/newsfirstlive-kannada/media/post_attachments/wp-content/uploads/2025/04/RAJAT.jpg)
ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಆರ್ಸಿಬಿ ಮತ್ತೊಂದು ಮುಖಭಂಗ ಎದುರಿಸಿದೆ. ತವರು ಮೈದಾನದಲ್ಲಿ ಸತತ ಮೂರನೇ ಬಾರಿಗೆ ಸೋಲುವ ಮೂಲಕ ಭಾರೀ ನಿರಾಸೆ ಮೂಡಿಸಿದೆ. ಎದುರಾಳಿ ಪಂಜಾಬ್ ಕಿಂಗ್ಸ್, ಆರ್ಸಿಬಿ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಪಂದ್ಯ ಸೋತ ಬಳಿಕ ಮಾತನಾಡಿರುವ ಕ್ಯಾಪ್ಟನ್ ರಜತ್ ಪಾಟೀದಾರ್.. ನಮ್ಮ ಬ್ಯಾಟಿಂಗ್ ವಿಭಾಗ ಫೇಲ್ ಆಯ್ತು. ಉತ್ತಮ ಸ್ಕೋರ್ ಮಾಡಬಹುದಿತ್ತು. ಪಾರ್ಟ್ನರ್ಶಿಪ್ ತುಂಬಾನೇ ಮುಖ್ಯ. ನಾವು ವಿಕೆಟ್ಗಳನ್ನು ಬೇಗ ಕಳೆದುಕೊಂಡೆವು. ನಮಗೆ ದೊಡ್ಡ ಪಾಠ ಆಗಿದೆ. ಪರಿಸ್ಥಿತಿಗಳಿಂದಾಗಿ (ಪಡ್ಡಿಕಲ್) ತಂಡದಲ್ಲಿ ಬದಲಾವಣೆ ಮಾಡಬೇಕಾಯಿತು. ವಿಕೆಟ್ ಅಷ್ಟೊಂದು ಕೆಟ್ಟದಾಗಿರಲಿಲ್ಲ.
ಇದನ್ನೂ ಓದಿ: ಆರ್ಸಿಬಿಗೆ ಮತ್ತೊಂದು ದೊಡ್ಡ ಮುಖಭಂಗ.. ತವರಿನಲ್ಲಿ ಹ್ಯಾಟ್ರಿಕ್ ಸೋಲು..!
ಅವರ ಬೌಲರ್‌ಗಳಿಗೆ ಸಹಾಯವಾಗಿದೆ. ಚೆನ್ನಾಗಿ ಆಡಿದ ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಬೇಕಿತ್ತು. ಗೆಲುವಿಗೆ ಬೇಕಾಗಿದ್ದ ಮೊತ್ತವನ್ನು ಗಳಿಸಬೇಕಿತ್ತು. ನಮ್ಮ ಬೌಲಿಂಗ್ ಘಟಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದು ನಮಗೆ ಪ್ಲಸ್. ಬ್ಯಾಟಿಂಗ್ ಘಟಕದಲ್ಲಿ ಆಗಿರುವ ಕೆಲವು ತಪ್ಪುಗಳನ್ನು ಸರಿಪಡಿಸಬಹುದು ಎಂದಿದ್ದಾರೆ.
ಸಂಜೆ ಮಳೆ ಸುರಿದ ಪರಿಣಾಮ, 14 ಓವರ್ಗಳಿಗೆ ಪಂದ್ಯ ಸೀಮಿತ ಮಾಡಲಾಗಿತ್ತು. ಟಾಸ್ ಸೋತು ಬ್ಯಾಟ್ ಮಾಡಿದ ರಜತ್ ಪಡೆ, 9 ವಿಕೆಟ್ ಕಳೆದುಕೊಂಡು 95 ರನ್ಗಳಿಸಿತ್ತು. ಟಿಮ್ ಡೆವೀಡ್ ಆರ್ಸಿಬಿ ಸ್ಕೋರ್ ಹೆಚ್ಚಿಸುವಲ್ಲಿ ಅಮೋಘ ಕೊಡುಗೆ ನೀಡಿದರು. 26 ಬಾಲ್ನಲ್ಲಿ ಮೂರು ಸಿಕ್ಸರ್, ಐದು ಬೌಂಡರಿ ಜೊತೆ 50 ರನ್ಗಳ ಕಾಣಿಕೆ ನೀಡಿದರು.
ಇದನ್ನೂ ಓದಿ: 6, 6, 6; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್.. RCB ಮಾನ ಉಳಿಸಿದ ಸ್ಫೋಟಕ ಬ್ಯಾಟರ್
96 ರನ್ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಇನ್ನೂ 11 ಎಸೆತ ಬಾಕಿ ಇರುವಂತೆಯೇ 5 ವಿಕೆಟ್‌ಗಳ ಭರ್ಜರಿ ಸಾಧಿಸಿದೆ. ಪಂಜಾಬ್ ಕಿಂಗ್ಸ್ ಪರ ವಧೇರಾ 19 ಬಾಲ್ನಲ್ಲಿ 33 ರನ್ಗಳಿಸಿದರು. ಆರ್ಸಿಬಿ ಪರ ಹೇಜಲ್ವುಡ್ ಅದ್ಭುತ ಬೌಲಿಂಗ್ ದಾಳಿ ನಡೆಸಿದರು. ಮೂರು ಓವರ್ನಲ್ಲಿ ಕೇವಲ 13 ರನ್ ನೀಡಿ ಮೂರು ವಿಕೆಟ್ ಪಡೆದರು. ಭುವಿ 26 ರನ್ ನೀಡಿ ಎರಡು ವಿಕೆಟ್ ಪಡೆದರೂ, ಗೆಲುವು ಆರ್ಸಿಬಿಗೆ ಸಿಗಲಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್