/newsfirstlive-kannada/media/post_attachments/wp-content/uploads/2023/07/Kohli-chahal.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಪ್ಲಾನ್ ಮಾಡಿಕೊಂಡಿದೆ. ಹಾಗಾಗಿ ಎರಡು ದಿನಗಳ ಕಾಲ ನಡೆದ ಮೆಗಾ ಹರಾಜಿನಲ್ಲಿ ಆರ್ಸಿಬಿ ಸಾಕಷ್ಟು ಅಳೆದುತೂಗಿ ಆಟಗಾರರನ್ನು ಖರೀದಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.
ಮೆಗಾ ಹರಾಜಿಗೆ ಮುನ್ನ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್ ಅವರನ್ನು ಮಾತ್ರ ರೀಟೈನ್ ಮಾಡಿಕೊಂಡ ಆರ್ಸಿಬಿ ಬರೋಬ್ಬರಿ 83 ಕೋಟಿ ಜತೆಗೆ ಅಖಾಡಕ್ಕಿಳಿಯಿತು. ಕಳೆದ ಸೀಸನ್ನಲ್ಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಮಿಂಚಿದ್ದ ಮಿಸ್ಟ್ರಿ ಸ್ಪಿನ್ನರ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಆರಂಭದಲ್ಲಿ ಆರ್ಸಿಬಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಪೋಟಕ ವಿಕೆಟ್ ಕೀಪರ್ ಬ್ಯಾಟರ್ ಫಿಲ್ ಸಾಲ್ಟ್ ಅವರನ್ನು ಖರೀದಿಸಿತ್ತು. ಬಳಿಕ ಕೆಕೆಆರ್ ಕಪ್ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದ ಮಿಸ್ಟ್ರಿ ಸ್ಪಿನ್ನರ್ ಸುಯಾಶ್ ಶರ್ಮಾ ಅವರನ್ನು ಖರೀದಿ ಮಾಡಿದೆ. 30 ಲಕ್ಷ ಮೂಲ ಬೆಲೆ ಹೊಂದಿದ್ದ ಲೆಗ್‌ಸ್ಪಿನ್ನರ್ ಸುಯಾಶ್ ಶರ್ಮಾ ಅವರನ್ನು 2.60 ಕೋಟಿಗೆ ಖರೀದಿ ಮಾಡಿದೆ. ಈ ಮೂಲಕ ತನ್ನ ಬೌಲಿಂಗ್ ವಿಭಾಗವನ್ನು ಬಲಪಡಿಸಿಕೊಂಡಿದೆ.
ಚಹಲ್ಗೆ ರಿಪ್ಲೇಸ್ಮೆಂಟ್ ಸುಯಾಶ್
ಆರ್ಸಿಬಿ ತಂಡ ಮೆಗಾ ಹರಾಜಿನಲ್ಲಿ ಯಜುವೇಂದ್ರ ಚಹಾಲ್ ಅವರನ್ನು ಖರೀದಿ ಮಾಡಲಿಲ್ಲ. ಇದರ ಪರಿಣಾಮ ಐಪಿಎಲ್ ಇತಿಹಾಸದಲ್ಲೇ ಅತಿ ದುಬಾರಿ ಸ್ಪಿನ್ನರ್ ಎನ್ನುವ ದಾಖಲೆಯನ್ನು ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಬರೆದಿದ್ದಾರೆ. ಚಹಾಲ್ ಅವರು 18 ಕೋಟಿಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾದ್ರು. ಇವರ ಮೇಲೆ ಅಷ್ಟು ಕೋಟಿ ಸುರಿಯಲು ಆರ್ಸಿಬಿ ಸಿದ್ಧರಿರಲಿಲ್ಲ. ಹಾಗಾಗಿ ಇವರ ರೀಪ್ಲೇಸ್ಮೆಂಟ್ ಆಗಿ ಸುಯಾಶ್ ಅವರನ್ನು ಖರೀದಿ ಮಾಡಿದೆ. ಇವರು ಕೇವಲ ವಿಕೆಟ್ ಟೇಕರ್ ಮಾತ್ರವಲ್ಲ ಡೇಂಜರಸ್ ಸ್ಪಿನ್ನರ್ ಆಗಿದ್ದಾರೆ.
ಇದನ್ನೂ ಓದಿ:ಫ್ಯಾನ್ಸ್ಗೆ ಗುಡ್ನ್ಯೂಸ್; ಆರ್ಸಿಬಿ ಸೇರಿದ ದಿನವೇ ಬದಲಾಯ್ತು ಈ ಆಟಗಾರನ ಲಕ್!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ