ಮಾಕ್ ಆ್ಯಕ್ಷನ್‌ನಲ್ಲಿ ಬಂಪರ್‌: 10.75 ಕೋಟಿ ಕೊಟ್ಟು ಇಶಾನ್​​ ಕಿಶನ್​ ಖರೀದಿಸಿದ ಆರ್​​ಸಿಬಿ

author-image
Ganesh Nachikethu
Updated On
ಮಾಕ್ ಆ್ಯಕ್ಷನ್‌ನಲ್ಲಿ ಬಂಪರ್‌: 10.75 ಕೋಟಿ ಕೊಟ್ಟು ಇಶಾನ್​​ ಕಿಶನ್​ ಖರೀದಿಸಿದ ಆರ್​​ಸಿಬಿ
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಭರ್ಜರಿ ತಯಾರಿ
  • ಐಪಿಎಲ್​ 2025ರ ಮೆಗಾ ಆ್ಯಕ್ಷನ್​​ನಲ್ಲಿ ಇಶಾನ್​​​ ಖರೀದಿಗೆ ಮಾಸ್ಟರ್​ ಪ್ಲಾನ್
  • ಹೈದರಾಬಾದ್​ ನಡೆಸಿದ ಮಾಕ್​ ಆ್ಯಕ್ಷನ್​ನಲ್ಲಿ ಆರ್​​ಸಿಬಿಗೆ ಇಶಾನ್​​ ಕಿಶನ್​

ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್‌ ಲೀಗ್​ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಮೆಗಾ ಹರಾಜಿಗೆ ಕೇವಲ 4 ದಿನಗಳ ಮಾತ್ರ ಬಾಕಿ ಇದೆ. ಈ ಐಪಿಎಲ್​ ಮೆಗಾ ಹರಾಜು ಪ್ರಕ್ರಿಯೆ ಮೇಲೆ ಕ್ರಿಕೆಟ್‌ ಅಭಿಮಾನಿಗಳ ಕಣ್ಣು ನೆಟ್ಟಿದೆ. ಮುಂದಿನ ಸೀಸನ್​​ಗಾಗಿ ಬಲಿಷ್ಠ ತಂಡ ಕಟ್ಟಲು ಎಲ್ಲಾ ತಂಡಗಳು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ಮಧ್ಯೆ ನಡೆದ ಮಾಕ್​​ ಆ್ಯಕ್ಷನ್​​ನಲ್ಲಿ ಆರ್​​​ಸಿಬಿ ತಂಡದ ಸ್ಫೋಟಕ ಬ್ಯಾಟರ್​​ ಇಶಾನ್​ ಕಿಶನ್​ ಅವರನ್ನು ಖರೀದಿ ಮಾಡಿದೆ.

ಮಾಕ್​ ಆ್ಯಕ್ಷನ್​​ನಲ್ಲಿ ಇಶಾನ್​ಗೆ ಆರ್​​ಸಿಬಿ ಮಣೆ

ಇನ್ನು, ಮೆಗಾ ಹರಾಜಿಗೆ ಮುನ್ನ ಸನ್​ರೈಸರ್ಸ್​ ಹೈದರಾಬಾದ್​ ತಂಡದಿಂದ ಮಾಕ್​​​ ಆಕ್ಷನ್​​ ನಡೆಸಲಾಯ್ತು. ಸನ್​ರೈಸರ್ಸ್​ ಹೈದರಾಬಾದ್​ ನಡೆಸಿದ ಮಾಕ್​ ಆ್ಯಕ್ಷನ್​​ನಲ್ಲಿ ಮುಂಬೈ ತಂಡದ ಸ್ಫೋಟಕ ಬ್ಯಾಟರ್​​ ಇಶಾನ್​ ಕಿಶನ್​ ಅವರನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಬರೋಬ್ಬರಿ 10.75 ಕೋಟಿ ನೀಡಿ ಖರೀದಿ ಮಾಡಿದೆ.

2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ರೀಟೈನ್​ ಲಿಸ್ಟ್​​ ರಿಲೀಸ್​ ಮಾಡಿದೆ. ಆರ್​​​ಸಿಬಿ ಟೀಮ್​​​ ಮೊದಲು ರೀಟೈನ್​ ಮಾಡಿಕೊಂಡಿದ್ದು ವಿರಾಟ್​​ ಕೊಹ್ಲಿ. 2ನೇ ಆಯ್ಕೆ ರಜತ್​ ಪಾಟಿದಾರ್​​ ಮತ್ತು 3ನೇ ಆಯ್ಕೆಯಾಗಿ ಯಶ್​ ದಯಾಳ್​​ ಅವರನ್ನು ಉಳಿಸಿಕೊಂಡಿದೆ.

ಆರ್​​ಸಿಬಿ ತಂಡ ವಿರಾಟ್​ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್​ ಪಾಟಿದಾರ್​ ಅವರಿಗೆ 11 ಕೋಟಿ ಮತ್ತು ಯಶ್​ ದಯಾಳ್​ ಅವರಿಗೆ 5 ಕೋಟಿ ನೀಡಿ ರೀಟೈನ್​ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್​​ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ. ಆರ್​​ಸಿಬಿ ಬಳಿ ಈಗ ಪರ್ಸ್​ನಲ್ಲಿ 83 ಕೋಟಿ ಇದೆ.

ಮೆಗಾ ಹರಾಜಿನಲ್ಲಿ ಇಶಾನ್​ ಕಿಶನ್​​

ಆ್ಯಕ್ಷನ್​​ನಲ್ಲಿ ಎಲ್ಲಾ ತಂಡಗಳು ಸ್ಟಾರ್​ ಆಟಗಾರರನ್ನು ಖರೀದಿ ಮಾಡಲು ಭಾರೀ ಸರ್ಕಸ್​ ನಡೆಸುತ್ತಿವೆ. ಮುಂಬೈ ಇಂಡಿಯನ್ಸ್​ ಕೂಡ ಸ್ಟಾರ್​ ಆಟಗಾರರನ್ನು ರೀಟೈನ್​ ಮಾಡಿಕೊಂಡು ಇಶಾನ್​ ಕಿಶನ್ ಅವರನ್ನು ರಿಲೀಸ್​ ಮಾಡಿದೆ. ಹಾಗಾಗಿ ಇವರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮುಂಬೈನಿಂದ ಇಶಾನ್​​ ಔಟ್​

ಇಶಾನ್​​ ಕಿಶನ್​​ ಕಳೆದ ಸೀಸನ್​​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಪರ ಹೇಳಿಕೊಳ್ಳುವಷ್ಟು ಪ್ರದರ್ಶನ ನೀಡಿಲ್ಲ. ಎಷ್ಟೋ ಪಂದ್ಯಗಳಲ್ಲಿ ಇಶಾನ್​​ ಕಿಶನ್​​ ಡಕೌಟ್​ ಕೂಡ ಆಗಿದ್ದರು. ಹಾಗಾಗಿ ಮುಂದಿನ ಸೀಸನ್​ಗೆ ಮುನ್ನವೇ ಇಶಾನ್​ ಕಿಶನ್​ ಅವರನ್ನು ಮುಂಬೈ ಇಂಡಿಯನ್ಸ್​ ರಿಲೀಸ್​ ಮಾಡಿದೆ.

ಇಶಾನ್​ ಕಿಶನ್​​ನತ್ತ ಆರ್​​ಸಿಬಿ ಚಿತ್ತ

ಇದರ ಬೆನ್ನಲ್ಲೇ ರಾಯಲ್‌ ಚಾಲೆಂಜರ್ಸ‌ ಬೆಂಗಳೂರು ತಂಡ ಇಶಾನ್‌ ಕಿಶಾನ್‌ ಅವರನ್ನು ಬಿಡ್‌ ಮಾಡಲು ತಯಾರಿ ನಡೆಸಿಕೊಂಡಿದೆ. 2024ರ ಐಪಿಎಲ್‌ ಬಳಿಕ ಆರ್‌ಸಿಬಿ ಸ್ಟಾರ್​ ಫಿನಿಶರ್​ ದಿನೇಶ್ ಕಾರ್ತಿಕ್ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ರು. ಹೀಗಾಗಿ ಆರ್‌ಸಿಬಿ ಯುವ ಬ್ಯಾಟರ್ ಮತ್ತು ವಿಕೆಟ್‌ ಕೀಪರ್‌ ಹುಡುಕಾಟದಲ್ಲಿದೆ. ಇದರ ಭಾಗವಾಗಿ ಇಶಾನ್‌ ಕಿಶನ್​ ಖರೀದಿಗೆ ಮಾಸ್ಟರ್​ ಪ್ಲಾನ್​ ರೂಪಸಿದೆ.

ಇದನ್ನೂ ಓದಿ: ಮಾಕ್ ಆಕ್ಷನ್‌ನಲ್ಲಿ ಆರ್‌ಸಿಬಿಗೆ ಬಂಪರ್‌: 18 ಕೋಟಿ ನೀಡಿ KL ರಾಹುಲ್​​ ಖರೀದಿಸಿದ ಬೆಂಗಳೂರು

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment