/newsfirstlive-kannada/media/post_attachments/wp-content/uploads/2024/04/KL_RAHUL_RCB.jpg)
ಇತ್ತೀಚೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ತೊರೆದ ಕೆ.ಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರೋ ವಿಚಾರ. ಈ ಮಧ್ಯೆ ಆರ್ಸಿಬಿ ತಂಡ ಮಾಕ್ ಆಕ್ಷನ್‌ನಲ್ಲಿ ರಾಹುಲ್ ಅವರನ್ನು ಖರೀದಿ ಮಾಡಿದೆ.
ಮಾಕ್ ಆಕ್ಷನ್‌ನಲ್ಲಿ ಆರ್‌ಸಿಬಿಗೆ ರಾಹುಲ್
ಇನ್ನು, ಮೆಗಾ ಹರಾಜಿಗೆ ಮುನ್ನ ಸನ್ರೈಸರ್ಸ್ ಹೈದರಾಬಾದ್ ತಂಡದಿಂದ ಮಾಕ್ ಆಕ್ಷನ್ ನಡೆಸಲಾಯ್ತು. ಸನ್ರೈಸರ್ಸ್ ಹೈದರಾಬಾದ್ ನಡೆಸಿದ ಮಾಕ್ ಆಕ್ಷನ್‌ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರೋಬ್ಬರಿ 18 ಕೋಟಿ ನೀಡಿ ಖರೀದಿ ಮಾಡಿದೆ. ಕೆಕೆಆರ್, ಹೈದರಾಬಾದ್, ಮುಂಬೈ, ಬೆಂಗಳೂರು ಫ್ರಾಂಚೈಸಿ ಮಧ್ಯೆ ರಾಹುಲ್ ಖರೀದಿಗೆ ಪೈಪೋಟಿ ನಡೆಯಿತು. ಕೊನೆಗೂ ರಾಹುಲ್ ಆರ್‌ಸಿಬಿಗೆ ಮಾಕ್ ಆಕ್ಷನ್‌ನಲ್ಲಿ ಸಿಕ್ಕರು.
Kl Rahul Sold for 18CR to RCB at Our Mock auctions! pic.twitter.com/r3pWpPUNO1
— SunRisers OrangeArmy Official (@srhfansofficial)
Kl Rahul Sold for 18CR to RCB at Our Mock auctions! pic.twitter.com/r3pWpPUNO1
— SunRisers OrangeArmy Official (@srhfansofficial) November 17, 2024
">November 17, 2024
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ರೀಟೈನ್ ಲಿಸ್ಟ್ ರಿಲೀಸ್ ಮಾಡಿದೆ. ಆರ್ಸಿಬಿ ಟೀಮ್ ಮೊದಲು ರೀಟೈನ್ ಮಾಡಿಕೊಂಡಿದ್ದು ವಿರಾಟ್ ಕೊಹ್ಲಿ. 2ನೇ ಆಯ್ಕೆ ರಜತ್ ಪಾಟಿದಾರ್ ಮತ್ತು 3ನೇ ಆಯ್ಕೆಯಾಗಿ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ.
ಆರ್ಸಿಬಿ ತಂಡ ವಿರಾಟ್ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್ ಪಾಟಿದಾರ್ ಅವರಿಗೆ 11 ಕೋಟಿ ಮತ್ತು ಯಶ್ ದಯಾಳ್ ಅವರಿಗೆ 5 ಕೋಟಿ ನೀಡಿ ರೀಟೈನ್ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ.
ಬೆಂಗಳೂರು ಪ್ಲಾನ್ ಏನು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಹಾಗಾಗಿ ವರ್ಷದ ಕೊನೆ ಡಿಸೆಂಬರ್ನಲ್ಲಿ ನಡೆಯಲಿರೋ 2025ರ ಐಪಿಎಲ್ ಮೆಗಾ ಆಕ್ಷನ್‌ನಲ್ಲಿ ಸ್ಟಾರ್ ಆಟಗಾರರಿಗೆ ಮಣೆ ಹಾಕಬೇಕು. ಈ ಮೂಲಕ ಬಲಿಷ್ಠ ತಂಡ ಕಟ್ಟಬೇಕು ಎಂಬುದು ಆರ್ಸಿಬಿ ಪ್ಲಾನ್. ಅದರಲ್ಲೂ ರಾಹುಲ್ ಖರೀದಿ ಮಾಡಲೇಬೇಕು ಎಂಬುದು ಆರ್ಸಿಬಿ ಸ್ಟ್ರಾಟರ್ಜಿ.
ಆರ್ಸಿಬಿ ಸೇರೋ ಬಗ್ಗೆ ಕೆ.ಎಲ್ ರಾಹುಲ್ ಏನಂದ್ರು?
ಈ ಬಗ್ಗೆ ಹಿಂದೆ ಮಾತಾಡಿದ್ದ ಕೆ.ಎಲ್ ರಾಹುಲ್, ಆರ್ಸಿಬಿ ಬೆಂಗಳೂರು ಫ್ರಾಂಚೈಸಿ. ನಾನು ಬೆಂಗಳೂರು ಹುಡುಗ. ಎಲ್ಲರೂ ನನ್ನ ಲೋಕಲ್ ಬಾಯ್ ಎಂದು ಕರೆಯುತ್ತಾರೆ. 2016 ರಲ್ಲಿ ಆರ್ಸಿಬಿ ಪರ ಆಡಿದ್ದು, ಬಹಳ ಖುಷಿ ತಂದಿತ್ತು. ಮತ್ತೆ ಆರ್ಸಿಬಿ ಸೇರೋ ಆಸೆ ಇದೆ. ಆದರೆ, ಆಕ್ಷನ್‌ನಲ್ಲಿ ಏನಾಗುತ್ತೋ ಕಾದು ನೋಡಬೇಕು ಎಂದರು.
ಇದನ್ನೂ ಓದಿ: ಹರಾಜಿಗೆ ಮುನ್ನ RCB ಮಹತ್ವದ ಹೆಜ್ಜೆ; ಬೆಂಗಳೂರು ತಂಡ ಸೇರಿದ ಚಾಂಪಿಯನ್ ಕೋಚ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್