/newsfirstlive-kannada/media/post_attachments/wp-content/uploads/2024/11/Bhuveshwar.jpg)
2ನೇ ದಿನದ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಇಂಡಿಯಾದ ಸ್ಟಾರ್ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಖರೀದಿ ಮಾಡಿದೆ. ಬರೋಬ್ಬರಿ 10.75 ಕೋಟಿಗೆ ಭುವನೇಶ್ವರ್ ಕುಮಾರ್ ಆರ್ಸಿಬಿ ತಂಡದ ಪಾಲಾದ್ರು.
ಭುವನೇಶ್ವರ್ ಅವರಿಗಾಗಿ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಧ್ಯೆ ಕೊನೆಯವರೆಗೂ ಬಿಡ್ ನಡೆಯಿತು. ಕೊನೆಗೆ ಆರ್ಸಿಬಿ 2 ಕೋಟಿ ಮೂಲ ಬೆಲೆಯಿಂದ ನೇರ 10.75 ಕೋಟಿ ನೀಡಿ ಖರೀದಿ ಮಾಡಿದೆ.
ಪವರ್‌ಪ್ಲೇಯಲ್ಲಿ ಉತ್ತಮ ಪ್ರದರ್ಶನ ನೀಡುವ ಕೆಲವೇ ಕೆಲವು ಭಾರತೀಯ ಸೀಮ್ ಮತ್ತು ಸ್ವಿಂಗ್ ಬೌಲರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಒಬ್ಬರು. 10 ಕೋಟಿಗಿಂತ ಕಡಿಮೆ ಬೆಲೆಗೆ ಅವರನ್ನು ಖರೀದಿ ಮಾಡಬಹುದು ಎನ್ನಲಾಗಿತ್ತು. ಆದರೆ, ಅನುಭವದ ಆಧಾರದ ಮೇಲೆ ಭುವನೇಶ್ವರ್ ಕುಮಾರ್ ಅವರನ್ನು 10 ಕೋಟಿಗೂ ಹೆಚ್ಚು ನೀಡಿ ಆರ್ಸಿಬಿ ಖರೀದಿಸಿದೆ ಎಂಬುದು ವಿಶೇಷ.
ಭುವನೇಶ್ವರ್ ಐಪಿಎಲ್ ಸಾಧನೆ
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭುವನೇಶ್ವರ್ ಕುಮಾರ್ ಇದುವರೆಗೂ ಸುಮಾರು 176 ಪಂದ್ಯ ಆಡಿದ್ದಾರೆ. ಸುಮಾರು 181 ವಿಕೆಟ್ ತೆಗೆದಿದ್ದು, ಇವರನ್ನು ಇತ್ತೀಚೆಗಷ್ಟೇ ಸನ್ರೈಸರ್ಸ್ ಹೈದರಾಬಾದ್ ರಿಲೀಸ್ ಮಾಡಿತ್ತು. ಈಗ ಇವರು ಆರ್ಸಿಬಿ ತಂಡ ಸೇರಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್