RCBಗೆ ಆರಂಭಿಕ ಬ್ಯಾಟಿಂಗ್​ ವಿಘ್ನ.. ಯಂಗ್​ ಬ್ಯಾಟರ್ ಬೆನ್ನಲ್ಲೇ ಕನ್ನಡಿಗ, ಕ್ಯಾಪ್ಟನ್​ ಬ್ಯಾಕ್​ ಟು ಬ್ಯಾಕ್​​ ಔಟ್​

author-image
Bheemappa
Updated On
RCBಗೆ ಆರಂಭಿಕ ಬ್ಯಾಟಿಂಗ್​ ವಿಘ್ನ.. ಯಂಗ್​ ಬ್ಯಾಟರ್ ಬೆನ್ನಲ್ಲೇ ಕನ್ನಡಿಗ, ಕ್ಯಾಪ್ಟನ್​ ಬ್ಯಾಕ್​ ಟು ಬ್ಯಾಕ್​​ ಔಟ್​
Advertisment
  • ಪಂದ್ಯದಲ್ಲಿ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಹೋಗಿರುವುದು ದುರಂತ
  • ದೆಹಲಿಯ ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯ
  • ಸಾಧಾರಣ ಮೊತ್ತದ ರನ್​ಗಳ ಟಾರ್ಗೆಟ್ ಮಾಡುತ್ತಿರುವ ಆರ್​ಸಿಬಿ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್​ನ ಪಂದ್ಯದಲ್ಲಿ ಆರ್​ಸಿಬಿ ಯುವ ಬ್ಯಾಟ್ಸ್​ಮನ್ ಕೇವಲ 12 ರನ್​ಗೆ ವಿಕೆಟ್ ಒಪ್ಪಿಸಿದ್ರೆ, ಕನ್ನಡಿಗ ದೇವದತ್ ಪಡಿಕ್ಕಲ್ ಡಕೌಟ್, ರಜತ್ ಪಾಟಿದಾರ್ ಔಟ್ ಆಗಿದ್ದಾರೆ.

ದೆಹಲಿಯಲ್ಲಿರುವ ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾ​ಪಿಟಲ್ಸ್ 20 ಓವರ್​ಗಳಲ್ಲಿ 8 ವಿಕೆಟ್​ಗೆ 163 ರನ್​ಗಳ ಗುರಿಯನ್ನು ನೀಡಿದೆ. ಅಕ್ಷರ್ ಪಟೇಲ್​ ನೇತೃತ್ವದ ಡೆಲ್ಲಿ ಟೀಮ್​, ಆರ್​ಸಿಬಿಗೆ ಸಾಧಾರಣ ಮೊತ್ತದ ಗುರಿಯನ್ನು ನೀಡಿದೆ. ಸದ್ಯ ಇದೀಗ ಬ್ಯಾಟಿಂಗ್ ಆರಂಭಿಸಿರುವ ಆರ್​​ಸಿಬಿ 26 ರನ್​ಗೆ ತನ್ನ ಪ್ರಮುಖ 3 ವಿಕೆಟ್​ಗಳನ್ನು ಕಳೆದುಕೊಂಡಿದೆ.

ಇದನ್ನೂ ಓದಿ:ಪಾಂಡ್ಯಗೆ ಅದೃಷ್ಟ ಕೈ ಹಿಡಿಯಿತಾ..? LSG ವಿರುದ್ಧ ಗೆಲ್ತಿದ್ದಂತೆ ಪಾಯಿಂಟ್​ ಟೇಬಲ್​ನಲ್ಲಿ ಮುಂಬೈ ಭಾರೀ ಜಿಗಿತ

publive-image

ವಿಸ್ಫೋಟಕ ಬ್ಯಾಟರ್​ ಫಿಲಿಪ್​ ಸಾಲ್ಟ್​ ಬದಲಿಗೆ ಆರ್​ಸಿಬಿ ಪರ ವಿರಾಟ್​ ಕೊಹ್ಲಿ ಜೊತೆ ಕ್ರೀಸ್​ಗೆ ಆಗಮಿಸಿದ್ದ ಜಾಕೋಬ್ ಬೆಥೆಲ್ 6 ಎಸೆತದಲ್ಲಿ 1 ಬೌಂಡರಿ, 1 ಸಿಕ್ಸರ್​ನಿಂದ 12 ರನ್​ ಗಳಿಸಿ ಆಡುತ್ತಿದ್ದರು. ಈ ವೇಳೆ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಸ್ಪಿನ್​ ಬೌಲಿಂಗ್​ನಲ್ಲಿ ಕರುಣ್​ ನಾಯರ್​ಗೆ ಕ್ಯಾಚ್ ಕೊಟ್ಟಿದ್ದಾರೆ. ಬೆಥೆಲ್​ ನಂತರ ಕ್ರೀಸ್​ಗೆ ಆಗಮಿಸಿದ್ದ ಕನ್ನಡಿಗ ದೇವದತ್ ಪಡಿಕ್ಕಲ್​ ಡಕೌಟ್ ಆಗಿದ್ದಾರೆ. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಪಡಿಕ್ಕಲ್ ಈ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದಾರೆ.

ಕಳೆದ ಪಂದ್ಯದಲ್ಲೂ ಬ್ಯಾಟಿಂಗ್​ನಲ್ಲಿ ವಿಫಲರಾಗಿದ್ದ ಕ್ಯಾಪ್ಟನ್ ರಜತ್ ಪಾಟಿದಾರ್ ಅವರು ಈ ಪಂದ್ಯದಲ್ಲೂ ತಂಡಕ್ಕೆ ಉತ್ತಮ ರನ್​ಗಳ ಕಾಣಿಕೆ ನೀಡುವಲ್ಲಿ ವಿಫಲರಾಗಿದ್ದಾರೆ. 6 ರನ್​ ಗಳಿಸಿ ಆಡುವಾಗ ರನೌಟ್​ಗೆ ಬಲಿಯಾಗಿದ್ದಾರೆ. ಕರುಣ್ ನಾಯರ್ ಎಸೆದ ಚೆಂಡು ವಿಕೆಟ್​ಗೆ ಬಿದ್ದಿದ್ದರಿಂದ ರಜತ್ ಕ್ರೀಸ್​ನಿಂದ ಹೊರ ನಡೆದರು. ಸದ್ಯ 26 ರನ್​ಗೆ 3 ವಿಕೆಟ್​ ಕಳೆದುಕೊಂಡಿರುವ ಆರ್​ಸಿಬಿ ಸಂಕಷ್ಟದಲ್ಲಿದೆ ಎಂದು ಹೇಳಬಹುದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment