ ಜೊತೆಯಾಟಗಳು ಆರ್​ಸಿಬಿ ತಂಡವನ್ನು ಗೆಲುವಿನ ದಡ ಸೇರಿಸ್ತಿವೆ.

2025ರಲ್ಲಿ RCB ಪರ ಗರಿಷ್ಠ ಜೊತೆಯಾಟ

ಆರ್​ಸಿಬಿ ಪರ ಅದ್ಭುತ ಜೊತೆಯಾಟಗಳನ್ನು ಆಡ್ತಿರುವ ಕೊಹ್ಲಿ, ಪಡಿಕ್ಕಲ್ 7 ಇನ್ನಿಂಗ್ಸ್​ಗಳಿಂದ 71.50 ಬ್ಯಾಟಿಂಗ್​ ಅವರೇಜ್​ನಲ್ಲಿ 429 ರನ್ ಸಿಡಿಸಿದ್ದಾರೆ. ಕೊಹ್ಲಿ - ಫಿಲ್ ಸಾಲ್ಟ್​ 9 ಇನ್ನಿಂಗ್ಸ್​ಗಳಿಂದ 41.77ರ ಬ್ಯಾಟಿಂಗ್ ಅವರೇಜ್​ನಲ್ಲಿ 376 ರನ್ ಕೊಳ್ಳೆ ಹೊಡೆದಿದ್ದಾರೆ. ಈ ಎರಡು ಜೊತೆಯಾಟಗಳು ಪ್ರಸಕ್ತ ಐಪಿಎಲ್​​ನ ಗರಿಷ್ಠ ರನ್​​​​​​​​​​​​​​​​​​​​​​​​​​​​​​ ಜೊತೆಯಾಟದಲ್ಲಿ 2 ಹಾಗೂ 3ನೇ ಸ್ಥಾನದಲ್ಲಿದೆ.

ಕಿಂಗ್​ ಕೊಹ್ಲಿ-ಫಿಲ್ ಸಾಲ್ಟ್​ ಅಬ್ಬರ

ಆರ್​ಸಿಬಿ ಪರ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್​ ಸಾಲಿಡ್ ಸ್ಟಾರ್ಟ್ ನೀಡ್ತಿದ್ದಾರೆ. ಪವರ್ ಪ್ಲೇನಲ್ಲಿ ಅಬ್ಬರಿಸ್ತಿರುವ ಈ ಜೋಡಿ, ಉತ್ತಮ ಅಡಿಪಾಯ ಹಾಕ್ತಿದೆ. ಮಿಡಲ್ ಓವರ್​ಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್​​​ ಗೆಲುವಿನತ್ತ ಕೊಡೊಯ್ಯುತ್ತಿದ್ದಾರೆ.

ಇದನ್ನೂ ಓದಿ: ಆರ್​ಸಿಬಿ ಅಭಿಮಾನಿಗಳಿಗೆ ಸಂತಸದ ಸುದ್ದಿ.. ತವರಿನಾಚೆ ಸತತವಾಗಿ ಗೆದ್ದವರಿಗೆ ಒಲಿದಿದೆ ಲಕ್..!

publive-image

ಕೊಹ್ಲಿ-ಸಾಲ್ಟ್​ ಬ್ಯಾಟಿಂಗ್

ಪವರ್​ ಪ್ಲೇನಲ್ಲಿ ಫಿಲ್ ಸಾಲ್ಟ್, 9 ಪಂದ್ಯಗಳಿಂದ 189ರ ಸ್ಟ್ರೈಕ್​ರೇಟ್​ನಲ್ಲಿ 212 ರನ್ ಚಚ್ಚಿದ್ದಾರೆ. ಕೊಹ್ಲಿ 10 ಪಂದ್ಯಗಳಿಂದ 146.51ರ ಸ್ಟ್ರೈಕ್​ರೇಟ್​ನಲ್ಲಿ 189 ರನ್ ಕಲೆ ಹಾಕಿದ್ದಾರೆ. ಪವರ್​ ಪ್ಲೇನಲ್ಲಿ ಸಾಲಿಡ್ ಇನ್ನಿಂಗ್ಸ್ ಕಟ್ಟುತ್ತಿರುವ ವಿರಾಟ್, ಮಿಡಲ್ ಓವರ್​ನಲ್ಲೂ ಪಡಿಕ್ಕಲ್​ ಜೊತೆ ಆಟವಾಡ್ತಿದ್ದಾರೆ.

ಮಿಡಲ್ ಓವರ್​ಗಳ ಕೊಹ್ಲಿ-ಪಡಿಕ್ಕಲ್

ವಿರಾಟ್​ ಕೊಹ್ಲಿ ಮಿಡಲ್ ಓವರ್​ಗಳಲ್ಲಿ 133.57ರ ಸ್ಟ್ರೈಕ್​ರೇಟ್​ನಲ್ಲಿ 232 ರನ್ ಗಳಿಸಿದ್ದಾರೆ. ಪಡಿಕ್ಕಲ್ 6 ಪಂದ್ಯಗಳಿಂದ 158ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​ನಲ್ಲಿ 151 ರನ್ ಗಳಿಸಿದ್ದಾರೆ. ಈ ತ್ರಿಮೂರ್ತಿಗಳು ಒಳ್ಳೆ ಸ್ಟಾರ್ಟ್​ ನೀಡೋದ್ರ ಜೊತೆಗೆ ಮಿಡಲ್​​ ಓವರ್​ನಲ್ಲಿ ಸ್ಕೋರ್​ ಹೆಚ್ಚಿಸ್ತಿದ್ದಾರೆ. ಇವ್ರ ಸಾಲಿಡ್​ ಆಟ ಬಳಿಕ ಬರೋ ಬ್ಯಾಟರ್ಸ್​ ಒತ್ತಡ ಕಡಿಮೆ ಮಾಡ್ತಿದೆ.

ಇವ್ರಿಂದ ಗುಡ್​ ಸ್ಟಾರ್ಟ್​ ಬರಲಿಲ್ಲ ಅಂದ್ರೆ ಆ ಮ್ಯಾಚ್​​ನಲ್ಲಿ ಉಳಿದ ಬ್ಯಾಟರ್ಸ್​ ಪರದಾಡ್ತಾರೆ. ಡೆಲ್ಲಿ ವಿರುದ್ಧ ಚಿನ್ನಸ್ವಾಮಿಯಲ್ಲಿ ನಡೆದ ಪಂದ್ಯ ಇದಕ್ಕೆ ಬೆಸ್ಟ್ ಎಕ್ಸಾಂಪಲ್​. ಹೀಗಾಗಿ ಸದ್ಯ ಗೆಲುವಿನ ಓಟ ನಡೆಸ್ತಿದ್ರೂ, ಮತ್ತಷ್ಟು ಜೊತೆಯಾಟಗಳು ಆಟಗಾರರಿಂದ ಬರಬೇಕಿದೆ. ಬಂದ್ರೆ ಆರ್​ಸಿಬಿ ಕಪ್ ಗೆಲ್ಲೋ ಕನಸು ನನಸಾಗುವುದು ಗ್ಯಾರಂಟಿ.

ಇದನ್ನೂ ಓದಿ: ಪುಲ್ವಾಮಾ ದಾಳಿ ನಂತರ ಇದೇ ಮೊದಲ ಬಾರಿಗೆ CCPA ಸಭೆ.. ಈ ಸಮಿತಿಯ ಮಹತ್ವ ಏನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment