/newsfirstlive-kannada/media/post_attachments/wp-content/uploads/2024/11/Jitesh-Sharma.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟೀಮ್ ಇಂಡಿಯಾದ ವಿಕೆಟ್ ಕೀಪರ್ ಸ್ಫೋಟಕ ಬ್ಯಾಟರ್ ಜಿತೇಶ್ ಶರ್ಮಾ ಅವರನ್ನು ಖರೀದಿ ಮಾಡಿದೆ.
ಜಿತೇಶ್ ಶರ್ಮಾ ಅವರಿಗಾಗಿ ಆರಂಭದಿಂದಲೇ ಸನ್ರೈಸರ್ಸ್ ಹೈದರಾಬಾದ್, ಕೆಕೆಆರ್, ಪಂಜಾಬ್ ಕಿಂಗ್ಸ್, ಆರ್ಸಿಬಿ ಮಧ್ಯೆ ಭಾರೀ ಪೈಪೋಟಿ ನಡೆಯಿತು. ಕೊನೆಗೆ ಜಿತೇಶ್ ಶರ್ಮಾ ಬರೋಬ್ಬರಿ 11 ಕೋಟಿಗೆ ಆರ್ಸಿಬಿ ಪಾಲಾದ್ರು.
ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್ ಜಿತೇಶ್ ಶರ್ಮಾ. ಇವರು ಅದ್ಭುತ ವಿಕೆಟ್ ಕೀಪರ್ ಕೂಡ ಹೌದು. ಇವರು ದಿನೇಶ್ ಕಾರ್ತಿಕ್ ಅವರ ಸ್ಥಾನ ತುಂಬಬಹುದು. ಆರ್‌ಸಿಬಿಗೆ ಇಂಡಿಯನ್ ವಿಕೆಟ್ ಕೀಪರ್ ಅಗತ್ಯ ಇತ್ತು.
ಪಂಜಾಬ್ ಕಿಂಗ್ಸ್ ತಂಡದಿಂದ ಬಿಡುಗಡೆಯಾದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಅವರಿಗೆ ಹರಾಜಿನಲ್ಲಿ ಭಾರೀ ಡಿಮ್ಯಾಂಡ್ ಇತ್ತು. ಕಡಿಮೆ ಬೆಲೆಗೆ ಲಭ್ಯವಿದ್ದರೆ ಜಿತೇಶ್ ಶರ್ಮಾ ಅವರನ್ನು ಎಲ್ಲಾ ತಂಡಗಳು ಖರೀದಿ ಮಾಡಲು ಮುಗಿ ಬಿದ್ದಿದ್ದವು. ಆಕ್ರಮಣಕಾರಿಯಾಗಿ ಆಡುವುದರ ಹೊರತಾಗಿ ಇವರು ವಿಕೆಟ್ ಕೀಪಿಂಗ್ನಲ್ಲೂ ಉತ್ತಮರಾಗಿದ್ದಾರೆ.
ಇದನ್ನೂ ಓದಿ:ಆರ್‌ಸಿಬಿಗೆ ಪವರ್ ಹಿಟ್ಟರ್ ಎಂಟ್ರಿ; ಕೋಟಿ ಕೋಟಿ ಸುರಿದು ಖರೀದಿ ಮಾಡಿದ 2ನೇ ಆಟಗಾರ ಯಾರು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್