ಮೂವರು ಬಿಗ್​ ಸ್ಟಾರ್​ ಮೇಲೆ RCB ಟಾರ್ಗೆಟ್.. ಇಲ್ಲದಿದ್ರೆ ಪಂಜಾಬ್ ವಿರುದ್ಧ ಗೆಲುವು ಕಷ್ಟ..!

author-image
Ganesh
Updated On
ಅಯ್ಯರ್ ಪ್ಲಾನ್ ಉಲ್ಟಾ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್.. RCB, GTಗೆ ಇನ್ನೊಂದು ಚಾನ್ಸ್..!
Advertisment
  • ತವರಿನಲ್ಲಿ 3ನೇ ಪಂದ್ಯ.. ಮೂವರೇ RCB ಟಾರ್ಗೆಟ್
  • ಆ ಮೂವರು ಬ್ಯಾಟರ್​ಗಳ ಮೇಲೆ ಆರ್​ಸಿಬಿ ಕಣ್ಣೇಕೆ?
  • ಈ ಮೂವರನ್ನ ಕಟ್ಟಿ ಹಾಕಿದ್ರೆ ಆರ್​ಸಿಬಿ ಗೆಲುವು ಫಿಕ್ಸ್​!

ರಾಜಸ್ಥಾನ್​ ವಿರುದ್ಧ ರಾಯಲ್​ ಜಯ ಸಾಧಿಸಿದ ಆರ್​​ಸಿಬಿ ಇದೀಗ ಪಂಜಾಬ್​ಗೆ ಪಂಚ್​ ಕೊಡೋಕೆ ರೆಡಿಯಾಗಿದೆ. ಹೋಮ್​​ಗ್ರೌಂಡ್​ನಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿರೋ ಆರ್​​ಸಿಬಿ, ಪಂಜಾಬ್​ ಕಿಂಗ್​ ಮಣಿಸುವ ಕನಸಿನಲ್ಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​​ಸಿಬಿ ಗೆದ್ದು ಬೀಗಬೇಕಂದ್ರೆ ಪಂಜಾಬ್​ ಪವರ್​​​ನ ಕಟ್​ ಮಾಡಬೇಕಿದೆ.

ಪ್ರಿಯಾಂಶ್ ಆರ್ಯ

ಆರಂಭಿಕನಾಗಿ ಕಣಕ್ಕಿಳಿಯೋ ಈ ಯಂಗ್​​ ಲೆಫ್ಟಿ ಬ್ಯಾಟರ್ ಪ್ರಿಯಾಂಶ್​, ಮೊದಲ ಬಾಲ್​ನಿಂದಲೇ ಬೌಲರ್​ಗಳ ಮೇಲೆ ದಂಡಯಾತ್ರೆ ನಡೆಸ್ತಾರೆ. ಪಂಜಾಬ್ ಸಕ್ಸಸ್​ ಸಿಕ್ರೇಟ್​ ಆಗಿರುವ ಈ ಡೆಲ್ಲಿ ಬಾಯ್, 6 ಪಂದ್ಯಗಳಿಂದ 216ರ ಬ್ಯಾಟಿಂಗ್ ಸ್ಟ್ರೈಕ್​​ರೇಟ್​ನಲ್ಲಿ 216 ರನ್ ಸಿಡಿಸಿದ್ದಾರೆ. ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸೋ ಈತನಿಗೆ, ಚಿನ್ನಸ್ವಾಮಿಯ ಚಿಕ್ಕ ಗ್ರೌಂಡ್​ ನಿಜಕ್ಕೂ ಹೇಳಿ ಮಾಡಿಸಿದಂತಿದೆ. ಅಕಸ್ಮಾತ್ ಇಲ್ಲಿ ಪ್ರಿಯಾಂಶ್ ಸಿಡಿದು ನಿಂತ್ರೆ, ಆರ್​ಸಿಬಿಗೆ ಸಂಕಷ್ಟ ತಪ್ಪಿದಿಲ್ಲ. ಹೀಗಾಗಿ ಈತನಿಗೆ ಆರಂಭದಲ್ಲೇ ಪೆವಿಲಿಯನ್ ಹಾದಿ ತೋರಿಬೇಕಿದೆ. ಈ ನಿಟ್ಟಿನಲ್ಲಿ ಗೇಮ್​​ಪ್ಲಾನ್​ ಮಾಡಬೇಕಿದೆ.

ಇದನ್ನೂ ಓದಿ: ರಾಜಸ್ಥಾನ್​ ತಂಡಕ್ಕೆ ಬಿಗ್​ ಶಾಕ್​; ಬ್ಯಾಟಿಂಗ್ ಮಾಡುವಾಗಲೇ ಪಿಚ್​​ನಿಂದ ಹೊರ ನಡೆದ ಕ್ಯಾಪ್ಟನ್​ ಸಂಜು

ಪ್ರಭುಸಿಮ್ರನ್ ಸಿಂಗ್..!

ಪ್ರಭು ಸಿಮ್ರನ್ ಸಿಂಗ್ ಪವರ್​ ಪ್ಲೇನಲ್ಲಿ ಡೇಂಜರಸ್ ಬ್ಯಾಟರ್​. ಪೀಲ್ಡರ್ಸ್​​ 30 ಯಾರ್ಡ್​ ಸರ್ಕಲ್​ ಒಳಗಿದ್ದಾಗ ನಿರಾಯಾಸವಾಗಿ ಬೌಂಡರಿ ಬಾರಿಸೋ ಚಾಣಾಕ್ಷ ಈತ. ಪ್ರಸಕ್ತ ಟೂರ್ನಿಯಲ್ಲಿ 166ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿರುವ ಪ್ರಭುಸಿಮ್ರನ್, ಕ್ರೀಸ್​ ಕಚ್ಚಿ ನಿಂತರೆ ಬೌಲರ್​ಗಳ ಮೇಲೆ ಸವಾರಿ ಮಾಡ್ತಾರೆ. ಆರ್​​ಸಿಬಿ ಬೌಲರ್​​ಗಳು ಆರಂಭಿಕ ಓವರ್​ಗಳಲ್ಲೇ ಈತನ ವಿಕೆಟ್ ಬೇಟೆಯಾಡಿ ಒತ್ತಡ ಕ್ರಿಯೇಟ್​ ಮಾಡಬೇಕಿದೆ.

ಶ್ರೇಯಸ್ ಅಯ್ಯರ್

ಕ್ಯಾಪ್ಟನ್​​ ಶ್ರೇಯಸ್ ಅಯ್ಯರ್ ಪಂಜಾಬ್​ ಕಿಂಗ್ಸ್​ನ ಮಿಡಲ್​​ ಆರ್ಡರ್​​ ಪವರ್​. ಓಪನರ್ಸ್ ಫೇಲಾದ್ರೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯೋ ಶ್ರೇಯಸ್​ ತಂಡಕ್ಕೆ ಆಸರೆಯಾಗ್ತಿದ್ದಾರೆ. ಕನ್ಸಿಸ್ಟೆಂಟ್​ ಆಗಿ ರನ್​​ಗಳಿಸ್ತಿದ್ದಾರೆ. 204ರ ಸ್ಟ್ರೈಕ್​ರೇಟ್​ನಲ್ಲಿ 250 ರನ್ ಚಚ್ಚಿರುವ ಶ್ರೇಯಸ್ ಅಯ್ಯರ್​ಗೆ ಸ್ಪಿನ್​​​​​​​​​​​​, ಫಾಸ್ಟ್​ ಎರಡೂ ಲೆಕ್ಕಕ್ಕಿಲ್ಲ. ಸಾಲಿಡ್ ಫಾರ್ಮ್​ನಲ್ಲಿರುವ ಶ್ರೇಯಸ್​ ಓಟಕ್ಕೆ ಬ್ರೇಕ್ ಹಾಕಿದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅರ್ಧ ಪಂದ್ಯ ಗೆದ್ದಂತೆಯೇ.

ಇದನ್ನೂ ಓದಿ: 4 ವರ್ಷಗಳ ಬಳಿಕ ಐಪಿಎಲ್​​ನಲ್ಲಿ ಸೂಪರ್ ಓವರ್.. ಕಾದಾಟದ ರೋಚಕ ಕ್ಷಣಗಳು ಹೇಗಿದ್ದವು..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment