/newsfirstlive-kannada/media/post_attachments/wp-content/uploads/2024/11/Phil-Salt.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಟಾರ್ ವಿಕೆಟ್ ಕೀಪರ್ ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್ ಅವರನ್ನು ಖರೀದಿ ಮಾಡಿದೆ.
ಫಿಲ್ ಸಾಲ್ಟ್ ಅವರಿಗಾಗಿ ಆರಂಭದಿಂದಲೇ ಆರ್‌ಸಿಬಿ ಮತ್ತು ಕೆಕೆಆರ್ ಮಧ್ಯೆ ಭಾರೀ ಪೈಪೋಟಿ ನಡೆಯಿತು. ಸುಮಾರು 11 ಕೋಟಿವರೆಗೂ ಕೆಕೆಆರ್ ಬಿಡ್ ಮಾಡಿತು. ಕೊನೆಗೆ ಫಿಲ್ ಸಾಲ್ಟ್ ಬರೋಬ್ಬರಿ 11.50 ಕೋಟಿಗೆ ಆರ್‌ಸಿಬಿ ಪಾಲಾದ್ರು.
ಇನ್ನು, ಫಿಲ್ ಸಾಲ್ಟ್ ಒಬ್ಬ ಅದ್ಭುತ ಬ್ಯಾಟ್ಸ್‌ಮನ್. ಆರ್‌ಸಿಬಿ ಡುಪ್ಲೆಸಿಸ್ ಅವರನ್ನು ಕೈಬಿಟ್ಟಿದ್ದು, ಇವರ ಸ್ಥಾನದಲ್ಲಿ ಸಾಲ್ಟ್ ಸ್ಫೋಟಕ ಓಪನಿಂಗ್ ನೀಡಬಹುದು. ದಿನೇಶ್ ಕಾರ್ತಿಕ್ ನಿರ್ಗಮನದ ನಂತರ ಆರ್‌ಸಿಬಿಗೆ ವಿಕೆಟ್ ಕೀಪರ್ ಅಗತ್ಯವಿದ್ದು, ಆ ಸ್ಥಾನವನ್ನೂ ಇವರು ತುಂಬಲಿದ್ದಾರೆ.
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಆಗುವಲ್ಲಿ ಇಂಗ್ಲೆಂಡ್ ಅಗ್ರಕ್ರಮಾಂಕದ ಬ್ಯಾಟರ್ ಫಿಲ್ ಸಾಲ್ಟ್ ಪ್ರಮುಖ ಪಾತ್ರ ವಹಿಸಿದ್ದರು. ಸಾಲ್ಟ್ ಕೂಡಾ ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಮೊದಲೇ ಇತ್ತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್