ಕೊನೆಗೂ ಪವರ್​ ಹಿಟ್ಟರ್​​ ಆಟಗಾರನನ್ನು ಖರೀದಿ ಮಾಡಿದ ಆರ್​​ಸಿಬಿ; ಯಾರು ಆ ಸ್ಫೋಟಕ ಬ್ಯಾಟರ್​?

author-image
Ganesh Nachikethu
Updated On
RCB ಅಲ್ಲವೇ ಅಲ್ಲ! ಐಪಿಎಲ್ ಇತಿಹಾಸದಲ್ಲೇ ಕೆಟ್ಟ ಪ್ರದರ್ಶನ ನೀಡ್ತಿರೋ ತಂಡ ಯಾವುದು?
Advertisment
  • 2ನೇ ದಿನದ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜು
  • ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಬಿಗ್​ ಹಿಟ್ಟರ್​​!
  • ಬಿಗ್​​ ಹಿಟ್ಟರ್​​ ಟಿಮ್​ ಡೇವಿಡ್​ ಎಂಟ್ರಿಯಿಂದ ಆರ್​​ಸಿಬಿಗೆ ಪವರ್

ಸದ್ಯ ನಡೆಯುತ್ತಿರೋ 2ನೇ ದಿನದ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜಿನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬಿಗ್​ ಹಿಟ್ಟರ್​​ ಟಿಮ್ ಡೇವಿಡ್​ ಅವರಿಗೆ ಮಣೆ ಹಾಕಿದೆ. ಕೇವಲ 3 ಕೋಟಿಗೆ ಸಿಗಾಂಪುರ ಮೂಲದ ಆಸ್ಟ್ರೇಲಿಯಾದ ಸ್ಟಾರ್​ ಕ್ರಿಕೆಟರ್​ ಟಿಮ್​ ಡೇವಿಡ್​ ಅವರನ್ನು ಖರೀದಿ ಮಾಡಿದೆ.

ಮೊದಲು ಟಿಮ್​ ಡೇವಿಡ್​ ಅವರನ್ನು ಮುಂಬೈ ಇಂಡಿಯನ್ಸ್​, ಸನ್​ರೈಸರ್ಸ್​​ ಹೈದರಾಬಾದ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಸುಮಾರು 2.90 ಕೋಟಿವರೆಗೂ ಬಿಡ್​ ಮಾಡಿದ್ರು. ಕೊನೆಗೆ ಮೂರು ಕೋಟಿಗೆ ಟಿಮ್​ ಡೇವಿಡ್​ ಅವರನ್ನು ಆರ್​ಸಿಬಿ ಬಿಡ್​ ಮಾಡಿದೆ.

publive-image

ಆರ್​​ಸಿಬಿಗೆ ಬಿಗ್​ ಹಿಟ್ಟರ್​

ಬೆಂಗಳೂರು ತಂಡ ಬಿಗ್ ಹಿಟ್ಟರ್​​ಗಳಿಗೆ ಮಣೆ ಹಾಕುತ್ತಲೆ ಬಂದಿದೆ. ಮೆಗಾ ಆಕ್ಷನ್​ನಲ್ಲಿ ಆರ್​​ಸಿಬಿ ಟಿಮ್​​ ಡೇವಿಡ್​ಗೆ ಟಾರ್ಗೆಟ್​ ಮಾಡಲು ಕಾರಣ ಇವರ ಬ್ಯಾಟಿಂಗ್​ ಸ್ಟ್ರೈಕ್ ರೇಟ್‌ ಬರೋಬ್ಬರಿ 170. ಪವರ್​ ಹಿಟ್ಟಿಂಗ್​ಗೆ ಹೆಸರು ಮಾಡಿರೋ ಮಿಡ್ಲ್‌ ಆರ್ಡರ್‌ನಲ್ಲಿ ಫಿನಿಷರ್‌ ಆಗಲಿದ್ದಾರೆ. ಈ ಹಿಂದೆ ಮುಂಬೈ ಇಂಡಿಯನ್ಸ್​ ತಂಡದಿಂದ ಟಿಮ್​ ಡೇವಿಡ್ ರಿಲೀಸ್​ ಆಗಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment