ಇಂದು IPL ಮೆಗಾ ಹರಾಜು; ಮುಂಬೈನ ಈ ಆಟಗಾರರೇ ಆರ್​​ಸಿಬಿ ಟಾರ್ಗೆಟ್​​

author-image
Ganesh Nachikethu
Updated On
ಇಂದು IPL ಮೆಗಾ ಹರಾಜು; ಮುಂಬೈನ ಈ ಆಟಗಾರರೇ ಆರ್​​ಸಿಬಿ ಟಾರ್ಗೆಟ್​​
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​
  • ಮೆಗಾ ಆಕ್ಷನ್​ನಲ್ಲಿ ಸ್ಟಾರ್​ ಆಟಗಾರರ ಖರೀದಿಗೆ ಪ್ಲಾನ್​​..!
  • ಮುಂಬೈ ಆಟಗಾರರ ಮೇಲೆ ಆರ್​​ಸಿಬಿ ಟೀಮ್​​ ಹದ್ದಿನ ಕಣ್ಣು

2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಮತ್ತು ನಾಳೆ ಮೆಗಾ ಹರಾಜು ನಡೆಯುತ್ತಿದ್ದು, ಎಲ್ಲರ ಚಿತ್ತ ಬಿಡ್‌ ಅಂಗಳದತ್ತ ನೆಟ್ಟಿದೆ. 2 ವಾರಗಳ ಹಿಂದೆಯೇ ಅಕ್ಟೋಬರ್​ 31ನೇ ತಾರೀಕು ಬಿಸಿಸಿಐ ಸೂಚನೆಯಂತೆ ಐಪಿಎಲ್​ ತಂಡಗಳ ಮಾಲೀಕರು ರೀಟೈನ್​ ಲಿಸ್ಟ್​ ಸಲ್ಲಿಕೆ ಮಾಡಿವೆ.

ಇನ್ನು, ಬಿಸಿಸಿಐ ಕೂಡ ಹರಾಜಿಗೆ ಬಂದಿರೋ ಆಟಗಾರರ ಹೆಸರು ಶಾರ್ಟ್​ ಲಿಸ್ಟ್​ ಮಾಡಿ ಐಪಿಎಲ್​ ತಂಡಗಳ ಮಾಲೀಕರಿಗೆ ಕಳಿಸಲಿದೆ. ಒಟ್ಟು 1500ಕ್ಕೂ ಹೆಚ್ಚು ಆಟಗಾರರು ಐಪಿಎಲ್ ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಕೇವಲ ಭಾರತೀಯರು ಮಾತ್ರವಲ್ಲ ವಿದೇಶಿ ಆಟಗಾರರು ಕೂಡ ಇದ್ದಾರೆ.

ಹೇಗಾದ್ರೂ ಮಾಡಿ ಮುಂದಿನ ಸೀಸನ್​​ನಲ್ಲಿ ಕಪ್​ ಗೆಲ್ಲಲೇಬೇಕು ಎಂದು ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಜಿದ್ದಿಗೆ ಬಿದ್ದಿದೆ. ಹಾಗಾಗಿ ಬಲಿಷ್ಠ ತಂಡವನ್ನು ಕಟ್ಟಲು ಆರ್​​ಸಿಬಿ ಮುಂದಾಗಿದೆ. ಹಾಗಾಗಿ ಹರಾಜಿನಲ್ಲಿ ಆರ್‌ಸಿಬಿ ಸ್ಟಾರ್ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ.

ಮುಂಬೈ ಆಟಗಾರರಿಗೆ ಮಣೆ

ಆರ್‌ಸಿಬಿ ಈ ಬಾರಿ ಮುಂಬೈ ತಂಡದ ಮಾಜಿ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಮುಂಬೈ ಇಂಡಿಯನ್ಸ್​ ಕೈ ಬಿಟ್ಟ ಆಟಗಾರರನ್ನು ಖರೀದಿ ಮಾಡೋದು ಪಕ್ಕಾ ಆಗಿದೆ.

publive-image

ಇಶಾನ್‌ ಕಿಶನ್‌

ಆರ್‌ಸಿಬಿ ತಂಡಕ್ಕೆ ವಿಕೆಟ್​ ಕೀಪರ್​​ ಟಾಪ್​ ಆರ್ಡರ್​​ ಎಡಗೈ ಬ್ಯಾಟರ್​ ಬೇಕಾಗಿದ್ದಾರೆ. ಟಾಪ್‌ ಆರ್ಡರ್‌ನಲ್ಲಿ ಎದುರಾಳಿಗಳನ್ನು ಕಾಡಬಲ್ಲ ಬ್ಯಾಟರ್‌ ಇಶಾನ್​ ಕಿಶನ್​ ಆಗಿದ್ದು, ಇವರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಫಾಫ್​​ ಅವರನ್ನು ಕೈ ಬಿಟ್ಟ ಆರ್​​ಸಿಬಿಗೆ ಕೊಹ್ಲಿಗೆ ಸಾಥ್​ ನೀಡಬಲ್ಲ ಬ್ಯಾಟರ್​ ಬೇಕಿದೆ. ಹೀಗಾಗಿ ಪವರ್​ ಹಿಟ್ಟರ್​ ಆಗಿರೋ ಇಶಾನ್​ ಅವರನ್ನು ಆರ್​​ಸಿಬಿ ಖರೀದಿ ಮಾಡಲಿದೆ.

ಟೀಮ್ ಡೇವಿಡ್‌

ಬೆಂಗಳೂರು ತಂಡ ಬಿಗ್ ಹಿಟ್ಟರ್​​ಗಳಿಗೆ ಮಣೆ ಹಾಕುತ್ತಲೆ ಬಂದಿದೆ. ಮೆಗಾ ಆಕ್ಷನ್​ನಲ್ಲಿ ಆರ್​​ಸಿಬಿ ಟಿಮ್​​ ಡೇವಿಡ್​ಗೆ ಟಾರ್ಗೆಟ್​ ಮಾಡುವ ಸಾಧ್ಯತೆ ಇದೆ. ಇವರ ಬ್ಯಾಟಿಂಗ್​ ಸ್ಟ್ರೈಕ್ ರೇಟ್‌ ಬರೋಬ್ಬರಿ 170. ಪವರ್​ ಹಿಟ್ಟಿಂಗ್​ಗೆ ಹೆಸರು ಮಾಡಿರೋ ಮಿಡ್ಲ್‌ ಆರ್ಡರ್‌ನಲ್ಲಿ ಫಿನಿಷರ್‌ ಆಗಬಹುದು.

ಡೆವಾಲ್ಡ್ ಬ್ರೆವಿಸ್

ದಕ್ಷಿಣ ಆಫ್ರಿಕಾ ಮೂಲದ ಬೇಬಿ ಎಬಿಡಿ ಎಂದು ಹೆಸರು ವಾಸಿಯಾಗಿರೋ ಡೆವಾಲ್ಡ್ ಬ್ರೆವಿಸ್ ಮೇಲೆ ಆರ್​​ಸಿಬಿ ಕಣ್ಣಿಟ್ಟಿದೆ. ಮೊದಲು ಎಬಿಡಿ ವಿಲಿಯರ್ಸ್‌ ತಂಡದ ಮಿಡ್ಲ್ ಆರ್ಡರ್‌ಗೆ ಆಧಾರವಾಗಿದ್ರು. ಈಗ ಬೇಬಿ ಎಬಿಡಿಗೂ ಮಣೆ ಹಾಕಿದ್ರೆ, ಆರ್​​ಸಿಬಿಗೆ ಸ್ಫೋಟಕ ಬ್ಯಾಟರ್​​ ಆಧಾರವಾಗಲಿದ್ದಾರೆ. ಮುಂಬೈ ಕೈ ಬಿಟ್ಟ ಡೆವಾಲ್ಡ್ ಬ್ರೆವಿಸ್ ಅವರಿಗೆ ಆರ್‌ಸಿಬಿ ಹರಾಜಿನಲ್ಲಿ ಹಣದ ಹೊಳೆಯನ್ನು ಹರಿಸಬಹುದು.

ಇದನ್ನೂ ಓದಿ: ಸ್ಟಾರ್​ ಆಟಗಾರನಿಗೆ ಆರ್​​ಸಿಬಿಯಿಂದ ಕ್ಯಾಪ್ಟನ್ಸಿ ಆಫರ್​​​; ಸ್ಫೋಟಕ ಬ್ಯಾಟರ್​​ಗೆ ಮಣೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment