/newsfirstlive-kannada/media/post_attachments/wp-content/uploads/2024/08/RCB_TEAM-3.jpg)
ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​ ಆರಂಭಕ್ಕೆ ಇನ್ನೇನು ಮೂರು ತಿಂಗಳು ಮಾತ್ರ ಬಾಕಿ ಇದೆ. ಇದೇ ತಿಂಗಳು 23 ಮತ್ತು 24ನೇ ತಾರೀಕು ಮೆಗಾ ಹರಾಜು ನಡೆಯಲಿದ್ದು, ಎಲ್ಲರ ಚಿತ್ತ ಬಿಡ್ ಅಂಗಳದತ್ತ ನೆಟ್ಟಿದೆ. 2 ವಾರಗಳ ಹಿಂದೆಯೇ ಅಕ್ಟೋಬರ್​ 31ನೇ ತಾರೀಕು ಬಿಸಿಸಿಐ ಸೂಚನೆಯಂತೆ ಐಪಿಎಲ್​ ತಂಡಗಳ ಮಾಲೀಕರು ರೀಟೈನ್​ ಲಿಸ್ಟ್​ ಸಲ್ಲಿಕೆ ಮಾಡಿವೆ.
ಇನ್ನು, ಬಿಸಿಸಿಐ ಕೂಡ ಹರಾಜಿಗೆ ಬಂದಿರೋ ಆಟಗಾರರ ಹೆಸರು ಶಾರ್ಟ್​ ಲಿಸ್ಟ್​ ಮಾಡಿ ಐಪಿಎಲ್​ ತಂಡಗಳ ಮಾಲೀಕರಿಗೆ ಕಳಿಸಲಿದೆ. ಒಟ್ಟು 1500ಕ್ಕೂ ಹೆಚ್ಚು ಆಟಗಾರರು ಐಪಿಎಲ್ ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಈಗ 1574 ಆಟಗಾರರ ಆರಂಭಿಕ ಪಟ್ಟಿಯನ್ನು 574ಕ್ಕೆ ಇಳಿಸಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಪೈಕಿ 366 ಭಾರತೀಯರು ಮತ್ತು 208 ವಿದೇಶಿ ಕ್ರಿಕೆಟಿಗರು ಇದ್ದಾರೆ.
ಹೇಗಾದ್ರೂ ಮಾಡಿ ಮುಂದಿನ ಸೀಸನ್​​ನಲ್ಲಿ ಕಪ್​ ಗೆಲ್ಲಲೇಬೇಕು ಎಂದು ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಜಿದ್ದಿಗೆ ಬಿದ್ದಿದೆ. ಹಾಗಾಗಿ ಬಲಿಷ್ಠ ತಂಡವನ್ನು ಕಟ್ಟಲು ಆರ್​​ಸಿಬಿ ಮುಂದಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರೋ ಹರಾಜಿನಲ್ಲಿ ಆರ್‌ಸಿಬಿ ಸ್ಟಾರ್ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ.
ಡೆವಾಲ್ಡ್ ಬ್ರೆವಿಸ್ ಮೇಲೆ ಹದ್ದಿನ ಕಣ್ಣು
ದಕ್ಷಿಣ ಆಫ್ರಿಕಾ ಮೂಲದ ಬೇಬಿ ಎಬಿಡಿ ಎಂದು ಹೆಸರು ವಾಸಿಯಾಗಿರೋ ಡೆವಾಲ್ಡ್ ಬ್ರೆವಿಸ್ ಮೇಲೆ ಆರ್​​ಸಿಬಿ ಕಣ್ಣಿಟ್ಟಿದೆ. ಮೊದಲು ಎಬಿಡಿ ವಿಲಿಯರ್ಸ್ ತಂಡದ ಮಿಡ್ಲ್ ಆರ್ಡರ್‌ಗೆ ಆಧಾರವಾಗಿದ್ರು. ಈಗ ಬೇಬಿ ಎಬಿಡಿಗೂ ಮಣೆ ಹಾಕಿದ್ರೆ, ಆರ್​​ಸಿಬಿಗೆ ಸ್ಫೋಟಕ ಬ್ಯಾಟರ್​​ ಆಧಾರವಾಗಲಿದ್ದಾರೆ. ಮುಂಬೈ ಕೈ ಬಿಟ್ಟ ಡೆವಾಲ್ಡ್ ಬ್ರೆವಿಸ್ ಅವರಿಗೆ ಆರ್‌ಸಿಬಿ ಹರಾಜಿನಲ್ಲಿ ಹಣದ ಹೊಳೆಯನ್ನು ಹರಿಸಬಹುದು.
ಮೂವರಿಗೆ ಆರ್​​ಸಿಬಿ ಮಣೆ
ಈಗಾಗಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ರೀಟೈನ್​ ಲಿಸ್ಟ್​​ ರಿಲೀಸ್​ ಮಾಡಿದೆ. ಆರ್​​​ಸಿಬಿ ಟೀಮ್​​​ ಮೊದಲು ರೀಟೈನ್​ ಮಾಡಿಕೊಂಡಿದ್ದು ವಿರಾಟ್​​ ಕೊಹ್ಲಿ. 2ನೇ ಆಯ್ಕೆ ರಜತ್​ ಪಾಟಿದಾರ್​​ ಮತ್ತು 3ನೇ ಆಯ್ಕೆಯಾಗಿ ಯಶ್​ ದಯಾಳ್​​ ಅವರನ್ನು ಉಳಿಸಿಕೊಂಡಿದೆ.
ಆರ್​​ಸಿಬಿ ತಂಡ ವಿರಾಟ್​ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್​ ಪಾಟಿದಾರ್​ ಅವರಿಗೆ 11 ಕೋಟಿ ಮತ್ತು ಯಶ್​ ದಯಾಳ್​ ಅವರಿಗೆ 5 ಕೋಟಿ ನೀಡಿ ರೀಟೈನ್​ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್​​ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us