/newsfirstlive-kannada/media/post_attachments/wp-content/uploads/2025/03/RCB_BATTING.jpg)
ಐಪಿಎಲ್ ಮೆಗಾ ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಚಿನ್ನಸ್ವಾಮಿಯಲ್ಲಿ ಭರ್ಜರಿ ಸಮರಾಭ್ಯಾಸ ನಡೆಸುತ್ತಿದೆ. ಇದುವರೆಗೂ ಒಂದೇ ಒಂದು ಬಾರಿ ಕಪ್ ಗೆಲ್ಲದ ಆರ್ಸಿಬಿ, ಈ ಬಾರಿ ಕಪ್ ಗೆಲ್ಲಲೇಬೇಕು ಅಂತ ಶಪಥ ಮಾಡಿದೆ. ಆದ್ರೆ ರೆಡ್ ಆರ್ಮಿ ಕಪ್ ಗೆಲ್ಲಬೇಕಾದ್ರೆ, ಮೊದಲು 4 ವಿದೇಶಿ ಆಟಗಾರರನ್ನ ಯುದ್ಧಕ್ಕೆ ರೆಡಿ ಮಾಡಬೇಕಿದೆ. ಆದ್ರೆ ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಅದೇ ದೊಡ್ಡ ಟಾಸ್ಕ್ ಆಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದು ನಮ್ಮ ಕನ್ನಡಿಗರ ಹೆಮ್ಮೆಯ ತಂಡ. ಆರ್ಸಿಬಿ ಅಂದ್ರೆ ಅಭಿಮಾನಿಗಳಿಗೆ ಗೌರವ, ಹುಚ್ಚು ಪ್ರೀತಿ. ಆರ್ಸಿಬಿಗಿರೋ ಲಾಯಲ್ ಫ್ಯಾನ್ಸ್, ಬೇರೆ ಯಾವ ತಂಡಕ್ಕೂ ಇಲ್ಲ. ಆರ್ಸಿಬಿ ಫ್ರಾಂಚೈಸಿ ಮಾಲೀಕರು ಅದ್ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ರೋ ಗೊತ್ತಿಲ್ಲ, ಇಂತಹ ನಿಸ್ವಾರ್ಥ ಅಭಿಮಾನಿಗಳನ್ನ ಪಡೆಯೋಕೆ.
ಅಭಿಮಾನಿಗಳ ಪ್ರೀತಿ, ಬೆಂಬಲ, ಆಶಿರ್ವಾದ ಇರೋ ಆರ್ಸಿಬಿಗೆ, ಅದ್ಯಾಕೋ ಅದೃಷ್ಟವೇ ಇಲ್ಲ. 17 ವರ್ಷಗಳಿಂದ ಎಷ್ಟೇ ಪ್ರಯತ್ನ ಪಟ್ರು, ಕಪ್ ಗೆಲ್ಲೋಕೆ ಆಗ್ತಿಲ್ಲ. ಆದ್ರೀಗ ಆರ್ಸಿಬಿಗೆ ಕಪ್ ಗೆಲ್ಲೋಕೆ ಗೋಲ್ಡನ್ ಚಾನ್ಸ್ ಇದೆ. ಹಾರಾಜಿನಲ್ಲಿ 8 ಮಂದಿ ವಿದೇಶಿ ಆಟಗಾರರನ್ನ ಖರೀದಿಸಿರುವ ಆರ್ಸಿಬಿ ಫ್ರಾಂಚೈಸಿ, 4 ಮಂದಿ ಬೆಸ್ಟ್ ಆಟಗಾರರನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಕಣಕ್ಕಿಳಿಸಬೇಕಿದೆ. ಇದು ಸಕ್ಸಸ್ ಆದ್ರೆ, ಈ ಸಲ ಕಮ್ ನಮ್ದೆ.
ಫಿಲ್ ಸಾಲ್ಟ್ ಯಾಕೆ..? ಜಿತೇಶ್ ಶರ್ಮಾ ಓಕೆ..!
ಇಂಗ್ಲೆಂಡ್ನ ಡೇಂಜರಸ್ ಬ್ಯಾಟರ್ ಫಿಲ್ ಸಾಲ್ಟ್, T20 ಕ್ರಿಕೆಟ್ಗೆ ಹೇಳಿ ಮಾಡಿಸಿದ ಆಟಗಾರ. ಆದ್ರೆ ಆರ್ಸಿಬಿ ಫಿಲ್ ಸಾಲ್ಟ್ನ ಕಣಕ್ಕಿಳಿಸಿದ್ರೆ, ಎಡವೋದು ಗ್ಯಾರಂಟಿ. ಯಾಕಂದ್ರೆ ತಂಡದಲ್ಲಿ ಆಲ್ರೆಡಿ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಇರೋದ್ರಿಂದ, ಫಿಲ್ ಸಾಲ್ಟ್ನ ಆಡಿಸಿದ್ರೆ ಕಾಂಬಿನೇಷನ್ ಎಡವಟ್ಟಾಗುತ್ತದೆ. ಜಿತೇಶ್ ಶರ್ಮಾ ಕೂಡ, T20 ಫಾರ್ಮೆಟ್ಗೆ ಫಿಟ್ ಆಗೋ ಆಟಗಾರ.
ಆರ್ಸಿಬಿಗೆ ಬೇಕು ಆಲ್ರೌಂಡರ್ಸ್ ಬಲ..!
T20 ಕ್ರಿಕೆಟ್ಗೆ ಆಲ್ರೌಂಡರ್ಸ್ ಬೇಕೇ ಬೇಕು. ಆಲ್ರೌಂಡರ್ಸ್ ತಂಡಕ್ಕೆ ಬಲ ಹೆಚ್ಚಿಸುತ್ತಾರೆ. ಈ ಬಾರಿ ಆರ್ಸಿಬಿ ತಂಡಕ್ಕೆ ಎಂಟ್ರಿ ಆಗಿರೋ ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ರೊಮೆರಿಯೋ ಶಪರ್ಡ್, ಪ್ಲೇಯಿಂಗ್ ಇಲೆವೆನ್ನಲ್ಲಿ ಈಸಿಯಾಗಿ ಫಿಟ್ ಆಗೋ ಆಟಗಾರರು. ಇವರು ಅಬ್ಬರಿಸಿದ್ರೆ ಎದುರಾಳಿಗಳು ಉಡೀಸ್. ಸೋ.. ಆರ್ಸಿಬಿ ಕಪ್ ಗೆಲ್ಲೋಕೆ ಇವರ ಕಾಂಟ್ರಿಬ್ಯೂಷನ್ ಬೇಕೇಬೇಕು.
ಟಿಮ್ ಡೇವಿಡ್ ವರ್ಸಸ್ ಜೇಕಬ್ ಬೆಥಲ್ ನಡುವೆ ಫೈಟ್..?
ಬಿಗ್ ಹಿಟ್ಟರ್ ಟಿಮ್ ಡೇವಿಡ್ ಮತ್ತು ಜೇಕಬ್ ಬೆಥಲ್, ಆರ್ಸಿಬಿಯ ಸೀಕ್ರೆಟ್ ವೆಪನ್ಸ್. ಟಿಮ್ ಡೇವಿಡ್ ಪವರ್ ಹಿಟ್ಟರ್ ಹಾಗೇ ಮ್ಯಾಚ್ ಫಿನಿಷರ್. ಮತ್ತೊಂದೆಡೆ ಬೆಥಲ್, ಮಿಡಲ್ ಆರ್ಡರ್ನಲ್ಲಿ ಅದ್ಭುತ ಬ್ಯಾಟಿಂಗ್ ನಡೆಸುವ ಚತುರ. ಹಾಗೆ ತನ್ನ ಎಡಗೈ ಸ್ಪಿನ್ನಿಂದ ಎದುರಾಳಿಗಳಿಗೆ ಚಮಕ್ ಕೊಡೋ ಯುವ ಆಟಗಾರ. ಆದ್ರೆ ಆರ್ಸಿಬಿ ಮುಂಬರುವ ಐಪಿಎಲ್ನಲ್ಲಿ ಯೋಚನೆ ಮಾಡಿ, ಇಬ್ಬರಲ್ಲಿ ಒಬ್ಬರನ್ನ ಆಯ್ಕೆ ಮಾಡಬೇಕಿದೆ.
ತಂಡಕ್ಕೆ ಜೋಷ್ ತುಂಬಲು ವೇಗಿ ಹೇಝಲ್ವುಡ್ ರೆಡಿ..!
ಆಸ್ಟ್ರೇಲಿಯಾದ ಅನುಭವಿ ವೇಗಿ ಜೋಷ್ ಹೇಝಲ್ವುಡ್, ಸೌತ್ ಆಫ್ರಿಕಾದ ಲುಂಗಿ ಎನ್ಗಿಡಿ ಮತ್ತು ಲಂಕಾದ ನುವಾನ್ ತುಷಾರ, ಆರ್ಸಿಬಿ ಕ್ಯಾಂಪ್ನಲ್ಲಿ ಕಾಣಿಸಿಕೊಂಡಿರೋ ಸ್ಟಾರ್ ಪೇಸರ್ಸ್. ಹೇಝಲ್ವುಡ್ ಆರ್ಸಿಬಿಯ ಫಸ್ಟ್ ಚಾಯ್ಸ್ ಪೇಸರ್. ಆದ್ರೆ ಲುಂಗಿ ಎನ್ಗಿಡಿ ಮತ್ತು ತುಷಾರ, ಪ್ಲೇಯಿಂಗ್ ಇಲೆವನ್ನಲ್ಲಿ ಆಡೋದು ಡೌಟ್. ಹಾಗಾಗಿ ಇವರಿಬ್ಬರು ತಮ್ಮ ಅವಕಾಶಕ್ಕಾಗಿ ಕಾಯಬೇಕಿದೆ.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಗೆ ಕ್ರೂರ ಕಿರುಕುಳ -ಭಾರತದ ಮಾಜಿ ಆಟಗಾರನಿಂದ ಶಾಕಿಂಗ್ ಹೇಳಿಕೆ
ಪರ್ಫೆಕ್ಟ್ 4 ಇದ್ರೆ ಗೆಲುವು..! ಎಡವಿದ್ರೆ ಸೋಲು ಖಚಿತ..!
ಹರಾಜಿನಲ್ಲಿ ಆರ್ಸಿಬಿ 8 ಮಂದಿ ವಿದೇಶಿ ಆಟಗಾರರನ್ನ ಖರೀದಿಸಿದೆ. ಎಲ್ಲರೂ ಒಬ್ಬರಿಗಿಂತ ಒಬ್ಬರು ಬೆಸ್ಟ್ ಪ್ಲೇಯರ್ಸೇ. ಆದ್ರೆ ಆರ್ಸಿಬಿ ಮ್ಯಾನೇಜ್ಮೆಂಟ್ ಈ 8 ಮಂದಿ ಆಟಗಾರರಲ್ಲಿ, ಪ್ಲೇಯಿಂಗ್ ಇಲೆವೆನ್ಗೆ ಪರ್ಫೆಕ್ಟ್ ಫೋರ್ ಸೆಲೆಕ್ಟ್ ಮಾಡಿದ್ರೆ, ತಂಡಕ್ಕೆ ಗೆಲವು ಕಷ್ಟವೇನಲ್ಲ. ಅದು ಅಷ್ಟು ಸುಲಭವಲ್ಲ. ಆದ್ರೆ ಆರ್ಸಿಬಿ ಮ್ಯಾನೇಜ್ಮೆಂಟ್, ವಿದೇಶಿ ಆಟಗಾರರ ಆಯ್ಕೆಯಲ್ಲಿ ಯಾವುದೇ ಕಾರಣಕ್ಕೂ ಎಡವುವಂತಿಲ್ಲ.
ಪರ್ಫೆಕ್ಟ್ ಪ್ಲೇಯಿಂಗ್ ಇಲೆವೆನ್ ಇದ್ರೆ, ಗೆಲುವು ಕಷ್ಟವೇನಲ್ಲ ಅನ್ನೋದನ್ನ ಆರ್ಸಿಬಿ ಮ್ಯಾನೇಜ್ಮೆಂಟ್ ಅರ್ಥ ಮಾಡಿಕೊಳ್ಳಬೇಕು. ಈ ಹಿಂದೆ ಆರ್ಸಿಬಿ ತಂಡದ ಆಯ್ಕೆಯಲ್ಲಿ ಎಡವಿ ಸೋಲು ಅನುಭವಿಸಿತ್ತು. ಆದ್ರೆ ಆ ತಪ್ಪನ್ನ ಮತ್ತೆ ಮಾಡಬಾರದಷ್ಟೇ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ