/newsfirstlive-kannada/media/post_attachments/wp-content/uploads/2025/04/RCB_TEAM-3.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಐಪಿಎಲ್ ಟ್ರೋಫಿ ಗೆಲ್ಲುವ ಫೇವರಿಟ್ ತಂಡವಾಗಿದೆ. ಸತತ ಗೆಲುವುಗಳಿಂದ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿರುವ ಆರ್ಸಿಬಿಗೆ ಗುಡ್ನ್ಯೂಸ್ ಒಂದು ಸಿಕ್ಕಿದೆ. ಇಂಜುರಿಗೆ ಒಳಗಾಗಿದ್ದ ಸ್ಟಾರ್ ಪೇಸ್ ಬೌಲರ್ ಮತ್ತೆ ತಂಡಕ್ಕೆ ಮರಳುವುದು ಸಂತಸ ತಂದಿದೆ.
ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಆರ್ಸಿಬಿ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಆರ್ಸಿಬಿ ಏನಾದರೂ ವಿಜಯ ಪತಾಕೆ ಹಾರಿಸಿದರೆ ಪ್ಲೇ ಆಫ್ ಎಂಟ್ರಿ ಕನ್ಫರ್ಮ್ ಆಗಲಿದೆ. ಹೀಗಾಗಿ ತಂಡದಲ್ಲಿ ಬದಲಾವಣೆ ಮಾಡುವುದು ಸಹಜ. ಇದರ ಜೊತೆಗೆ ಆರ್ಸಿಬಿಗೆ ಸ್ಟಾರ್ ಪೇಸರ್ ಜೋಶ್ ಹ್ಯಾಜಲ್ವುಡ್ ಹಿಂದಿರುವ ಸಾಧ್ಯತೆ ದಟ್ಟವಾಗಿವೆ.
ಇದನ್ನೂ ಓದಿ:ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಮೇಲೆ ಡ್ರೋಣ್ ಅಟ್ಯಾಕ್.. ಬೆಚ್ಚಿ ಬಿದ್ದ ಪಾಕಿಸ್ತಾನಕ್ಕೆ ಪುಕಪುಕ!
ಜೋಶ್ ಹ್ಯಾಜಲ್ವುಡ್ ಅವರು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಫೋಟೋವೊಂದನ್ನು ಶೇರ್ ಮಾಡಿ, ಅದಕ್ಕೆ ಬ್ಯಾಕ್ ಟು ಗೇಮ್ ಎಂದು ಟ್ಯಾಗ್ ಲೈನ್ ಬರೆದಿದ್ದಾರೆ. ಸತತ ಇಂಜುರಿಯಿಂದ ಬಳಲುತ್ತಿದ್ದ ಆರ್ಸಿಬಿ ಟೀಮ್ಗೆ ಇದರಿಂದ ಆನೆ ಬಲ ಬಂದಂತೆ ಆಗಿದೆ. ಏಕೆಂದರೆ ಆರ್ಸಿಬಿ ತಂಡದಲ್ಲಿ ಅತ್ಯಂತ ಮುಖ್ಯ ಬೌಲರ್ ಜೋಶ್ ಹ್ಯಾಜಲ್ವುಡ್ ಆಗಿದ್ದು ಈಗಾಗಲೇ ಈ ಸೀಸನ್ನಲ್ಲಿ ಒಂದು ಬಾರಿ ಪರ್ಪಲ್ ಕ್ಯಾಪ್ ಟಚ್ ಮಾಡಿದ್ದಾರೆ.
ಭುಜದ ನೋವಿಗೆ ಒಳಗಾಗಿದ್ದ ಜೋಶ್ ಹ್ಯಾಜಲ್ವುಡ್, ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ವಿರುದ್ಧ ನಡೆದ ಪಂದ್ಯದಿಂದ ಹೊರಗುಳಿದಿದ್ದರು. ಸದ್ಯ ಗಾಯದಿಂದ ಚೇತರಿಸಿಕೊಂಡಿರುವ ಸ್ಟಾರ್ ಪೇಸರ್ ತಂಡಕ್ಕೆ ಹಿಂದಿರುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಇನ್ನು ಫಿಲ್ ಸಾಲ್ಟ್ ಕೂಡ ಹಿಂದಿರುಗುವ ಸಾಧ್ಯತೆ ಇದೆ ಎನ್ನಲಾಗಿದ್ದು ಆದರೆ ಈ ಬಗ್ಗೆ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ