/newsfirstlive-kannada/media/post_attachments/wp-content/uploads/2025/05/josh_hazlewood_RCB.jpg)
IPL ಸೀಸನ್ 18 ಮತ್ತೆ ಆರಂಭವಾಗುವ ಮುಹೂರ್ತ ಏನೋ ಫಿಕ್ಸ್ ಆಯ್ದು. ಇದೇ ಮೇ 17 ಅಂದ್ರೆ ಶನಿವಾರದಿಂದ ಐಪಿಎಲ್ ಚುಟುಕು ಕದನ ಮತ್ತೆ ಶುರುವಾಗುತ್ತಿದೆ. ಮೊದಲ ಪಂದ್ಯದಲ್ಲೇ ಬೆಂಗಳೂರು ರಾಯಲ್ ಚಾಲೆಂಜರ್ಸ್‌ಗೆ ಕೋಲ್ಕತ್ತಾ ನೈಟ್ ರೈಟರ್ಸ್ ಮುಖಾಮುಖಿಯಾಗುತ್ತಿದೆ.
ಐಪಿಎಲ್ ಪುನಾರಂಭಕ್ಕೆ BCCI ಗ್ರೀನ್ ಸಿಗ್ನಲ್ ಕೊಟ್ಟಿದೆ. ಈಗ ಅಂಕಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿರುವ ಐಪಿಎಲ್ ತಂಡಗಳು ತಮ್ಮ ಸಿದ್ಧತೆ ಆರಂಭಿಸಿದ್ದಾರೆ. ಭಾರತ, ಪಾಕ್ ಸಂಘರ್ಷದ ವೇಳೆ ಐಪಿಎಲ್ ಫ್ರಾಂಚೈಸಿಗಳಿಗೆ ಆಟಗಾರರ ಭದ್ರತೆ ಬಹಳ ಮುಖ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಕೊಟ್ಟ ಮಾರ್ಗಸೂಚಿಯನ್ನ ಅನುಸರಿಸಿದ್ದರು.
ಭಾರತ, ಪಾಕ್ ಕದನ ವಿರಾಮದ ಬಳಿಕ ಐಪಿಎಲ್ ಸೀಸನ್ 18ರ ಅಖಾಡಕ್ಕೆ ವೇದಿಕೆ ಸಜ್ಜಾಗುತ್ತಿದೆ. ಆದರೆ ಗಡಿ ಸಂಘರ್ಷದ ವೇಳೆ ವಿದೇಶಿ ಆಟಗಾರರನ್ನು ಮರಳಿ ಕರೆತರುವುದು BCCI ಹಾಗೂ ಐಪಿಎಲ್ ಫ್ರಾಂಚೈಸಿಗಳಿಗೆ ದೊಡ್ಡ ಸವಾಲಾಗಿದೆ. ಸಂಘರ್ಷದ ಮಧ್ಯೆ ತವರು ಸೇರಿಕೊಂಡಿರುವ ವಿದೇಶಿ ಆಟಗಾರರು ಮತ್ತೆ ಭಾರತಕ್ಕೆ ಮರಳಲು ಹಿಂದೇಟು ಹಾಕುತ್ತಿದ್ದಾರೆ.
ಐಪಿಎಲ್ ಮತ್ತೆ ಆರಂಭಿಸುವ ಮುನ್ನ ವಿದೇಶಿ ಆಟಗಾರರು ಮತ್ತೆ ತಂಡವನ್ನು ಸೇರಿಕೊಳ್ಳುವುದು ಅನುಮಾನವಾಗಿದೆ. ಆಸ್ಟ್ರೇಲಿಯಾ ಕ್ರಿಕೆಟ್, ಬಿಸಿಸಿಐಗೆ ಈ ಬಗ್ಗೆ ಒಂದು ಸಂದೇಶವನ್ನು ರವಾನಿಸಿದೆ. ಆಸ್ಟ್ರೇಲಿಯಾ ಆಟಗಾರರು ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ಪಾಲ್ಗೊಳ್ಳುವುದು ಅವರ ವೈಯಕ್ತಿಕ ನಿರ್ಧಾರ. ಆಟಗಾರರ ತೀರ್ಮಾನವನ್ನು ನಾವು ಬೆಂಬಲಿಸುತ್ತೇವೆ ಎಂದು ಹೇಳುವ ಮೂಲಕ ಕೈ ತೊಳೆದುಕೊಂಡಿದೆ.
ಇದನ್ನೂ ಓದಿ: IPL ಅಭಿಮಾನಿಗಳಿಗೆ ಗುಡ್ ನ್ಯೂಸ್.. ಹೊಸ ವೇಳಾಪಟ್ಟಿ ಬಿಡುಗಡೆ; RCB ಪಂದ್ಯ ಯಾವಾಗ?
ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಮತ್ತೆ ಭಾರತಕ್ಕೆ ಬರುವುದು ಅನುಮಾನವಾಗಿದೆ. ಜೋಶ್ ಹ್ಯಾಜಲ್‌ವುಡ್ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಉತ್ತಮ ಪ್ರದರ್ಶನ ತೋರುತ್ತಿದ್ದರು. ಪ್ಲೇ ಆಫ್ ಹಂತದಲ್ಲಿರುವಾಗ ಸ್ಟಾರ್ ಪ್ಲೇಯರ್ ಕೈ ಕೊಟ್ರೆ ತಂಡಕ್ಕೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಇನ್ನು ಮಿಚೆಲ್ ಸ್ಟಾರ್ಕ್ ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದು ಶಾಕ್ ನೀಡಲು ಮುಂದಾಗಿದ್ದಾರೆ.
ಐಪಿಎಲ್ 2025 ಮೊದಲು ನಿಗದಿಯಾದಂತೆ ಮೇ 25ಕ್ಕೆ ಅಂತ್ಯವಾಗಬೇಕಿತ್ತು. ಆದರೆ ಹೊಸ ವೇಳಾಪಟ್ಟಿಯಲ್ಲಿ ಜೂನ್ 03ಕ್ಕೆ ಫೈನಲ್ ಪಂದ್ಯ ನಿಗದಿಯಾಗಿದೆ. ದಿಢೀರ್ ಐಪಿಎಲ್ ಪಂದ್ಯಗಳ ಮುಂದೂಡಿಕೆಯಿಂದಾಗಿ ಹಲವು ವಿದೇಶಿ ಆಟಗಾರರು ಮತ್ತೆ ಭಾರತಕ್ಕೆ ಬರಬೇಕೋ, ಬೇಡವೋ ಅನ್ನೋ ಗೊಂದಲದಲ್ಲಿದ್ದಾರೆ.
ಜೋಶ್ ಹ್ಯಾಜಲ್‌ವುಡ್ ಅವರು ಮತ್ತೆ ಆರ್‌ಸಿಬಿ ತಂಡಕ್ಕೆ ಬರುವುದು ಬಹುತೇಕ ಅನುಮಾನವಾಗಿದೆ. ಉಳಿದ ವಿದೇಶಿ ಆಟಗಾರರಲ್ಲಿ ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚ್ ಸ್ಟಾರ್ಕ್ ತಮ್ಮ ನಿರ್ಧಾರವನ್ನು ಶೀಘ್ರವೇ ಪ್ರಕಟ ಮಾಡಲಿದ್ದಾರೆ. ಒಂದು ವೇಳೆ ಆಸ್ಟ್ರೇಲಿಯಾ ಆಟಗಾರರು ಭಾರತಕ್ಕೆ ಮರಳದಿದ್ದರೆ ಐಪಿಎಲ್ ತಂಡಗಳಲ್ಲಿ ಮಹತ್ವದ ಬದಲಾವಣೆ ಆಗುವುದು ಖಚಿತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ