newsfirstkannada.com

ಆರ್​​ಸಿಬಿಗೆ ಕೈ ಕೊಟ್ಟ ಸ್ಫೋಟಕ ಬ್ಯಾಟರ್ಸ್​​.. ರಾಜಸ್ಥಾನ್​​ಗೆ ಕೇವಲ 173 ರನ್​ಗಳ ಟಾರ್ಗೆಟ್​

Share :

Published May 22, 2024 at 9:22pm

    ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್​​

    ಇಂದು ರಾಜಸ್ಥಾನ್​​​ ರಾಯಲ್ಸ್​, ಬೆಂಗಳೂರು ಟೀಮ್​ ಮಧ್ಯೆ ರೋಚಕ ಪಂದ್ಯ

    ರೋಚಕ ಪಂದ್ಯದಲ್ಲಿ ರಾಜಸ್ಥಾನ್​ಗೆ ಸಾಧಾರಣ ಟಾರ್ಗೆಟ್​ ಕೊಟ್ಟ ಆರ್​​ಸಿಬಿ!

ಇಂದು ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​​ ಸ್ಟೇಡಿಯಮ್​ನಲ್ಲಿ ನಡೆದ 2024ರ ಇಂಡಿಯನ್​ ಪ್ರೀಮಿಯರ್​ 17ನೇ ಸೀಸನ್​​ ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ್​​ ರಾಯಲ್ಸ್​ಗೆ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು 173 ರನ್​ಗಳ ಗುರಿ ನೀಡಿದೆ.

ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್​ ತಂಡದ ಕ್ಯಾಪ್ಟನ್​ ಸಂಜು ಸ್ಯಾಮ್ಸನ್​​​ ಬೌಲಿಂಗ್​​ ಆಯ್ಕೆ ಮಾಡಿಕೊಂಡರು. ಹಾಗಾಗಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ನಾಯಕತ್ವದ ಆರ್​ಸಿಬಿ ಫಸ್ಟ್​ ಬ್ಯಾಟಿಂಗ್​ ಮಾಡಬೇಕಾಯ್ತು.

ಆರ್​​ಸಿಬಿ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಕೇವಲ 14 ಬಾಲ್​ನಲ್ಲಿ 17 ರನ್​ ಗಳಿಸಿ ಔಟಾದ್ರು. ಈ ಪೈಕಿ 1 ಸಿಕ್ಸರ್​​, 2 ಫೋರ್​ ಗಳಿಸಿದ್ರು. ಬೌಂಡರಿ ಬಾರಿಸಲು ಹೋಗಿ ಟ್ರೆಂಟ್​​ ಬೌಲ್ಟ್​ ಓವರ್​ನಲ್ಲಿ ಕ್ಯಾಚ್​ ನೀಡಿದ್ರು.

ಇವರ ಬಳಿಕ ಜವಾಬ್ದಾರಿಯುತವಾಗಿ ಬ್ಯಾಟ್​ ಬೀಸಿದ್ದ ವಿರಾಟ್​ ಕೊಹ್ಲಿ 24 ಬಾಲ್​ನಲ್ಲಿ 33 ರನ್​ ಗಳಿಸಿ ವಿಕೆಟ್​ ಒಪ್ಪಿಸಿದ್ರು. ಚಹಾಲ್​ ಬೌಲಿಂಗ್​ನಲ್ಲಿ ಸಿಕ್ಸ್​ ಬಾರಿಸಲು ಹೋಗಿ ಕ್ಯಾಚ್​ ಕೊಟ್ಟರು. ಈ ಪೈಕಿ ಕೊಹ್ಲಿ 1 ಸಿಕ್ಸರ್​​, 3 ಫೋರ್​​ ಬಾರಿಸಿದ್ರು.

ಬಳಿಕ ಬಂದ ಕ್ಯಾಮೆರಾನ್​ ಗ್ರೀನ್​ 21 ಬಾಲ್​ನಲ್ಲಿ 1 ಸಿಕ್ಸರ್​​, 2 ಫೋರ್​ ಸಮೇತ 27 ರನ್​ ಸಿಡಿಸಿದ್ರು. ರಜತ್​ ಪಾಟಿದಾರ್​​ 22 ಬಾಲ್​ನಲ್ಲಿ 2 ಸಿಕ್ಸರ್​​, 2 ಫೋರ್​ ಸಮೇತ 34 ರನ್​ ಚಚ್ಚಿದ್ರು. ಮಹಿಪಾಲ್​ ಲೋಮ್ರೋರ್​​ 17 ಬಾಲ್​ನಲ್ಲಿ 2 ಸಿಕ್ಸರ್​​, 2 ಫೋರ್​ ಸಮೇತ 32 ರನ್​ ಬಾರಿಸಿದ್ರು. ದಿನೇಶ್​ ಕಾರ್ತಿಕ್​​ ಕೇವಲ 11 ರನ್​ಗೆ ವಿಕೆಟ್​ ಒಪ್ಪಿಸಿದ್ರು. ಆರ್​​ಸಿಬಿ ನಿಗದಿತ 20 ಓವರ್​ನಲ್ಲಿ 8 ವಿಕೆಟ್​ ನಷ್ಟಕ್ಕೆ 172 ರನ್​ ಕಲೆ ಹಾಕಿದೆ.

ಇದನ್ನೂ ಓದಿ: ಆರ್​​​ಸಿಬಿಗೆ ಬಿಗ್​ ಶಾಕ್​​.. ಪ್ಲೇ ಆಫ್​ ಪಂದ್ಯಕ್ಕೆ ಕೈ ಕೊಟ್ಟ ಕೊಹ್ಲಿ, ಕ್ಯಾಪ್ಟನ್​ ಫಾಫ್​​; ಏನಾಯ್ತು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​​ಸಿಬಿಗೆ ಕೈ ಕೊಟ್ಟ ಸ್ಫೋಟಕ ಬ್ಯಾಟರ್ಸ್​​.. ರಾಜಸ್ಥಾನ್​​ಗೆ ಕೇವಲ 173 ರನ್​ಗಳ ಟಾರ್ಗೆಟ್​

https://newsfirstlive.com/wp-content/uploads/2024/05/RCB-Less-target.jpg

Load More